ಕಾಸರಗೋಡು ಜಿಲ್ಲೆಯ ದೇಲಂಪಾಡಿ ಗ್ರಾಮದ ಊಜಂಪಾಡಿ ಮಣಿಯೂರು ಶ್ರೀ ಶಾಸ್ತಾರ ದೇವಸ್ಥಾನ ಜೀರ್ಣೋದ್ಧಾರ ಆಡಳಿತ ಸಮಿತಿಯ ಮಹಾಸಭೆ

ಪುತ್ತೂರು

news-details

ಕಾಸರಗೋಡು ಜಿಲ್ಲೆ ದೇಲಂಪಾಡಿ ಗ್ರಾಮದ ಊಜಂಪಾಡಿ ಮಣಿಯೂರು ಶ್ರೀ ಶಾಸ್ತಾರ ದೇವಸ್ಥಾನ ಜೀರ್ಣೋದ್ಧಾರ ಆಡಳಿತ ಸಮಿತಿ ಊಜಂಪಾಡಿ ಮಣಿಯೂರು ಇದರ ಮಹಾಸಭೆಯು ಜ.26 ರಂದು ದೇವಸ್ಥಾನದ ವಠಾರದಲ್ಲಿ ನಡೆಯಿತು. ಸಮಿತಿಯ ಅಧ್ಯಕ್ಷರಾದ ಕಲ್ಲಡ್ಕ ಶಿವರಾಮ ಕಲ್ಲೂರಾಯರ ಅಧ್ಯಕ್ಷತೆಯಲ್ಲಿ ಆಡಳಿತ ಮೊಕ್ತೇಸರರಾದ ಶ್ರೀ ಅರಿಯಡ್ಕ ಚಿಕ್ಕಪ್ಪ ನಾಯ್ಕ್, ಅರಿಯಡ್ಕ ನಾರಾಯಣ ನಾಯ್ಕ್, ಸುಬೋಧ್ ರೈ ಅರಿಯಡ್ಕ ಮತ್ತು ಊಜಂಪಾಡಿ ರಾಮ್ ರತನ್ ನಾಯ್ಕ್ ರವರ ಮಾರ್ಗದರ್ಶನದಲ್ಲಿ ಸಭೆ ನಡೆಯಿತು.
ಕ್ಷೇತ್ರದ ಪವಿತ್ರಪಾಣಿ ಮುಗೇರು ಗೋಪಾಲ ರಾವ್ ರವರು ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.
ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಶ್ರೀಮತಿ ಮಲ್ಲಿಕಾ ಪಕ್ಕಳರವರು ಪೂರ್ಣ ಸಹಕಾರದ ಭರವಸೆಯನ್ನು ನೀಡಿದರು. ವೇದಿಕೆಯಲ್ಲಿ ಸಮಿತಿಯ ಗೌರವಾಧ್ಯಕ್ಷರಾದ ಕಿಶೋರ್ ಶೆಟ್ಟಿ ಅರಿಯಡ್ಕ, ಗೌರವ ಸಲಹೆಗಾರರಾದ ಅರಿಯಡ್ಕ ಸಾರ್ಥಕ್ ರೈ, ಸುನಿಲ್ ರೈ ಪಾಲ್ಗುಣಿ, ಗೋಪಾಲಕೃಷ್ಣ ಕುಂಜತ್ತಾಯ, ಕೆ ವಿಶ್ವವಿನೋದ ಬನಾರಿ, ಶ್ರೀ ವೆಂಟ್ರಮಣ ಭಟ್ ಮಾಸ್ತರ್ ದೇಲಂಪಾಡಿ, ಕೆ. ಗೋಪಾಲಯ್ಯ ಕೋಟಿಗದ್ದೆ, ಶ್ರೀಮತಿ ಮೀನಾಕ್ಷಿ ಟೀಚರ್ ವಾಲ್ತಾಜೆ, ಗಣ್ಯರಾದ ವಿನೋದ್ ಶೆಟ್ಟಿ ಅರಿಯಡ್ಕ, ನವೀನ್ ಶೆಟ್ಟಿ ಅರಿಯಡ್ಕ, ಚಿರಾಗ್ ರೈ ಅರಿಯಡ್ಕ,ಸಮಿತಿಯ ಪದಾಧಿಕಾರಿಗಳಾದ ಎಂ ಸಂಜೀವ ರೈ, ಭಾಸ್ಕರ ದೇಲಂಪಾಡಿ, ಕಲ್ಲಡ್ಕ ಗುತ್ತು ಸೀತಾರಾಮ ರೈ, ಹೇಮಂತ್ ಕುಮಾರ್ ಊಜಂಪಾಡಿ
ಉಪಸ್ಥಿತರಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದೇಲಂಪಾಡಿ ಒಕ್ಕೂಟ, ಹಿಂದೂ ಐಕ್ಯವೇದಿ ದೇಲಂಪಾಡಿ, ಗಣೇಶೋತ್ಸವ ಸಮಿತಿ ದೇಲಂಪಾಡಿ, ದೇಲಂಪಾಡಿ ಬಂಟರ ಸಂಘ,ಇತರ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದ್ದರು.
ಸಭೆಯಲ್ಲಿ ಮುಂದಿನ ಕಾರ್ಯಯೋಜನೆಗಳ ಬಗ್ಗೆ ಚರ್ಚಿಸಲಾಯಿತು. ಕಾರ್ಯದರ್ಶಿ ಚಂದ್ರಶೇಖರ ನಾಯಕ್ ರವರು ಲೆಕ್ಕಪತ್ರ ಮಂಡಿಸಿದರು.
ಸಮಿತಿಯ ಖಜಾಂಚಿ ಕಲ್ಲಡ್ಕ ಗುತ್ತು ರಾಮಯ್ಯ ರೈಯವರುಸ್ವಾಗತಿಸಿದರು.ಉಪಾಧ್ಯಕ್ಷರಾದ ಯಂ. ರಮಾನಂದ ರೈ ದೇಲಂಪಾಡಿ ವಂದಿಸಿದರು. ಜೊತೆ ಕಾರ್ಯದರ್ಶಿ ಮಣಿಯೂರು ವಿಶ್ವನಾಥ ರೈಯವರು ಕಾರ್ಯಕ್ರಮ ನಿರೂಪಿಸಿದರು.

news-details