ಮಂಗಳ ಸಮೂಹ ವಿದ್ಯಾ ಸಂಸ್ಥೆ : ವಿಶ್ವ ಏಡ್ಸ್ ದಿನಾಚರಣೆ

ಮಂಗಳೂರು

news-details

ನ್ಯೂ ಮಂಗಳ ಕಾಲೇಜ್ ಆಫ್ ನರ್ಸಿಂಗ್ ಮತ್ತು ಮಂಗಳ ಸ್ಕೂಲ್ ಆಫ್ ನರ್ಸಿಂಗ್ ನ ಸಮುದಾಯ ಆರೋಗ್ಯ ಶುಶ್ರೂಷಾ ವಿಭಾಗ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ವಿಶ್ವ ಏಡ್ಸ್ ದಿನಾಚರಣೆಯನ್ನು ಕರ್ನಾಟಕ ಸಾರಿಗೆ ಸಂಸ್ಥೆ ಬಸ್ ನಿಲ್ದಾಣ, ಲಾಲ್ ಬಾಗ್, ಮಂಗಳೂರುನಲ್ಲಿ ಡಿ.10ರಂದು ಆಯೋಜಿಸಲಾಯಿತು.

ಏಡ್ಸ್ ದಿನಾಚರಣೆಯ ಮಹತ್ವ ಮತ್ತು ಏಡ್ಸ್ ತಡೆಗಟ್ಟುವ ಬಗ್ಗೆ ಕಿರು ನಾಟಕ, ಏಡ್ಸ್ ರೋಗದ ಬಗ್ಗೆ ಜಾಗೃತಿಮೂಡಿಸುವ ಹಾಡನ್ನು ರಚಿಸಿ ಹಾಡಿ, ಜನ ಸಮೂಹ (ಫ್ಲ್ಯಾಶ್ ಮೋಬ್) ನ್ನು ಪ್ರಥಮ ವರ್ಷದ ಜಿ ಎನ್ ಎಂ ನರ್ಸಿಂಗ್ ವಿದ್ಯಾರ್ಥಿಗಳು ಪ್ರದರ್ಶಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.

ಸಮುದಾಯ ಆರೋಗ್ಯ ಶುಶ್ರೂಷಾ ವಿಭಾಗದ ಮುಖ್ಯಸ್ಥೆ ಪ್ರೊ|ಶ್ವೇತ ಕಿರಣ್, ಎನ್ ಎಸ್ ಎಸ್ ಘಟಕದ ಅಧಿಕಾರಿ ಶ್ರೀ.ನವೀನ್. ಪಿ ಮತ್ತು ಉಪನ್ಯಾಸಕರಾದ ಕುಮಾರಿ ಅಕ್ಷೀ ತಾ, ಕುಮಾರಿ ಕೃಷ್ಣ ಪ್ರಿಯ ಉಪಸ್ಥಿತರಿದ್ದರು .

ನರ್ಸಿಂಗ್ ವಿದ್ಯಾರ್ಥಿಗಳಾದ ದರ್ಶನ್ ಸ್ವಾಗತಿಸಿ, ಕುಮಾರಿ ಪರೀಕ್ಷಿತಾ ಕಾರ್ಯಕ್ರಮ ನಿರೂಪಿಸಿದರು.

news-details