ಜ.22ರಿಂದ ಜ.28 ರ ತನಕ ಪಾಣಾಜೆ ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವರ ಜಾತ್ರೋತ್ಸವ

ಪುತ್ತೂರು

news-details

ಪೂರ್ವ ಸಂಪ್ರದಾಯದಂತೆ ಪಾಣಾಜೆ ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವರ ಜಾತ್ರೋತ್ಸವವು ತಾರೀಕು 22-1-2025ನೇಬುಧವಾರದಿಂದ ತಾರೀಕು28-1-2025 ನೇ ಮಂಗಳವಾರದ ತನಕ ನಡೆಯಲಿದೆ.
23-1-2025ನೇ ಗುರುವಾರ ರಾತ್ರಿ ಕಾರ್ತಿಕ ಪೂಜೆ, ಅತ್ತಾಳ ಪೂಜೆ, ಗಣಪತಿ ಪ್ರಾರ್ಥನೆ.ಜ.23ರಂದು ಬೆಳಿಗ್ಗೆ ಗಂಟೆ 9-00ರಿಂದ ತುಲಾಭಾರ ಸೇವೆಮಧ್ಯಾಹ್ನ : ಬಲಿ ಉತ್ಸವ, ಮಹಾಪೂಜೆ, ಸಮಾರಾಧನೆ,ರಾತ್ರಿ ಬಲಿ ಉತ್ಸವ, ಕಟ್ಟೆಪೂಜೆ
ಜ. 24ಬೆಳಿಗ್ಗೆ ಗಂಟೆ 10ಕ್ಕೆಶ್ರೀ ದೇವರ ದರ್ಶನ ಬಲಿ ಉತ್ಸವ, ಬಟ್ಟಲು ಕಾಣಿಕೆ, ಅನ್ನಸಂತರ್ಪಣೆ : ಶ್ರೀ ಸನ್ನಿಧಿಯಲ್ಲಿ ದೇವರಿಗೆ ರಂಗಪೂಜೆ ನಂತರಶ್ರೀ ದೈವಗಳ ಕೀರ್ವಾಳು ಭಂಡಾರ ಆರ್ಲಪದವು ದೈವಸ್ಥಾನಕ್ಕೆ ಕೊಂಡು ಹೋಗಿ ಧ್ವಜಾರೋಹಣ ನಂತರ ತಂಬಿಲಗಳು ಜ. 25- ರಾತ್ರಿ ಮಕರ ತೋರಣ ಏರಿಸುವುದು, ಪಾಲಕ್ಕಿ ಉತ್ಸವ ನಂತರ ತಂಬಿಲಗಳು.ಜ. 26 ಕಿನ್ನಿಮಾಣಿ ದೈವದ ನೇಮ ರಾತ್ರಿ : ಪಾಲಕ್ಕಿ ಉತ್ಸವ, ನಂತರ ತಂಬಿಲಗಳು.ಜ.27 ಬೆಳಿಗ್ಗೆ ಪೂಮಾಣಿ ದೈವದ ನೇಮ, ರಾತ್ರಿ ಪಾಲಕ್ಕಿ ಉತ್ಸವ ನಂತರ ತಂಬಿಲಗಳು ಜ. 28 ಮಲರಾಯ ದೈವದ ನೇಮ ನಂತರ ಪಿಲಿಭೂತ ದೈವದ ನೇಮ ರಾತ್ರಿ ಅವಕೃತ ಸ್ನಾನಕ್ಕೆ ಕೊಂಡೆಪ್ಪಾಡಿಗೆ ಹೋಗಿ ಕಟ್ಟೆಪೂಜೆ ನಂತರ ದೈವಸ್ಥಾನಕ್ಕೆ ಬಂದು ಧ್ವಜ ಅವರೋಹಣ ನಂತರ ತಂಬಿಲಗಳು, ನವಕ ಶುದ್ಧಿ, ಮಂತ್ರಾಕ್ಷತೆ.ಜ. 29 ಬೆಳಿಗ್ಗೆ ಶ್ರೀ ದೈವಗಳ ಭಂಡಾರ ಶ್ರೀ ದೇವರ ಸನ್ನಿಧಿಗೆ ಕೊಂಡು ಹೋಗುವುದು.
ತಾವೆಲ್ಲರೂ ಉತ್ಸವದಲ್ಲಿ ಭಾಗವಹಿಸಿ ಶ್ರೀ ದೇವರ ಗಂಧಪ್ರಸಾದವನ್ನು ಮತ್ತು ಶ್ರೀ ದೈವಗಳ ಅರಸಿನಹುಡಿ ಪ್ರಸಾದವನ್ನು ಸ್ವೀಕರಿಸಿ, ಶ್ರೀ ದೇವರ ಹಾಗೂ ಶ್ರೀ ದೈವಗಳ ಕೃಪೆಗೆ ಪಾತ್ರರಾಗಬೇಕಾಗಿ ಅನುವಂಶಿಕ ಆಡಳಿತ ಮೊಕ್ತೇಸರ ಶ್ರೀಕೃಷ್ಣ ಬೋಳಿಲ್ಲಾಯ ತಿಳಿಸಿದ್ದಾರೆ.

news-details