ಕರ್ನಾಟಕ ಅಲೈಡ್ ಮತ್ತು ಹೆಲ್ತ್ ಕೇರ್ ವೃತ್ತಿನಿರತರ ಅಸೋಸಿಯೇಶನ್ ಮತ್ತು ಎಸ್-ವ್ಯಾಸ ಯೂನಿವರ್ಸಿಟಿಯ ವತಿಯಿಂದ ಬೆಂಗಳೂರಿನ ಸತ್ವ ಗ್ಲೋಬಲ್ ಸಿಟಿ ಮೈಸೂರು ರಸ್ತೆ ಕೆಂಗೇರಿಯಲ್ಲಿ 2025ನೇ ಸಾಲಿನ ಅಲೈಡ್ ಹೆಲ್ತ್ ಸೈನ್ಸ್ ಮತ್ತು ಪಿಸಿಯೋತೆರಪಿ ಅಲ್ಲದೆ ಎ.ಸಿ.ಬಿ.ಎಂ 2025ರ ಲೈಫ್ ಸೈನ್ಸ್ ಹೆಲ್ತ್ ಕೇರ್ ಪ್ರೋಫೆಷನಲ್ಸ್ ಕಾನ್ಫರೆನ್ಸ್ ಅಂಗವಾಗಿ ಎಹೆಚ್ಎಸ್ಕಾನ್2025ರ ಸಾಂಸ್ಕೃತಿಕ ಸಮಾರಂಭದಲ್ಲಿ ನಡೆದ ಗ್ರೂಪ್ ಡ್ಯಾನ್ಸ್ ವಿಭಾಗ & ಸೋಲೋಡ್ಯಾನ್ಸ್ ವಿಭಾಗದಲ್ಲಿ ಕು| ವಿಜಿತಾ ಶೆಟ್ಟಿ ಪ್ರಥಮ ಸ್ಥಾನವನ್ನು ಪಡೆದು ಹೆಮ್ಮೆಯಿಂದ ಬೀಗಿದ್ದಾರೆ.
ಎಂ.ಎಸ್ಸಿ ಸ್ನಾತಕ್ಕೋತ್ತರ ವಿದ್ಯಾರ್ಥಿಗಳ ವಿಭಾಗದಲ್ಲಿ ಪೋಸ್ಟರ್ ಪ್ರೆಸಂಟೇಶನ್ ಸ್ಪರ್ಧೆಯಲ್ಲಿ ಮಂಗಳ ಸಂಸ್ಥೆಯ ಶ್ರೀಮತಿ ನವ್ಯ ಎಂ. ರವರು ತೃತೀಯ ಸ್ಥಾನವನ್ನು ಗಳಿಸಿದರು.
ಸಂಸ್ಥೆಯ ಈ ಸಾಧನೆಗಳಿಗೆ ಸಾರ್ವಜನಿಕ ಮೆಚ್ಚುಗೆ ಅಪಾರವಾಗಿ ಲಭ್ಯವಾಯಿತು. ಸಂಸ್ಥೆಯ ಸ್ಥಾಪಕಾದ್ಯಕ್ಷರಾದ ಡಾ. ಗಣಪತಿ ಪಿ ಮತ್ತು ಉಪಾದ್ಯಕ್ಷರಾದ ಡಾ. ಅನಿತಾ ಜಿ ಭಟ್ ರವರು ಕಾಲೇಜಿನ ಡೀನ್ರಾದ ಪ್ರತಿಜ್ಞಾ ಸುಹಾಸಿನಿ ಜಿ. ಆರ್, ಮತ್ತು ಪ್ರಾದ್ಯಾಪಕಿ ಅಕ್ಷತಾ ಆಳ್ವ, ಅದ್ಯಾಪಕಾವೃಂದ ಅಲ್ಲದೆ ವಿದ್ಯಾರ್ಥಿಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು