ತುಳುಕೂಟ ಸಮಿತಿ ಮೆಣಸಿನಕಾನ, ದೇಲಂಪಾಡಿ ಇದರ ವತಿಯಿಂದ 2ನೇ ವರ್ಷದ
ತುಳು ಐಸಿರೊ ಸಮಾರಂಭವು ಫೆಬ್ರವರಿ 16 ಮತ್ತು ಫೆಬ್ರವರಿ 19ರಂದು ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಫೆಬ್ರವರಿ 2 ರಂದು ದೇಲಂಪಾಡಿ ಮೆಣಸಿನಕಾನ ಶ್ರೀ ಧೂಮಾವತಿ ಸಹಪರಿವಾರ ದೈವಸ್ಥಾನದ ವಠಾರದಲ್ಲಿ ನಡೆಯಿತು.
ಮಹಿಳಾ ಸಮಿತಿ ಅಧ್ಯಕ್ಷೆ ಮಹಿತಾ ರೈ ನಡುಬೈಲು,ಕಾರ್ಯಾಧ್ಯಕ್ಷರಾದ ಕೊರಗಪ್ಪ ರೈ ಮಯ್ಯಾಳ , ರಾಮಯ್ಯ ರೈ ಕಲ್ಲಡ್ಕ ಗುತ್ತು, ಸೀತಾರಾಮ ರೈ ಕಲ್ಲಡ್ಕ ಗುತ್ತು, ವಿಶ್ವನಾಥ ರೈ ಉಜಂಪಾಡಿ, ವೇಣುಗೋಪಾಲ್ ಶಾಂತಿಮಲೇ, ಬಾಬು ನಾಯ್ಕ ಗೌರಿಮೂಲೆ, ಸವಿತಾ ರೈ ಮೆಣಸಿನಕಾನ, ವೀಣಾ ರೈ ಮೆಣಸಿನಕಾನ , ವಸಂತ ಶಾಂತಿಮಲೆ, ರಘುನಾಥ್ ರೈ, ರವಿಚಂದ್ರ, ಚಂದ್ರಾವತಿ ರೈ, ಮೋನಿಷಾ, ಕಾವ್ಯಶ್ರೀ, ಬಾಲಕೃಷ್ಣ ರಾವ್, ಪ್ರವೀಣ್ ರೈ, ಸಂಕಪ್ಪ ರೈ ಶಮಿತ್, ಸಾನ್ವಿ , ಸುಮಂತ್ ಹಾಗೂ ಎಲ್ಲಾ ಜವಾಬ್ದಾರಿಯುತ ತುಳುಕೂಟ ಕಾರ್ಯಕ್ರಮದ ಸರ್ವ ಸದಸ್ಯರು ಉಪಸ್ಥಿತರಿದ್ದರು
ಹರ್ಷಿತ್ ಎಂ ಮೆಣಸಿನಕಾನ ಸ್ವಾಗತಿಸಿ ವಂದಿಸಿದರು.