ಪಟ್ಟೆ ವಿದ್ಯಾ ಸಂಸ್ಥೆಯ ಶಾಲೆಗಳಾದ ಶ್ರೀ ಕೃಷ್ಣ ಹಿರಿಯ ಪ್ರಾಥಮಿಕ ಶಾಲೆ ಪಟ್ಟೆ ಮತ್ತು ಪ್ರತಿಭಾ ಪ್ರೌಢಶಾಲೆ ಪಟ್ಟೆ ಇದರ ಪ್ರತಿಭಾ ಪುರಸ್ಕಾರ ಮತ್ತು ದಿನಾಂಕ 30.11.24ರಂದು ನಿವೃತ್ತಿ ಗೊಂಡಿರುವ ಶ್ರೀ ವಿಠಲ ಎಂ ದ್ವಿತೀಯ ದರ್ಜೆ ಸಹಾಯಕರು ಅವರಿಗೆ ಬೀಳ್ಕೊಡುಗೆ ಸಮಾರಂಭವು ಜ. 7ರಂದು ಪಟ್ಟೆ ವಿದ್ಯಾ ಸಂಸ್ಥೆಗಳ ಡಾ. ಬಾಲಕೃಷ್ಣ ಭಟ್ ರಂಗಮಂದಿರದಲ್ಲಿ ನಡೆಯಿತು.
ಪಟ್ಟೆ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಪಿ ವೇಣುಗೋಪಾಲ್ ಇವರು ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾ ಸಂಸ್ಥೆ ಶಿಕ್ಷಣದ ಜೊತೆ ಗ್ರಾಮೀಣ ಮಕ್ಕಳ ಮೂಲಭೂತ ಸೌಲಭ್ಯ ಗಳನ್ನು ಪೂರೈಸಲಾಗಿದೆ.ಮಕ್ಕಳ ದಾಖಲಾತಿ ಸಂಖ್ಯೆ ಹೆಚ್ಚಿಸಲು ಎಲ್ಲರ ಪ್ರಯತ್ನ ಅಗತ್ಯ ಇದೆ. ನಿವೃತ್ತಿ ಹೊಂದಿದ ವಿಠಲ ಇವರ ಬಗ್ಗೆ ಹೆಮ್ಮೆ ಇದೆ. ಎಲ್ಲರಿಗೂ ಪ್ರೀತಿ ಪಾತ್ರರಾಗಿದ್ದಾರೆ. ದೈಹಿಕ ಶಿಕ್ಷಣ ಶಿಕ್ಷಕ ಮೋನಪ್ಪ,ರಾಷ್ಟ್ರಮಟ್ಟದಲ್ಲಿ ಸಾಧನೆ ಗೈದ ವಿದ್ಯಾರ್ಥಿನಿ ತನುಶ್ರೀ ಕೀಡಾಕ್ಷೇತ್ರದ ಸಾಧನೆ ಶ್ಲಾಘನೀಯ. ವಿದ್ಯಾ ಸಂಸ್ಥೆ ಕ್ರೀಡಾಕ್ಷೇತ್ರದ ಜೊತೆ ಶೈಕ್ಷಣಿಕವಾಗಿಯೂ ಮುಂದೆ ಇದೆ ಎಂದು ಹೇಳಿ ಉತ್ತಮ ಫಲಿತಾಂಶಕ್ಕೆ ಕಾರಣಕರ್ತರಾದ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಅಭಿನಂದನೆಗಳನ್ನೂ ಸಲ್ಲಿಸಿದರು.
.ವಿದ್ಯಾ ಸಂಸ್ಥೆಗಳ ಸಂಚಾಲಕ ಪಿ ನಾರಾಯಣ ಭಟ್ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಬಡಗನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷ ರಾದ ಪುಷ್ಪಲತಾ ಮಾತನಾಡಿ ಪ್ರತಿಭಾ ಪುರಸ್ಕಾರ ಮಕ್ಕಳಿಗೆ ಸಂಭ್ರಮ ದಿನವಾಗಿದೆ ಎಂದರು.
ಶಿಕ್ಷಣ ಇಲಾಖೆಯ ಬಿಆರ್ ಪಿ ರತ್ನ ಕುಮಾರಿ ಮಾತನಾಡಿ ಗ್ರಾಮೀಣ ಪ್ರ ದೇಶದಲ್ಲಿ ಸಂಸ್ಥೆಯನ್ನು ಮುನ್ನೆಡೆ ಸುವುದು ಸಾಹಸದ ಕೆಲಸವಾಗಿದೆ. ಗುಣಮಟ್ಟದ ಶಿಕ್ಷಣ ಜೊತೆ ಪಠ್ಯೇತರ ಚಟುವಟಿಕೆ ಕಾರ್ಯ ಶ್ಲಾಘನೀಯ ಎಂದು ಹೇಳಿದರು.ಕುಂಬ್ರ ಕ್ಲಸ್ಟರ್ ಮುಖ್ಯಸ್ಥರಾದ ಶಶಿಕಲಾ ಮಾತನಾಡಿ ಮಕ್ಕಳ ಶೈಕ್ಷಣಿಕ, ಕ್ರೀಡಾ ಚಟುವಟಿಕೆ ಗಳ ಮೂಲಕ ಸಾಧನೆ ಮಾಡಿದೆ ಎಂದು ಶುಭ ಹಾರೈಸಿದರು
ಪಟ್ಟೆ ವಿದ್ಯಾಸಂಸ್ಥೆಗಳ ನಿರ್ದೇಶಕರಾದ ಶಿವಪ್ರಸಾದ್ ಪಿ,ನಹುಷ ಪಿ.ವಿ, ಶಿರೀಷ್ ಪಿ ಬಿ, ಪ್ರ ತಿಭಾ ಪ್ರೌಢಶಾಲೆಯ ಎಸ್ ಡಿಎಂಸಿ ಅಧ್ಯಕ್ಷರಾದ ಲಿಂಗಪ್ಪ ಗೌಡ ಮೋಡಿಕೆ, ಶ್ರೀ ಕೃಷ್ಣ ಹಿರಿಯ ಪ್ರಾಥಮಿಕ ಶಾಲೆಯ ಎಸ್ ಡಿಎಂಸಿ ಅಧ್ಯಕ್ಷರಾದ ಕೇಶವ ಪ್ರಸಾದ್ ನೀಲಗಿರಿ ಉಪಸ್ಥಿತರಿದ್ದರು.
ಶ್ರೀ ಕೃಷ್ಣ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ರಾದ ರಾಜ್ ಗೋಪಾಲ್, ಪ್ರತಿಭಾ ಪ್ರೌಢಶಾಲೆ ಪಟ್ಟೆ ಇದರ ಮುಖ್ಯ ಶಿಕ್ಷಕಿ ಸುಮನಾ ವಾರ್ಷಿಕ ವರದಿ ವಾಚಿಸಿದರು.ಗೌರವ ಶಿಕ್ಷಕಿ ಪುಷ್ಪ, ಮಮತಾ, ಶೈಲಾಶ್ರೀ ಬಹುಮಾನ ಪಟ್ಟಿ ವಾಚಿಸಿದರು.ಶಿಕ್ಷಕಿ ಭವಿತಾ ಇವರ ನಿವೃತ್ತಿ ಗೊಂಡಿರುವ ಶ್ರೀ ವಿಠಲ ಎಂ( ದ್ವಿತೀಯ ದರ್ಜೆ ಸಹಾಯಕ)ರ ಪರಿಚಯ ಮಾಡಿದರು.ಶಿಕ್ಷಕಿ ಜಯಶ್ರೀ ಸನ್ಮಾನ ಪತ್ರ ವಾಚಿಸಿದರು.
ಪ್ರತಿಭಾ ಪ್ರೌಢಶಾಲೆಯ ಶಿಕ್ಷಕಿ ಪ್ರೀತಿ ಕುಮಾರಿ ಎಂ ಪಿ ಸ್ವಾಗತಿಸಿದರು. ಶಿಕ್ಷಕ ರಾಮಚಂದ್ರಪ್ಪ ವಂದಿಸಿದರು. ಶಿಕ್ಷಕ ವಿಶ್ವನಾಥ ಗೌಡ ಬೊಳ್ಳಾಡಿ ಕಾರ್ಯಕ್ರಮ ನಿರೂಪಿಸಿದರು
ಸನ್ಮಾನ ಕಾರ್ಯಕ್ರಮ
ಪಟ್ಟೆ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಯಿಂದ, ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕ ವರ್ಗದವರಿಂದ, ಶ್ರೀಮತಿ ಶಂಕರಿ ನಾರಾಯಣ ಪಾಟಾಳಿ (ನಿವೃತ್ತ ಮುಖ್ಯ ಗುರುಗಳು), ಶ್ರೀಮತಿ ಯಮುನಾ ಕೃಷ್ಣ ನಾಯ್ಕ್ (ನಿವೃತ್ತ ಮುಖ್ಯ ಗುರುಗಳು), ಶ್ರೀ ಗೋಪಾಲಕೃಷ್ಣ ಭಟ್ (ನಿವೃತ ಶಿಕ್ಷಕರು),ಪ್ರಾಥಮಿಕ ಶಾಲಾ ಮತ್ತು ಪ್ರೌಢಶಾಲಾ ಎಸ್ ಡಿ ಎಂ ಸಿ ವತಿಯಿಂದ ಇತ್ತೀಚೆಗೆ ನಿವೃತ್ತರಾದ ವಿಠಲ ಸುವರ್ಣ ರವರನ್ನು ಸನ್ಮಾನಿಸುವ ಕಾರ್ಯಕ್ರಮ ನಡೆಯಿತು.
ಸನ್ಮಾನ ಸ್ವೀಕರಿಸಿದ ವಿಠಲ ಸುವರ್ಣ ಮಾತನಾಡಿ ಜನ್ಮ ಸಾರ್ಥಕ ವಾಗಿದೆ.25ವರ್ಷ ಸೇವೆ ತೃಪ್ತಿ ತಂದಿದೆ. ಸಮಾಜ ವಿಜ್ಞಾನ ಶಿಕ್ಷಕನಾಗಿ ಸೇವೆಗೆ ಸೇರಿಕೊಂಡೆ. ಮಕ್ಕಳು ನೊಂದಿಗೆ ಬೆರೆಯಲು ಸಂತೋಷವಾಗುತ್ತದೆ. ಊರಿನ ಸಹಕಾರ ದೊಂದಿಗೆ ಸಂಸ್ಥೆ ಉತ್ತಮ ರೀತಿಯಲ್ಲಿ ಬೆಳಗಲಿ, ಊರಿನ ಪ್ರೀತಿ ವಿಶ್ವಾಸ ನನ್ನ ಮೇಲೆ ಇರಲಿ ಎಂದು ಹೇಳಿದರು.
ಅಭಿನಂದನಾ ಕಾರ್ಯಕ್ರಮ
ಪಟ್ಟೆ ಪ್ರತಿಭಾ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಮೋನಪ್ಪ ಎಂ, ರಾಷ್ಟ್ರಮಟ್ಟದ ಕ್ರೀಡಾಪಟು ತನುಶ್ರೀ ರೈ, 2023 24 ನೇ ಸಾಲಿನ ಎಸ್‍ಎಸ್‍ಎಲ್‍ಸಿಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು.
ಪಟ್ಟೆ ಪ್ರತಿಭಾ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಮೋನಪ್ಪ ಎಂ ಮಾತನಾಡಿ ಗುಂಪು ಆಟಗಳ ಜತೆ ವಿದ್ಯಾರ್ಥಿಗಳು ವೈಯಕ್ತಿಕ ಕ್ರೀಡೆಗಳಲ್ಲಿ ಸಾಧನೆ ಮಾಡಿದ್ದಾರೆ. ಆಡಳಿತ ಮಂಡಳಿ,ಶಾಲಾ ಶಿಕ್ಷಕರ, ಪೋಷಕರ ಸಹಕಾರದಿಂದ ಸುತ್ತಮುತ್ತ ಇರುವ ಪ್ರತಿಷ್ಠಿತ ವಿದ್ಯಾಸಂಸ್ಥೆಗಳ ನಡುವೆ ಸಾಧನೆ ಮಾಡಲು ಸಾಧ್ಯವಾಗಿದೆ.ಸಂಸ್ಥೆ ಯ ಅಭಿವೃದ್ಧಿ ಗೆ ದುಡಿಯುತ್ತೇನೆ ಎಂದು ಹೇಳಿದರು.ರಾಷ್ಟ್ರಮಟ್ಟದ ಕ್ರೀಡಾಪಟು, ವಿದ್ಯಾರ್ಥಿನಿ ತನುಶ್ರೀ ರೈ ಮಾತನಾಡಿದರು.ದಾನಿಗಳಾದ ಕುಂಬ್ರ ಮಾತೃಶ್ರೀ ಅರ್ಥ್ ಮೂವರ್ಸ್ ನ ಮೋಹನ್ ದಾಸ್ ರೈ, ಸುಶಾ ಡ್ರೆಸ್ಸೆಸ್ ಸುರೇಶ್ ಕುಮಾರ್ ಉಪಸ್ಥಿತರಿದ್ದರು.
ಅಪರಾಹ್ನ ಗಂಟೆ 2ರಿಂದ ಪಟ್ಟೆ ವಿದ್ಯಾ ಸಂಸ್ಥೆ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.