ಬೆಟ್ಟಂಪಾಡಿ:ಇಲ್ಲಿನ ವಿನಾಯಕನಗರ ಶ್ರೀ ಸಿದ್ಧಿ ವಿನಾಯಕ ಸೇವಾ ಸಂಘ (ರಿ.), ಕಕ್ಕೂರು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ (ನಿ.) ಕಕ್ಕೂರು ಬೆಟ್ಟಂಪಾಡಿ, ಕೃಷಿ ವಿಜ್ಞಾನ ಕೇಂದ್ರ ಮಂಗಳೂರು ಇದರ ಜಂಟಿ ಸಹಯೋಗದಲ್ಲಿಅಡಿಕೆ ಎಲೆಚುಕ್ಕಿ ರೋಗದ ಸಮಗ್ರ ನಿಯಂತ್ರಣ ಹಾಗೂ ವೈಜ್ಞಾನಿಕ ರೀತಿಯಲ್ಲಿ ಲಾಭದಾಯಕ ಹೈನುಗಾರಿಕೆ ಮಾಹಿತಿ ಕಾರ್ಯಾಗಾರ ಬುಧವಾರ ಬೆಟ್ಟಂಪಾಡಿ ವಿನಾಯಕನಗರ ಭಜನಾ ಮಂದಿರದ ವಠಾರದಲ್ಲಿ ನಡೆಯಿತು.
ಭಾರತೀಯ ನೌಕಾಪಡೆ ನಿವೃತ್ತ ಸೈನಿಕರಾದ ಪುಷ್ಪರಾಜ ಶೆಟ್ಟಿ ಕೋಟೆ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ ರೈತರಿಗೆ ಆಗುವ ತೊಂದರೆ ಬಗ್ಗೆ ವಿಜ್ಞಾನಿಗಳ ಮೂಲಕ ಪರಿಹಾರ ಕಂಡುಕೊಂಡು ಅವರ ಸಲಹೆ ಸೂಚನೆಗಳನ್ನು ಪಡೆದು ಕೊಂಡು ಸಮಗ್ರ ಕೃಷಿಯಲ್ಲಿ ತೊಡಗಿಸಿ ಕೊಳ್ಳುವ ಎಂದು ಶುಭ ಹಾರೈಸಿದರು.
ಸಂಪನ್ಮೂಲ ವಿಜ್ಞಾನಿಗಳಾದ ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ಡಾ| ಮಲ್ಲಿಕಾರ್ಜುನ ಎಲ್,ಡಾ| ಶಿವ ಕುಮಾರ್ ಆರ್ ಅಡಿಕೆ ಎಲೆಚುಕ್ಕಿ ರೋಗದ ಸಮಗ್ರ ನಿಯಂತ್ರಣ ಹಾಗೂ ವೈಜ್ಞಾನಿಕ ರೀತಿಯಲ್ಲಿ ಲಾಭದಾಯಕ ಹೈನುಗಾರಿಕೆ ಮಾಹಿತಿ ನೀಡಿದರು.
ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಸರ್ವೋತ್ತಮ ಬೋರ್ಕರ್ ಬ್ರಹ್ಮರಗುಂಡ ಸಭಾಧ್ಯಕ್ಷತೆ ವಹಿಸಿ ಮಾತನಾಡಿ ಜೀವನದಲ್ಲಿ ಕಲಿಯಲು ತುಂಬಾ ಇದೆ. ಪ್ರತಿನಿತ್ಯ ಹೊಸ ವಿಷಯಗಳು ನಮ್ಮ ಗಮನಕ್ಕೆ ಬರುತ್ತದೆ.ಅನೇಕ ಒಳ್ಳೆಯ ವಿಚಾರ ಗಳನ್ನು ಜೀವನ ದಲ್ಲಿ ಅಳವಡಿಸಿ ಕೊಳ್ಳಬೇಕು.ಪ್ರತಿ ನಿತ್ಯ ಕೃಷಿ ಚಟುವಟಿಕೆ ಮಾಡಿದಾಗ ದೇಹಕ್ಕೆ ವ್ಯಾಯಾಮ ಸಿಗುತ್ತದೆ.ಸವಾಲುಗಳನ್ನು ಎದುರಿಸಿದಾಗ ಚೈತನ್ಯ ಹೆಚ್ಚುತ್ತದೆ ಎಂದು ಹೇಳಿದರು.
ವಿಜಯಬ್ಯಾಂಕ್ ನಿವೃತ್ತ ಅಧಿಕಾರಿ ಹರಿಶ್ಚಂದ್ರ ಪಕ್ಕಳ ಮಾತನಾಡಿ ಜನಸಂಖ್ಯೆ ಹೆಚ್ಚು ಆದಾಗ ಆಹಾರ ವಸ್ತುಗಳ ಉತ್ಪಾದನೆ ಹೆಚ್ಚು ಆಗಬೇಕು. ಮಣ್ಣು ನ್ನು ಕೊಲ್ಲದೆ ಪರಿಸರ ವನ್ನು ಉಳಿಸೋಣ ಎಂದು ಹೇಳಿದರು. ಕರ್ನಪ್ಪಾಡಿ ಶ್ರೀ ಬ್ರಹ್ಮಬೈದರ್ಕಳ ಗರಡಿಯ ಅಧ್ಯಕ್ಷ ಶಿವಪ್ಪ ಪೂಜಾರಿ ನುಳಿಯಾಲು ಮಾತನಾಡಿ ಕೃಷಿ ಇದ್ದರೆ ಅರೋಗ್ಯ ಸರಿ ಇರುತ್ತದೆ ಎಂದು ಹೇಳಿದರು.
ಕೃಷಿ ವಿಜ್ಞಾನ ಕೇಂದ್ರ ಮಂಗಳೂರು ಇದರ ವತಿಯಿಂದ ಆಯ್ದ ಪರಿಶಿಷ್ಟ ಪಂಗಡ ಸದಸ್ಯರಿಗೆ, ಮೇವಿನ ಬೀಜ, ಎಲೆಚುಕ್ಕಿ ರೋಗಕ್ಕೆ ಔಷಧಿ, ತೆಂಗಿಗೆ ಪೋಷಕಾಂಶ ವಿತರಿಸಿದರು.
ಪ್ರಶಸ್ತಿ ವಿಜೇತ ಕೃಷಿಕರಾದ ತ್ಯಾಂಪ ನಾಯ್ಕ ಕಜೆ,ಮಂಗಳೂರು ದ.ಕ.ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಮಾಲತಿ ಪಿ, ಕಕ್ಕೂರು ಶ್ರೀ ಸಿದ್ಧಿ ವಿನಾಯಕ ಸೇವಾ ಸಂಘದ ಗೌರವಾಧ್ಯಕ್ಷ ನಾರಾಯಣ ಮನೋಳಿತ್ತಾಯ, ಕಕ್ಕೂರು ಶ್ರೀ ಸಿದ್ಧಿ ವಿನಾಯಕ ಸೇವಾ ಸಂಘದ ಅಧ್ಯಕ್ಷ ಕುಮಾರ್ ಭಟ್ ಆಡ್ಕತ್ತಿಮಾರು,ಕಕ್ಕೂರು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ದ ಅಧ್ಯಕ್ಷ ಶ್ರೀದೇವಿ ರೈ ಉಪಸ್ಥಿತರಿದ್ದರು.
ಕಕ್ಕೂರು ಶ್ರೀ ಸಿದ್ಧಿ ವಿನಾಯಕ ಸೇವಾ ಸಂಘ ಇದರ ಅಧ್ಯಕ್ಷ ಜಯಪ್ರಕಾಶ್ ರೈ ಚೆಲ್ಯಡ್ಕ ಸ್ವಾಗತಿಸಿದರು.ಗಿರಿಜಾ ಕೋಡಿ ವಂದಿಸಿದರು. ಸನತ್ ಕುಮಾರ್ ರೈ ಕಾರ್ಯಕ್ರಮ ನಿರ್ವಹಿಸಿದರು.
ವರದಿ,ಚಿತ್ರ :ಮಾಧವ ನಾಯಕ್, ನ್ಯೂಸ್ ಟೈಮ್ ಪುತ್ತೂರು 9980883407