ನಂದಿನಿ ನದಿಯ ಹಿನ್ನೀರಿನ ತಟದಲ್ಲಿ ರೆಸಾರ್ಟ್ ಮಾದರಿಯ ರೋಹನ್ ಎಸ್ಟೇಟ್ ಮುಕ್ಕಬಡಾವಣೆ ನಿರ್ಮಾಣವಾಗಿ ಮಾರುಕಟ್ಟೆಗೆ ಬಿಡುಗಡೆ ಯಾಗಿದೆ.ನದಿ, ಸಮುದ್ರ ಹಾಗೂ ರಾಷ್ಟ್ರೀಯ ಹೆದ್ದಾರಿಯ ನಡುವೆ 15 ಎಕರೆ ಪ್ರದೇಶದಲ್ಲಿ ವಸತಿ ಬಡಾವಣೆ ನಿರ್ಮಾಣ ವಾಗುತ್ತಿದೆ. ಮುಂದಿನ 15 ದಿನಗಳ ಒಳಗೆ ಬುಕ್ಕಿಂಗ್ ಮಾಡುವವರಿಗೆ ಶೇ 15 ರಿಯಾಯಿತಿ ನೀಡಲಾಗುವುದು ಎಂದು ರೋಹನ್ ಕಾರ್ಪೊರೇಷನ್ ಸಂಸ್ಥೆಯ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ರೋಹನ್ ಮೊಂತೆರೊ ತಿಳಿಸಿದ್ದಾರೆ.
ನಗರದ ಓಶಿಯನ್ ಪರ್ಲ್ ಹೊಟೇಲ್ ಸಭಾಂಗಣದಲ್ಲಿ ಸೋಮವಾರ ಹಮ್ಮಿ ಕೊಂಡ ಸುದ್ದಿಗೋಷ್ಥಿಯನ್ನುದ್ದೇಶಿಸಿ ಮಾತನಾಡಿದ ಅವರು,ಇಲ್ಲಿ ವಾಸಿಸುವವರಿಗೆ ರೆಸಾರ್ಟ್ ಶೈಲಿಯ ಜೀವನದ ಅನುಭವ ಸಿಗಲಿದೆ.ನದಿ ತೀರದಲ್ಲಿ ಸೂಕ್ತ ರೀತಿಯಲ್ಲಿ ನಿರ್ಮಾಣ ವಾದ ಇದೊಂದು ಪರಿಪೂರ್ಣವಾದ ರೆಸಾರ್ಟ್ ಶೈಲಿಯ ಐಶಾರಾಮಿಮಾದರಿಯ ಪ್ರಕೃತಿಯ ಮಡಿಲಿನ ವಸತಿ ಬಡಾವಣೆಯಾಗಿದೆ.
ಈ ರೀತಿಯಲೇಔಟ್ ಕರಾವಳಿ ಭಾಗದಲ್ಲಿ ಅಪರೂಪ ಎಂದರು.ತಡೆ ಗೋಡೆ ರಚನೆಯೊಂದಿಗೆ ಸುರಕ್ಷತೆಯೊಂದಿಗೆ ಈ ಬಡಾವಣೆ ನಿರ್ಮಾಣ ವಾಗಿದೆ.ನಮ್ಮ ವಸತಿ ಸಮುಚ್ಚಯ ಹಾಗೂ ಬಡಾವಣೆ ಗುಣ ಮಟ್ಟ,ವಿಶೇಷತೆಗಳಿಂದಾಗಿ ಶ್ರೇಷ್ಠತೆಯಿಂದ ಭಿನ್ನವಾಗಿ ಕಾಣಸಿಗುತ್ತದೆ ಮತ್ತು ಗ್ರಾಹಕರ ಬೇಡಿಕೆ ಗೆ ಪಾತ್ರವಾಗಿದೆ.ರಿಯಲ್ ಎಸ್ಟೇಟ್ ಉದ್ಯಮದಲ್ಲಿ ನಗರದ ಪ್ರತಿಷ್ಠಿತ ಪ್ರದೇಶದಲ್ಲಿ ಅತಿ ಹೆಚ್ಚು ವಸತಿ ಸಮುಚ್ಚಯ ಹಾಗೂ ವಸತಿ ಬಡಾವಣೆ ಯನ್ನು ಆಕರ್ಷಕವಾಗಿ ನಿರ್ಮಾಣ ಮಾಡಿದ ಸಂಸ್ಥೆ ಎಂದು ಖ್ಯಾತಿಗೆ ಪಾತ್ರವಾಗಿದೆ. ರೋಹನ್ ಸ್ಕ್ವೇ ರ್ ಎಂಬ ಬೃಹತ್ ಯೋಜನೆ ಕೈಗೆತ್ತಿಕೊಂಡು ಗ್ರಾಹಕರಿಗೆ ಆಕರ್ಷಕ ಕೊಡುಗೆ ನೀಡಿ ತಿಂಗಳಿನೊಳಗೆ ಶೇ. 90ರಷ್ಟು ಮನೆ ಹಾಗೂ ವಾಣಿಜ್ಯ ಮಳಿಗೆಗಳನ್ನು ಮಾರಾಟ ಮಾಡಿ ಕಾರಣ ಗ್ರಾಹಕರಿಗೆ ಹೆಚ್ಚಿನ ಲಾಭವಾಗಿದೆ. ಬಳಿಕ ಪಕ್ಷಿಕೆರೆಯಲ್ಲಿ ಬೃಹತ್ ವಸತಿ ಬಡಾವಣೆ ನಿರ್ಮಾಣ ಮಾಡಿ. ಎಲ್ಲವನ್ನೂ ದಾಖಲೆ ಅವಧಿಯಲ್ಲಿ ಮಾರಾಟ ಮಾಡಿದ ಹೆಗ್ಗಳಿಕೆ ರೋಹನ್ ಕಾರ್ಪೊರೇಷನ್‌ಗೆ ಸಲ್ಲುತ್ತದೆ. ಈ ನಡುವೆ ಬಿಜೈ ಬಳಿ ರೋಹನ್ ಸಿಟಿ ಎಂಬ ಬೃಹತ್ ಯೋಜನೆ ಕೈಗೆತ್ತಿಕೊಂಡು ವಾರ್ಷಿಕವಾಗಿ ಶೇ. 7.5ರಷ್ಟು ಖಾತರಿ ರಿಟನ್ ಅನ್ನು ಗ್ರಾಹಕರಿಗೆ ನೀಡುತ್ತಿರುವುದು ನಮ್ಮ ಸಂಸ್ಥೆಯ ಹೆಗ್ಗಳಿಕೆಯಾಗಿದೆ ಎಂದವರು ತಿಳಿಸಿದ್ದಾರೆ.
*ರೋಹನ್ ಎಸ್ಟೇಟ್ ಮುಕ್ಕ – ವಿಶೇಷತೆಗಳು:ನದಿ ತೀರದಲ್ಲಿನ ವಸತಿ ಬಡಾವಣೆ,ಅಂತಾರಾಷ್ಟ್ರೀಯ ಗುಣಮಟ್ಟದ ಕ್ಲಬ್ ಹೌಸ್ ,ಮರೀನಾ-ಮನರಂಜನಾ ಬೋಟಿಂಗ್ ಚಟುವಟಿಕೆಗಳ ತಾಣ (ಬೋಟಿಂಗ್ ಮತ್ತು ಕಯಾಕಿಂಗ್)ಮಕ್ಕಳಿಗೆ ಪ್ರತ್ಯೇಕ ಈಜುಕೊಳ,ಬಡಾವಣೆಯೊಳಗೆ ಫ್ಯಾಮಿಲಿ ರೆಸ್ಟೋರೆಂಟ್ ಮಕ್ಕಳಿಗೆ ಆಟದ ಮೈದಾನ,ಸೈಕ್ಲಿಂಗ್ ಟ್ರ್ಯಾಕ್, ಬಿಲಿಯರ್ಡ್ಸ್, ಸ್ಕೇಟಿಂಗ್ ರಿಂಕ್ ,ಆ್ಯಂಪಿ ಥಿಯೇಟರ್, ಸುರಕ್ಷತೆ ದೃಷ್ಟಿಯಿಂದ ಬಡಾವಣೆಯಲ್ಲಿ ಸಿಸಿ ಕ್ಯಾಮೆರಾ ಆಳವಡಿಕೆ, 40 ಅಡಿ ಕಾಂಕ್ರೀಟ್ ಮುಖ್ಯ ರಸ್ತೆ,30 ಅಡಿ ಕಾಂಕ್ರೀಟ್ ಒಳ ರಸ್ತೆ,ಬೃಹತ್ ಕಾಂಪೌಂಡ್ ಮತ್ತು ಸುರಕ್ಷತಾ ಗೇಟ್,ಆಕರ್ಷಕ ಸೋಲಾ ರ್ ಬೀದಿ ದೀಪ ಅಳವಡಿಕೆ,ಪ್ರಧಾನ ದ್ವಾರ ದಲ್ಲಿ ದಿನದ 24 ಗಂಟೆಯೂ ಸೆಕ್ಯೂರಿಟಿ ವ್ಯವಸ್ಥೆ,ಆಕರ್ಷಕ ಲ್ಯಾಂಡ್ ಸ್ಕೇಪಿಂಗ್,ವಾಸ್ತು ಪ್ರಕಾರ ಪ್ರತಿ ನಿವೇಶನಕ್ಕೂ ಸಂಪರ್ಕಮಳೆ ನೀರು ಕೊಯಿಲು, ನೀರು ಶುದ್ದೀಕರಣ ಘಟಕ,ಭೂಗತ ಒಳಚರಂಡಿ ಪೈಪ್ ಲೈನ್
ಹೂಡಿಕೆ ಮತ್ತು ಮನೆ ನಿರ್ಮಾಣ ಎರಡಕ್ಕೂ ಯೋಗ್ಯ,ಸೂಪರ್ ಮಾರ್ಕೆಟ್ ,ಹಸಿರು ಪರಿಸರಕ್ಕೆ ವಿಶೇಷ ಒತ್ತು.ಭವಿಷ್ಯದಲ್ಲೂ ಸಂಸ್ಥೆಯಿಂದಲೇ ಲೇ ಔಟ್ ನಿರ್ವಹಣೆ , ರೋಹನ್ ಎಸ್ಟೇಟ್ ಕೇವಲ ಅತ್ಯುನ್ನತ ಬಡಾವಣೆ ಮಾತ್ರ ಅಲ್ಲ, ಅತ್ಯುತ್ತಮ ಹೂಡಿಕೆಯ ಅವಕಾಶ ಕಲ್ಪಿಸಲಾಗಿದೆ ಎಂದವರು ತಿಳಿಸಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ರೋಹನ್ ಕಾರ್ಪೊರೇಷನ್ ಜನರಲ್ ಮ್ಯಾನೇಜರ್ ಸುಮನ,ನಿರ್ದೇಶಕ ಡಿಯಾನ್,ಮಾರುಕಟ್ಟೆ ಮ್ಯಾನೇಜರ್ ಜೊಯೆಲ್ ಕ್ರಾಸ್ತಾ ಉಪಸ್ಥಿತರಿದ್ದರು.