ಸುಳ್ಯಪದವು ಸರ್ವೋದಯ ವಿದ್ಯಾಸಂಸ್ಥೆಗಳು: ವಿವಿಧ ಕೊಡುಗೆಗಳ ಉದ್ಘಾಟನಾ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ

ಪುತ್ತೂರು

news-details

ಸುಳ್ಯಪದವು ಸರ್ವೋದಯ ವಿದ್ಯಾಸಂಸ್ಥೆಯಲ್ಲಿ ವಿವಿಧ ಕೊಡುಗೆಗಳ ಲೋಕಾರ್ಪಣೆ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಶನಿವಾರ ನಡೆಯಿತು.
ಸರ್ವೋದಯ ವಿದ್ಯಾನಿಧಿ ಸಂಗ್ರಹಕರು ಕೊಡುಗೆಯಾಗಿ ನೀಡಿರುವ ಧ್ವನಿವರ್ಧಕ ಹಾಗೂ ಕೈ ತೊಳೆಯುವ ಸ್ಟೀಲ್ ಬೇಸಿನ್ , 1998-99 ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳುಕೊಡುಗೆಯಾಗಿ ನೀಡಿರುವ ನೀರಿನ ಟ್ಯಾಂಕ್, 20೦4 -05 ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಕೊಡುಗೆಯಾಗಿ ನೀಡಿರುವ ಬೆಂಚ್, ಚೇರ್ ಮತ್ತು ಟೇಬಲ್ ಹಾಗೂ ಕಾಸರಗೋಡು ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಚನಿಯಪ್ಪ ನಾಯ್ಕ ಎನ್. ಕೊಡುಗೆಯಾಗಿ ನೀಡಿರುವ ಡೀಸೆಲ್‌ ಜನರೇಟರ್ ಇವುಗಳ ಉದ್ಘಾಟನಾ ಸಮಾರಂಭ ನಡೆಯಿತು.
ಪುತ್ತೂರು ಎ.ಬಿ. ವಿದ್ಯಾಸಂಸ್ಥೆಯ ಸಂಚಾಲಕ ಎ.ವಿ. ನಾರಾಯಣ ಉದ್ಘಾಟಿಸಿ ಮಾತನಾಡಿ ಗುಣ ಮಟ್ಟದ ಶಿಕ್ಷಣ ಜೊತೆ ಗ್ರಾಮೀಣ ಪ್ರದೇಶದಲ್ಲಿ ಸರ್ವರಿಗೆ ಶಿಕ್ಷಣ ನೀಡುವ ನಿಟ್ಟಿನಲ್ಲಿ ವಿದ್ಯಾಸಂಸ್ಥೆ ಬೆಳೆದು ನಿಂತಿದೆ. ಶಾಲೆಯ ಅಭಿವೃದ್ಧಿ ಗಳ ಹಿಂದೆ ಹಿರಿಯರು ಶ್ರಮವೂ ಕೂಡ ಇದೆ. ಆಂಗ್ಲ ಮಾಧ್ಯಮ ಇಂದಿನ ವ್ಯವಸ್ಥೆಗೆ ಅನಿವಾರ್ಯ.
ವಿದ್ಯೆಯಿಂದ ಸಮಾಜಕ್ಕೆ ಉತ್ತಮ ಕೊಡುಗೆ ನೀಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಸರ್ವೋದಯ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಚ್ .ಡಿ .ಶಿವರಾಮ್ ಅಧ್ಯಕ್ಷತೆ ವಹಿಸಿ ಮಾತನಾಡಿ ಬಹುಮಾನ ಪಡೆಯಲು ಹಲವಾರು ಅವಕಾಶ ಇದೆ. ವಿದ್ಯಾಭಿಮಾನಿಗಳು, ಹಿರಿಯ ವಿದ್ಯಾರ್ಥಿಗಳ ಕೊಡುಗೆ ಅಪಾರ ಎಂದು ಹೇಳಿ ಶುಭ ಹಾರೈಸಿದರು.
ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕ ಸುಖೇಶ್ ರೈ ಕುತ್ಯಾಳ ಸ್ವಾಗತಿಸಿ ಪ್ರಸ್ತಾವಿಕ ವಾಗಿ ಮಾತನಾಡಿ 8ತಿಂಗಳ ಹಿಂದೆ ನಿಧಿಸಂಗ್ರಹ ಮಾಡಲು ಪ್ರಾರಂಭಿಸಿ ಸುಮಾರು 8 ಲಕ್ಷ ರೂಪಾಯಿ ಕಾಮಗಾರಿ ನಡೆಸಲಾಗಿದೆ. ದಾನಿಗಳ ಮತ್ತು ಹಿರಿಯ ವಿದ್ಯಾರ್ಥಿಗಳ ಕೊಡುಗೆ ಮೂಲಕ 12 ಸಾವಿರ ಲೀಟರ್ ನೀರಿನ ಟ್ಯಾಂಕ್, ಕೈ ತೊಳೆಯುವ ಸ್ಟೀಲ್ ಬೇಸಿನ್, 1 ನೇ ತರಗತಿ ಮಕ್ಕಳಿಗೆ ಪೀಠೋಪಕರಣ, ಧ್ವನಿ ವರ್ಧಕ, ಜನರೇಟರ್ ಇತ್ಯಾದಿ ಶಾಲೆಗೆ ಬೇಕಾದ ಅವಶ್ಯಕತೆ ಪೂರೈ ಸುವ ಪ್ರಯತ್ನ ಮಾಡಲಾಗಿದೆ.ಮುಂದೆಯು ದಾನಿಗಳ ಮತ್ತು ಶಿಕ್ಷಣಾಭಿಮಾನಿಗಳ ಸಹಕಾರ ಯೋಚಿಸಿದರು.
ದಾನಿ ನಾರಾಯಣ ರೈ ಕುಡ್ಕಾಡಿ ಬಹುಮಾನ ವಿತರಿಸಿ ಮಾತನಾಡಿ ಊರಿನ ಸಂಭ್ರಮ ದಲ್ಲಿ ಭಾಗವಹಿಸುವುದೇ ಸಂತೋಷ. ಗಡಿಭಾಗದ ಶಾಲೆಯಾಗಿ ಒಳ್ಳೆಯ ಶಿಕ್ಷಣ ನೀಡುವ ಶಾಲೆಯಾಗಿದೆ ಎಂದು ಹೇಳಿ ಶುಭ ಹಾರೈಸಿದರು. ಬೆಟ್ಟಂಪಾಡಿ ಪ್ರಥಮ ದರ್ಜೆ ಕಾಲೇಜಿನ
ಉಪನ್ಯಾಸಕ ಕೃಷ್ಣಪ್ರಸಾದ್ ಕೆ ಪಿ , ಸಂಸ್ಥೆಯ ಸಂಚಾಲಕ ಮಹಾದೇವ ಭಟ್ ಕೊಲ್ಯ,ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಪ್ರಕಾಶ್ ಮರದಮೂಲೆ ಮಾತನಾಡಿ ಶುಭ ಹಾರೈಸಿದರು
ಪುತ್ತೂರು ಕೃಷ್ಣ ನಗರ ಎ.ಬಿ. ವಿದ್ಯಾಸಂಸ್ಥೆಯ ಸಂಚಾಲಕ, ಸಿವಿಲ್ ಇಂಜಿನಿಯರ್ ಎ.ವಿ. ನಾರಾಯಣಯವರನ್ನು ಹಾಗೂ ಶಾಲೆ ವಿದ್ಯಾರ್ಥಿ ಗಳಿಗೆ ನೃತ್ಯ ಕಲಿಸಿದ ನೃತ್ಯ ಕಲಾವಿದೆ, ವರ್ಣಂ ಡ್ಯಾನ್ಸ್ ಸ್ಟುಡಿಯೋ ಇದರ ಮಾಲಕಿ ಸೌರ್ಪಣಿಕಗುರುರಾಜ್ ರೈ ಈಶ್ವರಮಂಗಲ ಇವರನ್ನು ಗೌರವಿಸಲಾಯಿತು.
ದತ್ತಿ ನಿಧಿ ಬಹುಮಾನ ವನ್ನು ರಾಜೇಶ್ ಎಂ, ಸುಹಾಸ್ ಬಿ, ಬಹುಮಾನಗಳ ಪಟ್ಟಿಯನ್ನು ಶಿಕ್ಷಕಿ ಪ್ರಶಾಂತಿ ರೈ, ಜ್ಯೋತಿ ವಾಚಿಸಿದರು.
ಕೋಶಾಧಿಕಾರಿ ಅರುಣ್ ಕುಮಾರ್ ನಿರ್ದೇಶಕರಾದ ಗುರುಪ್ರದೀಪ್, ಸುಬ್ರಮಣ್ಯ ಭಟ್ ಕೋರಮೂಲೆ,ಸುಬ್ರಮಣ್ಯ ಭಟ್ ಪಾದೆಗದ್ದೆ ಉಪಸ್ಥಿತರಿದ್ದರು.
ಶಿಕ್ಷಕಿ ಪುಷ್ಪಲತಾ ವಂದಿಸಿದರು ಸಂಸ್ಥೆಯ ಶಿಕ್ಷಕಿ ಪ್ರೀತಾ ಎನ್ ಕಾರ್ಯಕ್ರಮ ನಿರೂಪಿಸಿದರು.

news-details