<p>ಸಾಮಾಜಿಕ ಸೇವಾ ಮನೋಭಾವನೆಯಿಂದ ಸ್ಥಾಪನೆಗೊಂಡ ಬೆಸೆಂಟ್ ಇವ್ನಿಂಗ್ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಇದರ ಉದ್ಘಾಟನೆಯನ್ನು ಬೆಸೆಂಟ್ ಮಹಿಳಾ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲರಾದ ಡಾ. ಸತೀಶ್ ಕುಮಾರ್ ಶೆಟ್ಟಿ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು ಮತ್ತು ತಾನು ಕಳಿಸಿದ ವಿದ್ಯಾರ್ಥಿಗಳು ಸೇರಿಕೊಂಡು ಇಂತಹ ಸಮಾಜ ಸೇವಾ ಟ್ರಸ್ಟ್ ಮಾಡಿಕೊಂಡು ಸಮಾಜಕ್ಕೆ ತಮ್ಮ ಸೇವೆಯನ್ನು ಮಾಡುತ್ತಿರುವುದು ತುಂಬಾ ಸಂತೋಷದ ವಿಷಯ ಎಂದರು ಮತ್ತು ಇದೇ ಸಂದರ್ಭದಲ್ಲಿ ಸಮಾಜ ಸೇವೆಯ ಜೊತೆಯಲ್ಲಿ ತಮ್ಮ ತಮ್ಮ ಆರೋಗ್ಯದ ಕುರಿತು ಕೂಡ ಗಮನ ಹರಿಸುವುದು ಮುಖ್ಯ ಎನ್ನುವ ಅಭಿಪ್ರಾಯ ಪಟ್ಟರು. </p>
<p>ಟ್ರಸ್ಟ್ ನ ಲಾಂಛನವನ್ನು ಲಯನ್ ಶ್ರೀ ಕಿಶೋರ್ ಡಿ ಶೆಟ್ಟಿ ಬಿಡುಗಡೆಗೊಳಿಸಿ ಒಂದು ಕಾಲೇಜಿನಲ್ಲಿ ಕಲಿತ ವಿದ್ಯಾರ್ಥಿಗಳು ಜೊತೆ ಸೇರಿಕೊಂಡು ಇಂತಹ ಸಮಾಜ ಸೇವಾ ಕಾರ್ಯಕ್ರಮ ದಲ್ಲಿ ತೊಡಗಿಕೊಂಡಿರುವುದು ನಿಜವಾಗಿಯೂ ಸ್ವಾಗತರ್ಹ ಮತ್ತು ಇಂತಹ ಕಾರ್ಯಕ್ರಮಗಳಿಗೆ ಸದಾ ಬೆಂಬಲ ಇರುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಟ್ರಸ್ಟ್ ಅಕೌಂಟ್ ನ scanner ನ್ನು ಟ್ರಸ್ಟ್ ನ ಗೌರವಾಧ್ಯಕ್ಷರಾದ ಶ್ರೀ ಶಿವಪ್ರಸಾದ್ ಶೆಟ್ಟಿ ಅವರು ಟ್ರಸ್ಟ್ ಅಕೌಂಟ್ ಗೆ ಮೊದಲ ಸಹಾಯಧನ ಜಮೆ ಮಾಡಿ ಚಾಲನೆ ನೀಡಿದರು. ಈ ಸಂದರ್ಭ ಬೆಸೆಂಟ್ ವಿದ್ಯಾಸಂಸ್ಥೆಯ ಬಳಿ ವಾಹನ ದಟ್ಟಣೆ ಇರುವ ಸಂದರ್ಭದಲ್ಲಿ ಸುಗುಮ ಸಂಚಾರಕ್ಕಾಗಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸಾಮಾಜಿಕ ನೆಲೆಯಲ್ಲಿ ಸಮಾಜ ಸೇವೆ ಮಾಡುತ್ತಿರುವ ವೃತ್ತಿಯಲ್ಲಿ ರಿಕ್ಷ ಚಾಲಕರಾಗಿ ದುಡಿಮೆ ಮಾಡುತ್ತಿರುವ ಕಾವೂರು ಗಾಂಧಿನಗರ ನಿವಾಸಿ ರಮೇಶ್ ಇವರನ್ನು ಸನ್ಮಾನಿಸಲಾಯಿತು ಮತ್ತು ಅವರ ಪರಿಚಯವನ್ನು ಶ್ರೀ ಮುರಳೀಧರ ಪೂಜಾರಿ ನೆರವೇರಿಸಿದರು. ಟ್ರಸ್ಟ್ ಸದಸ್ಯರನ್ನು ಶ್ರೀ ನೀಲೇಶ್ ಬೋಳೂರು ಪರಿಚಯಿಸಿದರು. ಗೌರವ ಅಧ್ಯಕ್ಷರು : ಶ್ರೀ ಶಿವಪ್ರಸಾದ್ ಶೆಟ್ಟಿ. ಅಧ್ಯಕ್ಷರು : ಶ್ರೀ ಪ್ರಸಾದ್ ಮರೋಳಿ., ಕಾರ್ಯದರ್ಶಿ: ಶ್ರೀ ನವೀನ್ ಸಾಲ್ಯಾನ್. ಖಜಾಂಜಿ: ಶ್ರೀ ಸುಧೀರ್ ಕದ್ರಿ. ಟ್ರಸ್ಟಿಗಳು. <br />
ಶ್ರೀ ನಿಲೇಶ್ ಕುಮಾರ್, ಶ್ರೀ ಅಜಯ್ ಪಟೇಲ್, ಶ್ರೀ ಸುಮಂತ್ ರಾವ್, ಶ್ರೀ ಗಣೇಶ್ ಕಾಮತ್, ಶ್ರೀ ಸುಧೀರ್ ಬೋಳೂರ್, ಶ್ರೀ ಸತೀಶ್ ಉರ್ವಸ್ಟೋರ್, ಶ್ರೀ ನವೀನ್ ಕಾವೂರು, ಶ್ರೀ ರಘುವೀರ್ ಬಾಬುಗುಡ್ಡೆ, ಶ್ರೀ ತಾರಾನಾಥ ಯು ಉರ್ವ, ಶ್ರೀ ಮುರಳೀಧರ್ ಪೂಜಾರಿ ಸುರತ್ಕಲ್, ಶ್ರೀ ಅಶೋಕ್ ಎಸ್ ಕಾವೂರು, ಶ್ರಿ ಸುಧೀರ್ ಕೆ. ಬಜಾಲ್, ಶ್ರೀ ಶ್ರೀಧರ ಎಣ್ಮ ಕಜೆ, ಶ್ರೀ ಶಿವಶಂಕರ್ ಸುರತ್ಕಲ್, ಶ್ರೀ ಮಹೇಶ್ ಕೆ. ಉರ್ವಸ್ಟೋರ್, ಶ್ರೀ ಅರುಣ್ ಬ್ಯಾಪ್ತಿಸ್ಟ್. ಉರ್ವ ಸ್ಟೋರ್.<br />
ಟ್ರಸ್ಟ್ ಸದಸ್ಯರಾದ ಶಿವಶಂಕರ್ ಪ್ರಾರ್ಥಿಸಿದರು ಟ್ರಸ್ಟ್ ನ ಕಾನೂನು ಸಲಹೆಗಾರರಾದ ಶ್ರೀಧರ್ ಎಣ್ಮಕಜೆ ಪ್ರಸಾವಣೆಗೈದು ಸಮಾಜದಲ್ಲಿ ಜಾತಿ ಮತ ಭೇದ ಇಲ್ಲದೆ ಸುಖ ದುಃಖದ ಸಮಯದಲ್ಲಿ ಪಾಲ್ಗೊಳ್ಳುವವನೇ ನಿಜವಾದ ಗೆಳೆಯ ಮತ್ತು ಇದೇ ಉದ್ದೇಶದಿಂದ ರಚಿಸಲ್ಪಟ್ಟ ಟ್ರಸ್ಟನ ದ್ಯೇಯ ಉದ್ದೇಶಗಳನ್ನು ತಿಳಿಸಿದರು. ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ ಪ್ರಸಾದ್ ಮರೋಳಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ತಾನು ಸಮಾಜದಿಂದ ಏನನ್ನು ಪಡೆದೆ ಎನ್ನುವುದಕ್ಕಿಂತ ಸಮಾಜಕ್ಕೆ ನಾನು ಏನು ಕೂಟ್ಟಿದ್ದೇನೆ ಎನ್ನುವುದು ಮುಖ್ಯ, ಹಾಗಾಗಿ ಕಷ್ಟ ಸುಖಗಳಲ್ಲಿ ಪಾಲ್ಗೊಂಡು ಸಹರಿಸುವುದೇ ನಿಜವಾದ ಸಮಾಜ ಸೇವೆ ಎನ್ನುತ್ತಾ ಮುಂದಿನ ದಿನಗಳಲ್ಲಿ ಉತ್ತಮ ಸೇವೆ ಮಾಡುವುದಕ್ಕೆ ಎಲ್ಲರ ಸಹಕಾರ ಮುಖ್ಯ ಮತ್ತು ತಮ್ಮೆಲ್ಲರ ಪಾಲ್ಗೊಳ್ಳಯುವಿಕೆ ಯಿಂದ ಯಾವುದೇ ಕಾರ್ಯಕ್ರಮ ಮಾಡಬಹುದೆಂದು ಅಭಿಪ್ರಾಯ ಪಟ್ಟರು. ಸಂಘಟನಾ ಕಾರ್ಯದರ್ಶಿ ರಘುವೀರ್ ಬಾಬುಗುಡ್ಡೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ನವೀನ್ ಸಾಲ್ಯಾನ್ ವಂದಿಸಿದರು. ಟ್ರಸ್ಟ್ ಸದಸ್ಯರಾದ ಶ್ರೀ ತಾರಾನಾಥ್ ಉರ್ವ ಕಾರ್ಯಕ್ರಮ ನಿರೂಪಿಸಿದರು.</p>