ಮಂಗಳೂರಿನ ಪಡೀಲ್- ಕಣ್ಣೂರಿನಲ್ಲಿರುವ ಪರಿಶ್ರವಿ ಪ್ರಿ-ಸ್ಕೂಲ್ ಇದರ ಪ್ರಥಮ ವಾರ್ಷಿಕೋತ್ಸವ ಜನವರಿ 3ರಂದು ನಡೆಯಿತು.
ಕಾರ್ಯಕ್ರಮದ ಮುಖ್ಯಅತಿಥಿ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಆರ್. ಈಶ್ವರ್ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು ಮತ್ತು ಶುಭಹಾರೈಸಿದರು.
ಯಕ್ಷಗಾನ ಭಾಗವತ, ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ ಶೆಟ್ಟಿ , ಕಂಕನಾಡಿ ಠಾಣೆಯ ಸಬ್ ಇನ್ಸ್ಪೆಕ್ಟರ್ ಯೋಗೇಶ್ವರನ್, ಕಣ್ಣೂರು ವಾರ್ಡಿನ ಕಾರ್ಪೊರೇಟರ್ ಶ್ರೀಮತಿ ಚಂದ್ರಾವತಿ ವಿಶ್ವನಾಥ್ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಶಾಲೆಯಿಂದ ಕಲಿತು ನಿರ್ಗಮಿಸುತ್ತಿರುವ ಯುಕೆಜಿ ವಿದ್ಯಾರ್ಥಿಗಳಿಗೆ ಅತಿಥಿಗಳು ಕಿಂಡರ್ ಗಾರ್ಟನ್ ಪದವಿ ಪ್ರಮಾಣ ಪತ್ರಗಳನ್ನು ವಿತರಿಸಿದರು.
ಕಣ್ಣೂರು ವಾರ್ಡಿನ ಸದಸ್ಯರುಗಳಾದ ಗಣೇಶ್ ರೈ, ಪ್ರವೀಣ್ ಶೆಟ್ಟಿ, ಹಾಗೂ ರಾಹುಲ್, ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಶಾಲಾ ಆಡಳಿತಾಧಿಕಾರಿ ಹಾಗೂ ಪ್ರಾಂಶುಪಾಲರಾದಂತಹ ಶ್ರೀಮತಿ ಸಫಿಯಾ ಮಜೀದ್ ಇವರು ಅತಿಥಿಗಳನ್ನು ಸ್ವಾಗತಿಸಿದರು.ವಿದ್ಯಾರ್ಥಿಗಳಾದ ವರ್ಣಿಕಾ, ಸಮೃದ್ಧಿ, ನಿರ್ವಿಕ್, ಧ್ರುವಂತ್ ಕಾರ್ಯಕ್ರಮ ನಿರೂಪಣೆ ಮಾಡಿದರು.
ಪುಟ್ಟ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮವು ಸಭಿಕರ ಮತ್ತು ಪೋಷಕರನ್ನು ಮನಸೂರೆಗೊಳಿಸಿತು.