ಗೆಡ್ಡೆ ಗೆಣಸು ಸೊಪ್ಪಿನ ಮೇಳದಲ್ಲಿ ಕಿಕ್ಕಿರಿದ ಜನ ಸಂದಣಿ...

ಮಂಗಳೂರು

news-details

ಸಾವಯವ ಕೃಷಿಕ ಗ್ರಾಹಕ ಬಳಗದ ವತಿಯಿಂದ ಶನಿವಾರ ಮತ್ತು ರವಿವಾರ ಮಂಗಳೂರಿನ ಸಂಘನಿಕೇತನದಲ್ಲಿ ಆಯೋಜಿಸಲಾದ ಗೆಡ್ಡೆ ಗೆಣಸು ಮತ್ತು ಸೊಪ್ಪಿನ ಮೇಳದಲ್ಲಿ ಶನಿವಾರ ದೇಶದ ಗಿನ್ನೆಸ್ ದಾಖಲೆ ಹಾಗೂ ಲಿಮ್ಕಾ ದಾಖಲೆಯ ಗೆಡ್ಡೆ ಗೆಣಸು ಬೆಳೆಗಾರರು ತಾವು ಬೆಳೆದ ಬೃಹತ್ ಗೆಡ್ಡೆ ಗೆಣಸು ಸಂಗ್ರಹದೊಂದಿಗೆ ಮೇಳದಲ್ಲಿ ಭಾಗವಹಿಸಿದ್ದರು.ಜೊತೆಗೆ ಜೊಯಿಡಾದ ಕುಡುಬಿ ಜನಾಂಗದ ರೈತರು ಬೆಳೆದ ಮೂಡ್ಲಿ ಹೆಸರಿನ ಗೆಡ್ಡೆ, ಕೇರಳದ ಕೃಷಿಕರ ತಂಡದ ಬಳಿ ಗೆಣಸಿನ ಗೆಡ್ಡೆ ಗಳ ಸಂಗ್ರಹ ಮೇಳದ ವಿಶೇಷ ಆಕರ್ಷಣೆ ಯಾಗಿದೆ.

ಟ್ಯೂಬರ್ ಮ್ಯಾನ್ ಆಫ್ ಇಂಡಿಯಾ ಖ್ಯಾತಿ ಯ ಕೇರಳದ ಶಾಜಿ ಎನ್. ಎಂ. 2021ರಲ್ಲಿ ಭಾರತ ಸರಕಾರದಿಂದ ಜೀವ ವೈವಿಧ್ಯ ಸಂರಕ್ಷಣೆ ಗಾಗಿ ಪ್ರಶಸ್ತಿ ಪಡೆದವರು ಸುಮಾರು 300 ಬಗೆಯ ಗೆಡ್ಡೆ ಗೆಣಸು,ಧಾನ್ಯ, ಬೀಜಗಳ ಸಂಗ್ರಹಣೆ ಯೊಂದಿಗೆ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದಾರೆ.

ಗಿನ್ನೆಸ್,ಲಿಮ್ಕಾ ದಾಖಲೆ ಬರೆದ ಕೃಷಿಕ ರಿಜಿ ಜೊಸೆಫ್ ತಾವು ಬೆಳೆದ ಸುಮಾರು 100 ಮಾದರಿಯ ಗೆಡ್ಡೆ ಗೆಣಸುಗಳೊಂದಿಗೆ ಮೇಳದಲ್ಲಿ ಭಾಗವಹಿಸಿದ್ದಾರೆ.ಅತ್ಯಂತ ದೊಡ್ಡ ಕೆಸುವಿನ ಎಲೆ ಬೆಳೆದು ಗಿನ್ನೆಸ್ ದಾಖಲೆ ಮಾಡಿರುವ ಕೇರಳದ ರಿಜಿ ಜೋಸೆಫ್ ಬೃಹತ್ ಗಾತ್ರದ ಅರಸಿನ ಗಡ್ಡೆ ಬೆಳೆದು ಲಿಮ್ಕಾ ದಾಖಲೆ ಮಾಡಿದ್ದಾರೆ ‌ಅವರು ಬೆಳೆದ ಬೃಹತ್ ಗಾತ್ರದ ಸುವರ್ಣ ಗೆಡ್ಡೆ,ಬಳ್ಳಿ ಗೆಣಸು,ಮರಗೆಣಸು ಶಿಬಿರದ ವಿಶೇಷ ಆಕರ್ಷಣೆಯಾಗಿದೆ.
ಮೇಳದಲ್ಲಿ 370 ಕ್ಕೂ ಅಧಿಕ ಜಾತಿಯ ಗೆಡ್ಡೆ ಗೆಣಸು ಹಾಗೂ 100ಕ್ಕೂ ವಿವಿಧ ಸೊಪ್ಪುಗಳು ಪ್ರದರ್ಶನಗೊಂಡಿದೆ.ಕರ್ನಾಟಕ ಮಹಾರಾಷ್ಟ್ರ ಒರಿಸ್ಸಾ ಆಂಧ್ರ ಪ್ರದೇಶ, ಕೇರಳ ರಾಜ್ಯಗಳ ರೈತರು ಬೆಳೆಸಿದ,ವಿವಿಧ ತಳಿಗಳ ಅರಸಿನ ,ಶುಂಠಿ, ಕೂವೆಗೆಡ್ಡೆ, ಬೇರು,ಔಷದೀಯ ಗುಣದ ಗೆಡ್ಡೆ ಗಳು ಕೆಸುವಿನ ಗೆಡ್ಡೆ,ಉತ್ತರಿ, ಪರ್ಪಲ್ ಯಾಮ್, ಮರ ಗೆಣಸು,ಬಿಳಿ ಸಿಹಿ ಗೆಣಸು, ಬಳ್ಳಿ ಬಟಾಟೆ, ಕಪ್ಪು ಅರಿಷಿಣ, ಕಪ್ಪು ಶುಂಠಿ, ಕಾಡು ಗೆಣಸು, ಮುಳ್ಳು ಗೆಣಸು, ಸುವರ್ಣ ಗೆಡ್ಡೆ, ಕೆಸು, ಹಳದಿ ಮತ್ತು ಕೆಂಪು ಸಿಹಿ ಗೆಣಸಿನ ಬೀಜದ ಗೆಡ್ಡೆ ಗೆಣಸು ಹಾಗೂ ವಿವಿಧ ಜಾತಿಯ ಗೆಡ್ಡೆ ಸಾವಯವ ಸಸಿ,ಸಬ್ಬಿಗೆ,ಕೊತ್ತಂಬರಿ,ಒಂದೆಲಗ,ಹರಿವೆ,ತರಕಾರಿ ಬೀಜ, ಸ್ಥಳೀಯ ಬಸಳೆ,ಬದನೆ, ನವಧಾನ್ಯ ಬೀಜಗಳು,ಜೇನು ತುಪ್ಪ ಮೇಳದ ವಿಶೇಷ ಆಕರ್ಷಣೆಯಾಗಿದೆ.
ಸೊಪ್ಪು ಕೃಷಿ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಗೆಡ್ಡೆ ಗೆಣಸು ಹಾಗೂ ಸೊಪ್ಪು ಕೃಷಿಯ ಬಗ್ಗೆ ಮಾಹಿತಿ ಕೈಪಿಡಿಯೂ ಕಾರ್ಯಕ್ರಮದಲ್ಲಿ ಬಿಡುಗಡೆಗೊಂಡಿದೆ. ಸೊಪ್ಪು ತರಕಾರಿ ಸಸಿ,ಬೀಜಗಳ ಮಾರಾಟದ ಜೊತೆ ಗೆಣಸುಗಳಿಂದ ತಯಾರಿಸಿದ ಕರಿದ ತಾಜಾ ಖಾದ್ಯ, ತಿನಿಸುಗಳ ಮಾರಾಟ ದಲ್ಲಿಯೂ ಜನ ಜಂಗುಳಿ ಕಂಡು ಬಂತು.
ಈ ಮೇಳಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ಕಂಡು ಬಂದಿದೆ ಎಂದು ಸಾವಯವ ಗ್ರಾಹಕ ಬಳಗದ ಅಧ್ಯಕ್ಷ ಎಸ್.ಎ.ಪ್ರಭಾಕರ ಶರ್ಮಾ ಹಾಗೂ ಕಾರ್ಯದರ್ಶಿ ಕೆ. ರತ್ನಾಕರ ಕುಳಾಯಿ ತೃಪ್ತಿ ವ್ಯಕ್ತಪಡಿಸಿದ್ದಾರೆ.

news-details