ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಾಲಯದಲ್ಲಿ ದಿನಾಂಕ 12-01-2025ನೇ ಆದಿತ್ಯವಾರ ಮೊದಲ್ಗೊಂಡು ದಿನಾಂಕ 14-01-2025ನೇ ಮಂಗಳವಾರ
ತನಕ ಶ್ರೀ ಕ್ಷೇತ್ರ ತಂತ್ರಿವರ್ಯರಾದ ಬ್ರಹ್ಮಶ್ರೀ ವಾಸುದೇವ ತಂತ್ರಿಯವರ ಮಾರ್ಗದರ್ಶನದಲ್ಲಿ ಬ್ರಹ್ಮಶ್ರೀ ಕುಂಟಾರು ಶ್ರೀ ರವೀಶ್ ತಂತ್ರಿಯವರ ನೇತೃತ್ವದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವವು ಪೂರ್ವ ಸಂಪ್ರದಾಯದಂತೆ ಜರಗಲಿರುವುದು.
ದಿನಾಂಕ: 12-01-2015ನೇ ಆದಿತ್ಯವಾರ ಬೆಳಿಗ್ಗೆ ಗಂಟೆ 9.00ರಿಂದ ಬಲಿವಾಡು ಶೇಖರಣೆ,ಹಸಿರುವಾಣಿ ಹೊರೆಕಾಣಿಕೆ ಸಂಗ್ರಹಿಸುವುದು.
ಸಂಜೆ ಗಂಟೆ 6.00ರಿಂದ ಉಗ್ರಾಣ ತುಂಬಿಸುವುದು,ರಾತ್ರಿ ಗಂಟೆ 8.00ರಿಂದ ಮಹಾಪೂಜೆ, ಮಹಾ ಗಣಪತಿ ಪೂಜೆ, ಅತ್ತಾಳಪೂಜೆ ಪ್ರಾರ್ಥನೆ, ಪ್ರಸಾದ ವಿತರಣೆ, ಅನ್ನ ಪ್ರಸಾದ.ಸಂಜೆ ಗಂಟೆ 7.00ರಿಂದ ಭರತನಾಟ್ಯ
(ವಿದುಷಿ ಶ್ರೀಮತಿ ಸುಜಾತ ಸುಧೀರ್ - ನಾಟ್ಯಶಿವ ನೃತ್ಯಶಾಲೆ, ಕಾಸರಗೋಡು ಇವರಿಂದ)
ದಿನಾಂಕ : 13-01-2025ನೇ ಸೋಮವಾರ ಬೆಳಿಗ್ಗೆ ಗಂಟೆ 6.30ಕ್ಕೆ ಕ್ಷೇತ್ರಕ್ಕೆ ತಂತ್ರಿಗಳ ಆಗಮನ.ಬೆಳಿಗ್ಗೆ ಗಂಟೆ 6.30ರಿಂದ ದೇವರಿಗೆ ಸ್ವರ್ಣಗಿಂಡಿ, ಸ್ವರ್ಣಆಭರಣ ಅರ್ಪಿಸುವುದು, ಜಯ-ವಿಜಯರ ಪ್ರತಿಷ್ಠೆ ಹಾಗೂ ನೂತನ ಅಶ್ವತ್ಥ ಕಟ್ಟೆಯ ಲೋಕಾರ್ಪಣೆ.
ಬೆಳಿಗ್ಗೆ ಗಂಟೆ 7-00ಕ್ಕೆ ಶ್ರೀ ಕ್ಷೇತ್ರದ ಮೂಲಸ್ಥಾನ ಪವಿತ್ರ ತೀರ್ಥದ ಕಲ್ಲಿನಿಂದ ಶಂಖ, ಜಾಗಟೆ,ವಾದ್ಯಾಮೇಳದೊಂದಿಗೆ ತೀರ್ಥ ತರಲು ಹೊರಡುವುದು.ಬೆಳಿಗ್ಗೆ ಗಂಟೆ 8.00ರಿಂದ ಮಹಾಗಣಪತಿ ಹವನ, ನವಕಾಭಿಷೇಕ.ಬೆಳಿಗ್ಗೆ ಗಂಟೆ 8.00ರಿಂದ 10.00ರ ತನಕ ಭಜನಾ ಸಂಕೀರ್ತನ ಸೇವೆ.
(ಸರ್ವಶಕ್ತಿ ಮಹಿಳಾ ಭಜನಾ ತಂಡ, ಪಡುಮಲೆ ಮತ್ತು ವರಮಹಾಲಕ್ಷ್ಮೀ ಮಹಿಳಾ ತಂಡ ಪಡುಮಲೆ ಇವರಿಂದ)ಬೆಳಿಗ್ಗೆ ಗಂಟೆ 10.30ರಿಂದ ತುಲಾಭಾರ ಸೇವೆ, ಮಹಾಪೂಜೆ, ಪಲ್ಲಪೂಜೆ, ಬಲಿಹೊರಡುವುದು, ಪ್ರಸಾದ ವಿತರಣೆ, ಮಹಾಅನ್ನಸಂತರ್ಪಣೆ.
ಸಂಜೆ ಗಂಟೆ 6.00ರಿಂದ 7.00ರ ತನಕ : ತಾಯಂಬಕ (ನೀಲೇಶ್ವರ ಗಂಗಾಧರ ಮಾರಾರ್ ಮತ್ತು ಬಳಗದವರಿಂದ)
ರಾತ್ರಿ ಗಂಟೆ 7.00ರಿಂದ ಶ್ರೀ ದೇವರ ಉತ್ಸವ ಬಲಿ, ಶ್ರೀ ಭೂತ ಬಲಿ, ನೃತ್ಯಬಲಿ, ಕಟ್ಟೆ ಪೂಜೆ (ವಸಂತ ಕಟ್ಟೆ ಪೂಜೆಯಲ್ಲಿ ಕಟ್ಟೆ ಪೂಜೆ ಮಾಡಿಸುವವರಿಗೆ ಅವಕಾಶವಿದೆ)
ಸುಡುಮದ್ದು ಪ್ರದರ್ಶನ,ಅನ್ನಪ್ರಸಾದ
ದಿನಾಂಕ : 14-01-2025ನೇ ಮಂಗಳವಾರ
ಬೆಳಿಗ್ಗೆ ಗಂಟೆ 9.00ರಿಂದ ಶ್ರೀ ದೇವರ ಬಲಿ ಹೊರಡುವುದು, ದರ್ಶನ ಬಲಿ, ಬಟ್ಟಲು ಕಾಣಿಕೆ, ಮಂತ್ರಾಕ್ಷತೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಪ್ರಸಾದ ನಡೆಯಲಿದೆ.ರಾತ್ರಿ ಗ೦ಟೆ 8.00ರಿಂದ :ಶ್ರೀ ದೇವರಿಗೆ ರಂಗಪೂಜೆ, ಅನ್ನ ಪ್ರಸಾದ (ರಂಗಪೂಜೆ ಸೇವೆ ಮಾಡಿಸುವವರಿಗೆ ಅವಕಾಶವಿದೆ)
ರಾತ್ರಿ ಗ೦ಟೆ 8.00ರಿಂದ“ನಿರೆಲ್”ತುಳು ಸಾಮಾಜಿಕ ಹಾಸ್ಯಮಯ ನಾಟಕ (ಸ್ಪರ್ಶ ಕಲಾ ತಂಡ, ಸುರತ್ಕಲ್ ಇವರಿಂದ) ನಡೆಯಲಿದೆ.
ಜಾತ್ರೋತ್ಸವಕ್ಕೆ ಊರ ಪರವೂರ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ದೇವರ ಪ್ರಸಾದವನ್ನು ಸ್ವೀಕರಿಸಿ, ತನು-ಮನ-ಧನಗಳಿಂದ ಸಹಕರಿಸಿ, ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ದೇವಾಲಯದ ಪ್ರಕಟಣೆ ತಿಳಿಸಿದೆ.
ನೇರ ಪ್ರಸಾರ
newstime ಕನ್ನಡ ವಾಹಿನಿಯಲ್ಲಿ ಪಡುಮಲೆ ಜಾತ್ರೋತ್ಸವದ ಜ. 14ರಂದು ದೇವರ ದರ್ಶನ ಬಲಿ, ಬಟ್ಟಲುಕಾಣಿಕೆಯ ನೇರಪ್ರಸಾರ (LIVE)ವಾಗಲಿದೆ.ದೇವಸ್ಥಾನದ ಆವರಣದಲ್ಲಿ ಎಲ್ ಸಿ ಡಿ ಸ್ಕ್ರೀನ್ ಪರದೆ ಮೂಲಕ ಹಾಗೂ ಮೊಬೈಲ್ ಫೋನ್ ನಲ್ಲಿ ಕೂಡ LIve ವೀಕ್ಷಿಸಬಹುದಾಗಿದೆ. ಶುಭಕೋರುವ ಜಾಹೀರಾತುನ್ನು ನೀಡುವವರು ಕೆ ಮಾಧವ ನಾಯಕ್ ಇಂದಾಜೆ 9980883407,ವಾಟ್ಸಪ್ ಸಂಖ್ಯೆ 6363475075
ಸಂಪರ್ಕಿಸಬಹುದಾಗಿದೆ.