ನವಂಬರ್ ತಿಂಗಳಲ್ಲಿ ನಡೆದ ಸಿ.ಎ ಅಂತಿಮ ಪರೀಕ್ಷೆಯಲ್ಲಿ ಚೇತನಾ ಶೆಣೈ ಇವರು ಉತ್ತಮ ಅಂಕ ಪಡೆದು ಉತ್ತೀರ್ಣರಾಗಿದ್ದಾರೆ.
ಇವರು ತಮ್ಮ ಆರ್ಟಿಕಲ್ಪ್ ಶಿಪ್ ನ್ನು ದಾಮೋದರ್ ಅಂಡ್ ಕೋ. ಮತ್ತು ಸಿ. ಎ. ಇಂಟರ್ ಮೆಡಿಟ್ ಕೋಚಿಂಗ್ ನ್ನು ತ್ರಿಷಾ ಇವರಲ್ಲಿ ಪಡೆದುಕೊಂಡಿದ್ದರು. ಇವರು ಪುತ್ತೂರು CA ದೀಪಕ್ ಕೆ. ಇವರ ಧರ್ಮ ಪತ್ನಿ, ಶ್ರೀಮತಿ &ಶ್ರೀ CA ದಾಮೋದರಸದಾನಂದ ನಾಯಕ್ ಇವರ ಸೊಸೆ. ಪುತ್ತೂರು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಾಥಮಿಕ ಶಾಲೆ ಪ್ರೌಢ ಶಿಕ್ಷಣವನ್ನು ಪಡೆದು, ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಪಿಯುಸಿ, ಪದವಿ ಶಿಕ್ಷಣವನ್ನು ಪಡೆದುಕೊಂಡಿದ್ದಾರೆ. ಇವರು ಪುತ್ತೂರು ರಾಮನಾಥ ಶೆಣೈ ಸುನಿತಾ ಶೆಣೈ ದಂಪತಿಗಳ ಪುತ್ರಿಯಾಗಿದ್ದಾರೆ