ಮಂಗಳೂರು ಕೋಟೆಕಾರ್ ಬ್ಯಾಂಕ್ ರಾಬರಿ ಪ್ರಕರಣದಲ್ಲಿ ಮುಂಬೈ ಮೂಲದ ಗ್ಯಾಂಗ್ ನಿಂದ ದರೋಡೆ ನಡೆದಿದೆ.
ತಮಿಳುನಾಡು ಮೂಲದ ದರೋಡೆಕೋರರಿಂದ ದರೋಡೆ ನಡೆದಿದೆ.ದರೋಡೆಗೆಂದೇ ಮಂಗಳೂರಿಗೆ ಬಂದಿದ್ದ ದರೋಡೆಕೋರರು
ದರೋಡೆ ಮಾಡಿ ಕೇರಳದಿಂದ ತಮಿಳುನಾಡುಗೆ ಪರಾರಿಯಾಗಿದ್ದರು.
ಮುಂಬೈಯಿಂದ ಮಾಹಿತಿ ಕಲೆ ಹಾಕಿ ತಮಿಳುನಾಡಿಗೆ ತೆರಳಿ ಬಂಧನ ಮಾಡಿದ್ದೇವೆ, ಮುರುಗಂಡಿ ದೇವರ್
ಈ ಪ್ರಕರಣದ ಮುಖ್ಯ ಕಿಂಗ್ ಪಿನ್ ಪ್ರಕಾಶ್@ ಜೋಶ್ವಾ ,ಮನಿವೆನನ್ ನನ್ನೂ ತಮಿಳುನಾಡಿನ ತಿರುವನ್ನೇಲಿಯಿಂದ
ಬಂಧನ ಮಾಡಿದ್ದೇವೆ.
ಬಂಧಿತರಿಂದ ಫಿಯೆಟ್ ಕಾರ್ ವಶ ಪಡಿಸಿದ್ದೇವೆ . ಮಹಾರಾಷ್ಟ್ರ ಮೂಲದ ಫಿಯೆಟ್ ಕಾರ್ ದರೋಡೆ ಮಾಡಲು ಬಳಸಿದ್ದರು
ಮುರುಗುಂಡಿ ಎಂಬುವವರು ಕಾರ್ ನ್ನು ತಿರುವನ್ನಲಿ ತನಕ ಕೊಂಡು ಹೋಗಿದ್ದರು ಎರಡು ಗೋಣಿ ಚೀಲ ವಶಪಡಿಸಿಕೊಂಡಿದ್ದೇವೆ.
ಗುಪ್ತಚರ ಇಲಾಖೆ ಈ ಪ್ರಕರಣ ಬೇಧಿಸಲು ಸಹಾಯ ಮಾಡಿದೆ. ತಲ್ವಾರ್ ಮತ್ತು ಪಿಸ್ತೂಲ್ ವಶಪಡಿಸಿಕೊಂಡಿದ್ದೇವೆ
ಸ್ಥಳೀಯರು ಈ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆ ಇದೆ. ಸ್ಥಳೀಯರ ಬೆಂಬಲ ಇಲ್ಲದೆ ಈ ಕೃತ್ಯ ಮಾಡಲು ಸಾಧ್ಯ ಇಲ್ಲ
ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತೇವೆ ಎಂದು ಮಂಗಳೂರು ನಗರ
ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕೋಟೆಕಾರ್ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನಲ್ಲಿ ಕಳೆದ ಶುಕ್ರವಾರ 12 ಕೋಟಿ ರೂಪಾಯಿ ಬೆಲೆ ಬಾಳುವ ಚಿನ್ನಭರಣವನ್ನು ದರೋಡೆಕೋರರು ಲೂಟಿ ಮಾಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳೂರು ಭೇಟಿ ವೇಳೆ ಈ ಕೃತ್ಯ ನಡೆದಿತ್ತು.