ಜ.14: ಶಬರಿನಗರ ಸ್ವಾಮಿ ಕೊರಗಜ್ಜ ಕ್ಷೇತ್ರದಲ್ಲಿ ಮಕರ ಸಂಕ್ರಮಣದಂದು ವಿಶೇಷ ಕಾರ್ಯಕ್ರಮ

ಪುತ್ತೂರು

news-details

ಪುತ್ತೂರು ತಾಲೂಕು ಪಡುವನ್ನೂರು ಗ್ರಾಮದ ಸುಳ್ಯಪದವು ಶಬರಿನಗರ ಸ್ವಾಮಿ ಕೊರಗಜ್ಜ ಕ್ಷೇತ್ರದಲ್ಲಿ ಮಕರ ಸಂಕ್ರಮಣ(ಜ. 14)ರಂದು ವಿಶೇಷ ಕಾರ್ಯಕ್ರಮಗಳು ಸಂಜೆಯಿಂದ ನಡೆಯಲಿದೆ.
ಸಂಜೆ ಗಂಟೆ 6-00ರಿಂದ ಸಂಗೀತ ಶಿಕ್ಷಕ ಶ್ರೀ ದಾಮೋದರ ಮರದಮೂಲೆ ಇವರ ಶಿಷ್ಯಂದಿರಿಂದ ಸ್ವಾಮಿ ಕೊರಗಜ್ಜ ಬಾಲ ಭಜನಾ ಸಂಘ, ಶಬರಿನಗರ ಇವರಿಂದ ಭಜನೆ
ರಾತ್ರಿ ಗಂಟೆ 8-00ರಿಂದ ಈಶ್ವರಮಂಗಲ ವರ್ಣಂ ನೃತ್ಯ ತಂಡದಿಂದ ನೃತ್ಯ ಕಾರ್ಯಕ್ರಮ,ಸುಳ್ಯಪದವು ಆಯುಧ ಪೂಜಾ ಸೇವಾ ಸಮಿತಿ ಅಧ್ಯಕ್ಷರಾದ ಶ್ರೀ ಗಿರೀಶ್ ಕನ್ನಡ್ಕ
ಇವರು ನೂತನ ರಂಗ ಮಂಟಪವನ್ನುಉದ್ಘಾಟಿಸಲಿದ್ದಾರೆ
ನೇಮೋತ್ಸವದ ಆಮಂತ್ರಣ ಪತ್ರಿಕೆಯನ್ನು ಸುಳ್ಯಪದವು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಶ್ರೀ ಅರುಣ್ ಕುಮಾರ್ ಇವರು ಬಿಡುಗಡೆಗೊಳಿಸಲಿದ್ದಾರೆ.
ನೇಮೋತ್ಸವದ ಅದೃಷ್ಟ ಚೀಟಿಯನ್ನು ಸುಳ್ಯಪದವು ಶ್ರೀ ಮಂಜುನಾಥ ರೋಡ್ ಲೈನ್ಸ್,ಮಾಲಕರು ಬಿಡುಗಡೆಗೊಳಿಸಲಿದ್ದಾರೆ.ನಂತರ ಅನ್ನ ಪ್ರಸಾದ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

news-details