ಜ. 2:ಪಡುಮಲೆ ಜಾತ್ರೆಯ ಆಮಂತ್ರಣ ಪತ್ರಿಕೆ ಬಿಡುಗಡೆ, ಗೊನೆ ಮುಹೂರ್ತ

ಪುತ್ತೂರು

news-details

ಶ್ರೀ ಕ್ಷೇತ್ರ ಪಡುಮಲೆಯ ವರ್ಷಾವಧಿ ಜಾತ್ರೋತ್ಸವವು ಇದೇ ಬರುವ ತಾರೀಕು 12-01-2025ನೇ ಆದಿತ್ಯವಾರದಿಂದ 14-01-2025ನೇ ಮಂಗಳವಾರದವರೆಗೆ ನಡೆಯಲಿದೆ. ಆ ಪ್ರಯುಕ್ತ ಜಾತ್ರೋತ್ಸವಕ್ಕೆ ಗೊನೆ ಮುಹೂರ್ತವು ತಾ. 02-01-2025ನೇ ಗುರುವಾರ ನಡೆಯಲಿದೆ.
ಬೆಳಿಗ್ಗೆ ಶ್ರೀ ದೇವರ ಪೂಜೆಯ ಸಂದರ್ಭದಲ್ಲಿ ಆಮಂತ್ರಣ ಪತ್ರಿಕೆಗೆ ಪೂಜೆ ಸಲ್ಲಿಸಿ ಪ್ರಾರ್ಥಿಸಿ ನಂತರ ಬಿಡುಗಡೆಗೊಳಿಸಲಾಗುವುದು. ಬಳಿಕ ಶಂಖ ಜಾಗಟೆ ವಾದ್ಯದೊಂದಿಗೆ ಶ್ರೀ ದೇವರ ಜಾತ್ರೋತ್ಸವದ ಮುಹೂರ್ತದ ಗೊನೆ ಕಡಿಯಲು ತೆರಳುವುದು.
ಗೊನೆ ಕಡಿದು ಬಂದ ಬಳಿಕ ಆಮಂತ್ರಣ ಪತ್ರಿಕೆ ವಿತರಣೆಯ ಬಗ್ಗೆ ಭಕ್ತಾಭಿಮಾನಿಗಳ ಜೊತೆ ವಿಚಾರ ವಿನಿಮಯ ನಡೆಯಲಿದೆ ಎಂದು ವ್ಯವಸ್ಥಾಪನಾ ಸಮಿತಿಯ ನಿಕಟ ಪೂರ್ವ ಅಧ್ಯಕ್ಷರಾದ ಶ್ರೀ ಮನೋಜ್ ರೈ ಪೇರಾಲು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಶ್ರೀ ಶ್ರೀನಿವಾಸ ಭಟ್ ಚಂದುಕೂಡ್ಲು ಮತ್ತು ಜಾತ್ರೋತ್ಸವ ಸಮಿತಿ ಅಧ್ಯಕ್ಷರಾದ ಶ್ರೀ ಸತೀಶ್ ರೈ ಕಟ್ಟಾವುರವರು ಹಾಗೂ ಸಮಿತಿ ಪದಾಧಿಕಾರಿಗಳು ದೇವಸ್ಥಾನದ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.

news-details