ಸುಳ್ಯಪದವು ಶಬರಿನಗರ ಸ್ವಾಮಿ ಕೊರಗಜ್ಜ ಕ್ಷೇತ್ರದಲ್ಲಿ ಸಂಕ್ರಮಣ ಪೂಜಾ ಕಾರ್ಯಕ್ರಮ, ಅಗೇಲು ಸೇವೆ ಮತ್ತು ಕಲಶ ಸೇವೆ ಡಿ.15 ರಂದು ನಡೆಯಿತು.
ಭಕ್ತಾದಿಗಳಿಂದ ಹರಕೆ ರೂಪದಲ್ಲಿ ಸುಮಾರು 94 ಅಗೇಲು ಸೇವೆ ಹಾಗೂ ಕಲಸ ಸೇವೆಯನ್ನು ಸ್ವಾಮಿ ಕೊರಗಜ್ಜ ಹಾಗೂ ಗುಳಿಗರಾಜನಿಗೆ ಸಲ್ಲಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಸುಮಾರು 500 ಕ್ಕೂ ಮಿಕ್ಕಿ ಭಕ್ತಾದಿಗಳು ಭಾಗವಹಿಸಿ ಅನ್ನ ಪ್ರಸಾದ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ಬೆಳಿಯಪ್ಪ ಗೌಡ ಶಬರಿನಗರ, ಕಾರ್ಯದರ್ಶಿ ಪ್ರಕಾಶ್ ಮರದಮೂಲೆ, ಉಪಾಧ್ಯಕ್ಷ ಸದಾನಂದ ರೈ ಬೋಳಂಕೂಡ್ಲು, ಕೋಶಾಧಿಕಾರಿ ಭಾಸ್ಕರ ಹೆಗ್ಡೆ ಶಬರಿನಗರ, ಪ್ರಧಾನ ಪೂಜಾ ಕರ್ಮಿ ಮಾದವ ಸಾಲಿಯಾನ್, ಊರ ಭಕ್ತಾದಿಗಳು ಭಾಗವಹಿಸಿದ್ದರು