ಡಿ. 24 : ಶ್ರೀ ಮಹಾಮ್ಮಾಯಿ ಅಮ್ಮನವರ ಗೋಂದೋಳು ಪೂಜೆ ಹಾಗೂ ಭಜನಾ ಕಾರ್ಯಕ್ರಮ

ಪುತ್ತೂರು

news-details

ಶ್ರೀ ಮಹಾಮ್ಮಾಯಿ ಅಮ್ಮನವರ ಗೋಂದೋಳು ಪೂಜೆಯು ಡಿ. 24ರಂದು ಪಾದೆಗದ್ದೆ ಸಮುದಾಯ ಭವನದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳ ಜೊತೆ ಭಜನಾ ಕಾರ್ಯಕ್ರಮ ದೊಂದಿಗೆ ನಡೆಯಲಿದೆ.
ಬೆಳಿಗ್ಗೆ ಗಂಟೆ 8ರಿಂದ ಗಣಪತಿ ಹೋಮ, ಬೆಳಿಗ್ಗೆ ಗಂಟೆ 9ರಿಂದ ನಡೆಯುವ ಭಜನೆ ಕಾರ್ಯಕ್ರಮದಲ್ಲಿ ಶ್ರೀ ಮಹಾಲಕ್ಷ್ಮಿ ಭಜನಾ ಮಂಡಳಿ ಸುಳ್ಯ ಪದವು, ಶ್ರೀ ಹರಿ ನಾಮಾಮೃತ ಭಜನಾ ಮಂಡಳಿ, ಮಕ್ಕಳ ತಂಡ ಮರದಮೂಲೆ,ಶ್ರೀ ಮಹಾಲಕ್ಷ್ಮಿ ಮಹಿಳಾ ಭಜನಾ ಮಂಡಳಿ (ರಿ.)ಸುಳ್ಯ ಪದವು, ಶ್ರೀ ಮಹಾವಿಷ್ಣು ಭಜನಾ ಸಂಘ ಸುಳ್ಯಪದವು ಭಾಗವಹಿಸಲಿವೆ.
ಮಧ್ಯಾಹ್ನ ಗಂಟೆ 12 ರಿಂದ ದೀಪಾರಾಧನೆ, ಅನ್ನದಾನ ನಡೆಯಲಿದೆ.
ಸಂಜೆ ಗಂಟೆ 5 ರಿಂದ ಭೈರವ ಆರಾಧನೆ, ಗಂಟೆ 6ರಿಂದ ಶ್ರೀ ಮಹಾಮ್ಮಾಯಿ ಅಮ್ಮನವರ ಗೋಂದೋಳು ಪೂಜೆ ಆರಂಭ
ರಾತ್ರಿ ಗಂಟೆ 9ರಿಂದ ನೆಟ್ಟಣಿಗೆ ಪಾದೆ ಗದ್ದೆ ಅಂಬಾಭವಾನಿ ಭಜನಾ ಮಂಡಳಿಯಿಂದ ಭಜನೆ ಪ್ರಾರಂಭವಾಗಲಿದೆ. ನಂತರ ಅನ್ನದಾನ.ರಾತ್ರಿ ಗಂಟೆ 2.00ಕ್ಕೆ ಮಂಗಳಾರತಿ,ಪ್ರಸಾದ ವಿತರಣೆ ಪ್ರಸಾದ ಭೋಜನ ನಡೆಯಲಿದೆ. ಮರಾಠಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತನು ಮನ ಧನ ಗಳಿಂದ ಸಹಕಾರವನ್ನುಿತ್ತು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ, ಶ್ರೀ ಅಮ್ಮನವರ ಕೃಪೆಗೆ ಪಾತ್ರರಾಗಬೇಕಾಗಿ ಪ್ರಕಟಣೆ ತಿಳಿಸಿದೆ.
ವಿ..ಸೂ ಶ್ರೀ ಮಹಾಮ್ಮಾಯಿ ಅಮ್ಮನವರ ಗೋಂದೋಳು ಪೂಜೆಯು ಸಂಜೆ Newstime ಕನ್ನಡ ಸುದ್ದಿವಾಹಿನಿಯಲ್ಲಿ ನೇರಪ್ರಸಾರ(LIVE) ವಾಗಲಿದೆ.

news-details