ಪುತ್ತೂರು ತಾಲೂಕು ಬಲ್ನಾಡು ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ಡಿ. 16 ರಂದು ಪಂಚಾಯತ್ ಹಂತದ ಜನ ಸುರಕ್ಷಾ ಅಭಿಯಾನ ಕಾರ್ಯಕ್ರಮವು ಬಲ್ನಾಡುಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಪರಮೇಶ್ವರಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಶ್ರೀಮತಿ ಗೀತಾ ಸಿ.ಎಪ್ .ಎಲ್ ಮದರ ಸಂಸ್ಥೆ ರೋಣ ಇವರು ಕಾರ್ಯಕ್ರಮದ ನಿರೂಪಣೆ ಮಾಡಿದರು.
ಶ್ರೀಮತಿ ಗೀತಾವಿಜಯ ಆಪ್ತ ಸಮಾಲೋಚಕಿ (ಕೆನರಾ ಬ್ಯಾಂಕ್ ) ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರ ಇವರು ಗ್ರಾಮಸ್ಥರಿಗೆ ಬ್ಯಾಂಕ್ ಗಳಲ್ಲಿರುವ ಯೋಜನೆಗಳ ಬಗ್ಗೆ ಮತ್ತು ಸಾಮಾಜಿಕ ಭದ್ರತಾ ಯೋಜನೆಗಳ ಮಾಹಿತಿ ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ, ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆ, ಅಟಲ್ ಪಿಂಚಣಿ ಯೋಜನೆಗಳ ಮಾಹಿತಿ ಮತ್ತು ನೋಂದಣಿ ಕಾರ್ಯಕ್ರಮವನ್ನೂ ನಡೆಸಿದರು.
ಶ್ರೀ ಬಿಪಿನ್ ಕಿಶೋರ್ ಕೆನರಾ ಬ್ಯಾಂಕ್ ಬೆಳಿಯೂರು ಕಟ್ಟೆ ಶಾಖಾ ಪ್ರಬಂಧಕರು, ಶ್ರೀ ದೇವಪ್ಪ ಪಿ.ಆರ್ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಶ್ರೀಮತಿ ಗೀತಾ ವಿಜಯ ಅಪ್ತ ಸಮಾಲೋಚಕಿ (ಕೆನರಾ ಬ್ಯಾಂಕ್ ) ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರ, ಲಕ್ಷ್ಮಿ. ಎಂ ಕಾರ್ಯದರ್ಶಿ, ಶ್ರೀಮತಿ ನಮಿತಾ ಎನ್.ಆರ್.ಎಲ್.ಎಮ್ ವಲಯ ಮೇಲ್ವಿಚಾರಕಿ, ಶ್ರೀಮತಿ ಮಮತಾ, ಸಂಜೀವಿನಿ ಒಕ್ಕೂಟದ ಅಧ್ಯಕ್ಷರು ಪಾಲ್ಗೊಂಡರು
ಗ್ರಾಮ ಪಂಚಾಯತ್ ಸಿಬ್ಬಂದಿಗಳು, ಸಿ.ಎಚ್.ಓ, ಎಮ್.ಬಿ.ಕೆ, ಗ್ರಾಮಸ್ಥರು ಉಪಸ್ಥಿತರಿದ್ದರು.