ಪವಿತ್ರ ಉಮ್ರಾ ಯಾತ್ರೆ ಕೈಗೊಳ್ಳುತ್ತಿರುವ ಶಾಸಕರ ಮಾಧ್ಯಮ ಪ್ರತಿನಿಧಿ, ಪತ್ರಕರ್ತ ಸಿದ್ದಿಕ್ ಕುಂಬ್ರರವರಿಗೆ ಬೀಳ್ಕೊಡುಗೆ

ಪುತ್ತೂರು

news-details

ಪವಿತ್ರವಾದ ಉಮ್ರಾ ಯಾತ್ರೆ ಕೈಗೊಳ್ಳುತ್ತಿರುವ ಪತ್ರಕರ್ತ,ಶಾಸಕರ ಮಾಧ್ಯಮ ಪ್ರತಿನಿಧಿ ಸಿದ್ದಿಕ್ ಕುಂಬ್ರರವರಿಗೆ ಮಾಧ್ಯಮ ಪ್ರತಿನಿಧಿ ಮತ್ತು ಸ್ನೇಹಿತರ ವತಿಯಿಂದ ಬೀಳ್ಕೊಡುಗೆ ಸಮಾರಂಭ ದ.10 ರಂದು ಕುಂಬ್ರ ದಲ್ಲಿ ನಡೆಯಿತು.
ತನ್ನ ಪತ್ನಿ ಹಾಗೂ ಪುತ್ರನೊಂದಿಗೆ ದ.12 ರಂದು ಸಿದ್ದಿಕ್ ಕುಂಬ್ರರವರು ಪವಿತ್ರ ಉಮ್ರಾ ಯಾತ್ರೆ ಕೈಗೊಳ್ಳುತ್ತಿದ್ದಾರೆ. ಇವರ ಯಾತ್ರೆಯು ಸುಖಕರವಾಗಿರಲಿ ಎಂದು ಈ ಸಂದರ್ಭದಲ್ಲಿ ಶುಭ ಹಾರೈಸಲಾಯಿತು. ಈ ಸಂದರ್ಭದಲ್ಲಿ ಪತ್ರಕರ್ತರಾದ ಸಿಶೇ ಕಜೆಮಾರ್, ಯೂಸುಫ್ ರೆಂಜಲಾಡಿ, ದಿನೇಶ್ ಬಡಗನ್ನೂರು ಹಾಗೂ ಹೊಟೇಲ್ ಉದ್ಯಮಿ ರಫೀಕ್ ಅಲ್‌ರಾಯ ಉಪಸ್ಥಿತರಿದ್ದರು.

news-details