ಪುತ್ತೂರು ತಾಲೂಕಿನ ಪಡುಮಲೆ ನಿವಾಸಿಯಾಗಿದ್ದ ಶ್ರೀ ಭಾಸ್ಕರ ರಾವ್ (63 ವರ್ಷ) ಇವರು ದಿನಾಂಕ 07-12-2024ರಂದು ಅಪರಾಹ್ನ ನಿಧನರಾಗಿರುತ್ತಾರೆ. ಇವರು ಪಡುಮಲೆಯ ಶ್ರೀ ಕೂವೆ ಶಾಸ್ತಾರ ಶ್ರೀ ವಿಷ್ಣುಮೂರ್ತಿ ದೇವಳದಲ್ಲಿ ಸುಮಾರು 35 ವರುಷಗಳ ಸುಧೀರ್ಘ ಅವಧಿಯಲ್ಲಿ ದೇವರ ಮತ್ತು ದೈವಗಳ ಸೇವೆ ಸಲ್ಲಿಸಿ, ಇತ್ತೀಚೆಗೆ ಸ್ವಯಂನಿವೃತ್ತಿ ಪಡೆದಿದ್ದರು. ಇವರು ಪತ್ನಿ ಶಾಂತಾ ಕುಮಾರಿ, ಪುತ್ರ ಮನೋಜ್ ಕುಮಾರ್, ಇಬ್ಬರು ಸಹೋದರರು, ಇಬ್ಬರು ಸಹೋದರಿಯರು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.