ನೆಟ್ಟಣಿಗೆಮುಡ್ನೂರು(ಕರ್ನೂರು) ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ ಬಹಳ ವಿಜೃಂಭಣೆಯಿಂದ ನಡೆಯಿತು.
ಪುತ್ತೂರು ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢ ಶಾಲಾ ವಿಭಾಗದ ದೈಹಿಕ ಶಿಕ್ಷಣ ಶಿಕ್ಷಕಿ ಗೀತಾಂಜಲಿ k c.ಇವರು ದ್ವೀಪ ಪ್ರಜ್ವಲಿಸಿ ,ಕ್ರೀಡೆ ಗೆ ವಯಸ್ಸಿನ ಇತಿ ಮಿತಿ ಇಲ್ಲ ಸಾಧನೆ ಮಾಡಬೇಕೆಂದಿದ್ದರೆ ಯಾವ ವಯಸ್ಸು ಕೂಡಾ ಅಡ್ಡಿಯಾಗದು ಹಾಗೆ ಸಮಯ ಶಿಸ್ತು ಅನ್ನೋದು ನಮ್ಮ ಕ್ರೀಡಾ ಮನೋಸ್ಪೂರ್ತಿಯಿಂದ ವಿಕಸನಗೊಳ್ಳಲು ಸಾಧ್ಯ, ಬದುಕಿನಲ್ಲಿ ಪ್ರೋತ್ಸಾಹ ಅನ್ನೋದು ದೀಪ,ಅದು ನಮ್ಮ ಬದುಕು ಮಾತ್ರವಲ್ಲದೆ ಸರ್ವರ ಭವಿಷ್ಯವನ್ನು ಹಸನಾಗಿಸುತ್ತದೆ ಎಂದು ಹೇಳಿ ಶುಭಹಾರೈಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಎಸ್. ಡಿ. ಎಂ. ಸಿ.ಅಧ್ಯಕ್ಷ ಬಿ. ಎಚ್. ಸೂಫಿ ಇವರು ವಹಿಸಿ ಮಾತನಾಡಿ ಶಾಲೆಯು ಅಭಿವೃದ್ಧಿಯತ್ತ ಸಾಗಬೇಕಾದರೆ ಎಲ್ಲಾ ಸಹೃದಯಿಗಳ ಸಹಕಾರ ಅಗತ್ಯ ಅಂತೆಯೇ ನಮ್ಮ ಶಾಲೆಯ ಮೇಲಿರುವ ಎಲ್ಲರ ಸಹಕಾರವನ್ನು ನೆನಪಿಸಿಕೊಂಡು ಕ್ರೀಡಾ ಕೂಟ ಕ್ಕೆ ಶುಭ ಹಾರೈಸಿದರು.
ಗ್ರಾಮ ಪಂಚಾಯತ್ ಸದಸ್ಯ ರಾಮ ಪಕ್ಕಳ ಇವರು ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿ ಸರ್ಕಾರಿ ಶಾಲೆಯಲ್ಲಿ ಇಂದಿಗೂ ವಿದ್ಯಾರ್ಥಿಗಳ ಹೆಚ್ಚಿನ ದಾಖಲಾತಿ ಅನ್ನೋದು ಇದ್ದರೆ ಅದು ನಮ್ಮ ಕರ್ನೂರು ಶಾಲೆಯಲ್ಲಿ,ಎಲ್ಲರೂ ಏಕತೆಯ ಮನೋಭಾವನೆಯನ್ನು ಒಗ್ಗೂಡಿಸಿ ಕೊಂಡಿರುವುದನ್ನು ಶ್ಲಾಘಿಸಿ ,ಶಾಲೆಯ ಸರ್ವತೋಮುಖ ಬೆಳವಣಿಗೆಗೆ ಊರಿನ ವಿದ್ಯಾಭಿಮಾನಿ ಹಿರಿಯ ವಿದ್ಯಾರ್ಥಿಗಳು ಒಗ್ಗೂಡ ಬೇಕೆಂಬ ಎಂದು ಹೇಳಿದರು.
ಸುನೀಲ್ ಶೆಟ್ಟಿ ಕರ್ನೂರು ಬಾವ ಇವರು ದ್ವಜವಂದನೆ ಸ್ವೀಕರಿಸಿದರು.ಹಸನ್ ಶಾಮಿಲ್ ಕ್ರೀಡಾ ಪ್ರತಿಜ್ಞೆ ವಾಚಿಸಿದರು
ಪಂಚಾಯತ್ ಸದಸ್ಯ ಕುಮಾರ ನಾಥ ಪೂಜಾರಿ,ಗಣೇಶ್ ಗೋರಿಗದ್ದೆ, ಹಿರಿಯ ವಿದ್ಯಾರ್ಥಿಗಳಾದ ರಫೀಕ್ ಅಡ್ಕ,ತಾಜುದ್ದೀನ್ M.A,ಶಿಕ್ಷಕಿಯರಾದ ಸಾವಿತ್ರಿ, ಆಶಾಲತಾ, ಅರುಣಾ, ಹಲೀಮಾ ನಜೀಮುನ್ನಿಸ, ಸವಿತಾ ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕ ರಮೇಶ್ ಶಿರ್ಲಾಲ್ ಸ್ವಾಗತಿಸಿದರು.ಶಿಕ್ಷಕಿ ವಿಜೇತಾ ಕೆ ವಂದಿಸಿದರು. ಶಿಕ್ಷಕಿ ಲತಾ ರಮೇಶ್ ಇವರು ಕಾರ್ಯಕ್ರಮ ನಿರೂಪಿಸಿದರು.