ಜ. 29: ಬೆಟ್ಟಂಪಾಡಿಯಲ್ಲಿ ಅಡಿಕೆ ಎಲೆಚುಕ್ಕಿ ರೋಗದ ಸಮಗ್ರ ನಿಯಂತ್ರಣ ಹಾಗೂ ವೈಜ್ಞಾನಿಕ ರೀತಿಯಲ್ಲಿ ಲಾಭದಾಯಕ ಹೈನುಗಾರಿಕೆ ಮಾಹಿತಿ ಕಾರ್ಯಾಗಾರ

ಪುತ್ತೂರು

news-details

ಬೆಟ್ಟಂಪಾಡಿ ವಿನಾಯಕನಗರ ಶ್ರೀ ಸಿದ್ಧಿ ವಿನಾಯಕ ಸೇವಾ ಸಂಘ (ರಿ.), ಕಕ್ಕೂರು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ (ನಿ.) ಕಕ್ಕೂರು, ಬೆಟ್ಟಂಪಾಡಿ,ಕೃಷಿ ವಿಜ್ಞಾನ ಕೇಂದ್ರ ಮಂಗಳೂರು ದ.ಕ.ಇದರ ಜಂಟಿ ಸಹಯೋಗದಲ್ಲಿಅಡಿಕೆ ಎಲೆಚುಕ್ಕಿ ರೋಗದ ಸಮಗ್ರ ನಿಯಂತ್ರಣ ಹಾಗೂ ವೈಜ್ಞಾನಿಕ ರೀತಿಯಲ್ಲಿ ಲಾಭದಾಯಕ ಹೈನುಗಾರಿಕೆ ಮಾಹಿತಿ ಕಾರ್ಯಾಗಾರ ಜ. 29ರಂದು ಬೆಟ್ಟಂಪಾಡಿ ವಿನಾಯಕನಗರ ಭಜನಾ ಮಂದಿರದ ವಠಾರದಲ್ಲಿ ನಡೆಯಲಿದೆ.
ಭಾರತೀಯ ನೌಕಾಪಡೆ ನಿವೃತ್ತ ಸೈನಿಕರಾದ ಪುಷ್ಪರಾಜ ಶೆಟ್ಟಿ ಕೋಟೆ ಕಾರ್ಯಾಗಾರವನ್ನು ಉದ್ಘಾಟಿಸಲಿದ್ದಾರೆ.
ಸಂಪನ್ಮೂಲ ವಿಜ್ಞಾನಿಗಳಾದ ಡಾ| ಮಲ್ಲಿಕಾರ್ಜುನ ಎಲ್. (ಮಣ್ಣು ವಿಜ್ಞಾನಿ ಕೃಷಿ ವಿಜ್ಞಾನ ಕೇಂದ್ರ ಮಂಗಳೂರು) ಮತ್ತು ಡಾ| ಶಿವ ಕುಮಾರ್ ಆರ್, (ಪಶು ವಿಜ್ಞಾನಿ ಕೃಷಿ ವಿಜ್ಞಾನ ಕೇಂದ್ರ ಮಂಗಳೂರು) ಭಾಗವಹಿಸಲಿದ್ದಾರೆ.
ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಸರ್ವೋತ್ತಮ ಬೋರ್ಕರ ಬ್ರಹ್ಮರಗುಂಡ ಸಭಾಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ವಿಜಯಬ್ಯಾಂಕ್ ನಿವೃತ್ತ ಅಧಿಕಾರಿ ಹರಿಶ್ಚಂದ್ರ ಪಕ್ಕಳ, ಕರ್ನಪ್ಪಾಡಿ ಶ್ರೀ ಬ್ರಹ್ಮಬೈದರ್ಕಳ ಗರಡಿಯ ಅಧ್ಯಕ್ಷ ಶಿವಪ್ಪ ಪೂಜಾರಿ ನುಳಿಯಾಲು,ಪ್ರಶಸ್ತಿ ವಿಜೇತ ಕೃಷಿಕರಾದ ತ್ಯಾಂಪ ನಾಯ್ಕ ಕಜೆ,ಮಂಗಳೂರು ದ.ಕ. ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಮಾಲತಿ ಪಿ ಭಾಗವಹಿಸಲಿದ್ದಾರೆ ಎಂದು
ಕುಮಾರ್ ಭಟ್ ಆಡ್ಕತ್ತಿಮಾರು (ಅಧ್ಯಕ್ಷರು ಪದಾಧಿಕಾರಿಗಳು ಸರ್ವಸದಸ್ಯರು) ಶ್ರೀ ಸಿದ್ಧಿ ವಿನಾಯಕ ಸೇವಾ ಸಂಘ (ರಿ.) ಕಕ್ಕೂರು ಹಾಗೂ ಶ್ರೀದೇವಿ ರೈ (ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಸರ್ವಸದಸ್ಯರು) ಕಕ್ಕೂರು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ (ನಿ.) ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

(ವಿ.ಸೂ : ಕೃಷಿ ವಿಜ್ಞಾನ ಕೇಂದ್ರ ಮಂಗಳೂರು ಇವರು ಆಯ್ದ ಪರಿಶಿಷ್ಟ ಪಂಗಡ ಸದಸ್ಯರಿಗೆ, ಮೇವಿನ ಬೀಜ, ಎಲೆಚುಕ್ಕಿ ರೋಗಕ್ಕೆ ಔಷಧಿ, ತೆಂಗಿಗೆ ಪೋಷಕಾಂಶ ವಿತರಣೆ ಇರುತ್ತದೆ.)

news-details