ಅಕ್ಟೋಬರ್ 12 : ಯುವಶಕ್ತಿ ಉತ್ಸವ- ಆಮಂತ್ರಣ ಪತ್ರಿಕೆ ಬಿಡುಗಡೆ

ಮಂಗಳೂರು

news-details

<p>ಸುಳ್ಯಪದವು ಯುವಶಕ್ತಿ ಕಲಾ ಮತ್ತು ಕ್ರೀಡಾ ಬಳಗ (ರಿ.) ಮತ್ತು&nbsp;<br />
ಸರ್ವರ ಸಹಕಾರದಿಂದ 4ನೇ ವರುಷದ ಯುವಶಕ್ತಿ ಉತ್ಸವ- 2024 ಕಾರ್ಯಕ್ರಮ &nbsp;ನವೆಂಬರ್ ರಲ್ಲಿ ನಡೆಯಲಿದ್ದು, ಇದರ ಪೂರ್ವಭಾವಿಯಾಗಿ, ಕಾರ್ಯಕ್ರಮ ದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ವು 12/10/2024 ನೇ ಶನಿವಾರ ಆಯುಧ ಪೂಜೆ ಯ ಶುಭದಿನದಂದು ಪೂರ್ವಾಹ್ನ 10 ಗಂಟೆಗೆ ಸುಳ್ಯಪದವು ಆಯುಧ ಪೂಜಾ ಸೇವಾ ಸಮಿತಿ ವೇದಿಕೆಯಲ್ಲಿ ಶ್ರೀ ಸುಧೀರ್ ನಾಯಕ್ ಇಂದಾಜೆ ಉದ್ಯಮಿಗಳು (ರಾಮನಾಥ್ ಟ್ರೇಡರ್ಸ್ ಸುಳ್ಯಪದವು)ಇವರ ದಿವ್ಯಹಸ್ತದಿಂದ ಬಿಡುಗಡೆಗೊಳ್ಳಲಿದೆ. ಆಯುಧ ಪೂಜಾ ಸೇವಾ ಸಮಿತಿ ಇದರ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು,ಸ್ವಾಮಿ ಕೊರಗಜ್ಜ ಸೇವಾ ಸಮಿತಿಯ &nbsp;ಇದರ ಅಧ್ಯಕ್ಷರು &nbsp;ಹಾಗೂ ಸರ್ವ ಸದಸ್ಯರು,ಜಾಗೃತ ಜಾಗರಣ ಸುಳ್ಯಪದವು ಇದರ ಅಧ್ಯಕ್ಷರು &nbsp;ಹಾಗೂ ಸರ್ವ ಸದಸ್ಯರು ಅಯ್ಯಪ್ಪ ಭಜನಾ ಮಂದಿರ ದ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು,ಯುವಶಕ್ತಿ ಕಲಾ ಮತ್ತು &nbsp;ಕ್ರೀಡಾ ಬಳಗ ದ ಗೌರವಾಧ್ಯಕ್ಷರು ಹಾಗೂ ಸರ್ವ ಸದಸ್ಯರು, ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಮಸ್ತ ನಾಗರಿಕರ ಭಾಗವಹಿಸಲಿದ್ದಾರೆ ಎಂದು ಯುವಶಕ್ತಿ ಕಲಾ ಮತ್ತು ಕ್ರೀಡಾ ಬಳಗದ ಅಧ್ಯಕ್ಷರಾದ ಗುರುಕಿರಣ್ ರೈ ತಿಳಿಸಿದ್ದಾರೆ.</p>

news-details