ಪಾಣಾಜೆ ಗ್ರಾ.ಪಂ. ಸಾಮಾನ್ಯ ಸಭೆ- ಪಂಚತಂತ್ರದಲ್ಲಿ ಎಡವಟ್ಟು; ತೆರಿಗೆ ಪಾವತಿಗೆ ಭಾರೀ ಸಮಸ್ಯೆ

ಪುತ್ತೂರು

news-details

ಪಾಣಾಜೆ ಪಂಚಾಯತ್ ವ್ಯಾಪ್ತಿಯಲ್ಲಿ ಆಸ್ತಿ
ನೋಂದಣಿಗೆ ಪಂಚತಂತ್ರ ತಂತ್ರಾಂಶದಲ್ಲಿ ಸಮಸ್ಯೆಯಾಗಿ ಅವರಿಗೆ ಸಕಾಲಕ್ಕೆ ತೆರಿಗೆ ಪಾವತಿಸಲು ಅಡ್ಡಿಯಾಗುತ್ತಿದೆ. ಅಡ್ಡಿ ನಿವಾರಣೆಗೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಸದಸ್ಯರು ಪಾಣಾಜೆ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಆಗ್ರಹಿಸಿದರು.

ಸಭೆಯು ಪಂಚಾಯತ್ ಅಧ್ಯಕ್ಷೆ ಮೈಮೂನತ್ತುಲ್ ಮೆಹ್ರಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ತಾಂತ್ರಿಕ ಕಾರಣಗಳಿಂದಾಗಿ ಪಂಚಾಯತ್ ವ್ಯಾಪ್ತಿಯ ಸುಮಾರು 200ಕ್ಕೂ ಅಧಿಕ ಮನಯವರಿಗೆ ತೆರಿಗೆ ಪಾವತಿಗೆ ಆಗುತ್ತಿರುವ ಅಡ್ಡಿವಿಚಾರವನ್ನು ಸದಸ್ಯರು ಸಭೆಯ ಗಮನಕ್ಕೆ ತಂದಾಗ ಆಸ್ತಿಯನ್ನು ಪಂಚತಂತ್ರ 2.0 ದಲ್ಲಿನಮೂದಿಸಲು 11/ಬಿ ಮುಖಾಂತರ ಅವಕಾಶವಿದ್ದು ಸದರಿ ದಾಖಲೆಯನ್ನು ನೀಡಿದವರಿಗೆ 11/ ಬಿ ಮಾಡಿ ಮನೆತೆರಿಗೆಯನ್ನು ಸೃಜನೆ ಮಾಡಿಕೊಡಲಾಗಿದೆ. ಮೊದಲಿನಿಂದಲೂ ಡಿ ಸಿ ಬಿ ರಿಜಿಸ್ಟರ್ ನಲ್ಲಿ ಮನೆತೆರಿಗೆಯ ದಾಖಲೆಯಿದ್ದು ಮ್ಯಾನುವೆಲ್ ಆಗಿ ತೆರಿಗೆ ಪಡೆದುಕೊಂಡವರಿಗೆ ತಂತ್ರಾಂಶ 2.0ದಲ್ಲಿ ನಮೂದಿಸಲು ಸಾಧ್ಯವಾಗುತ್ತಿಲ್ಲ ಎಂಬ ಉತ್ತರ ದೊರೆತಾಗ ಬಾಕಿಯಾದವರಿಗೆ ತೆರಿಗೆ ಪಾವತಿ ಮಾಡಲು ಅವಕಾಶ ಕಲ್ಪಿಸುವಂತೆ ಶಾಸಕರಿಗೆ ಮತ್ತು ಇಲಾಖಾ ಸಚಿವರಿಗೆ ಪತ್ರ ನಿರ್ಣಯಿಸಲಾಯಿತು.

ದಾನಿಗಳಿಂದ ಹಣ ಸಂಗ್ರಹ
ಆರ್ಲಪದವಿನ ಜನತಾ ಕಾಲನಿ ನಿವಾಸಿ ಸೀತಾರಾಮ ಮತ್ತು ರೋಹಿಣಿ ಎಂಬವರಿಗೆ ಬಸವ ಜಯಂತಿ ಯೋಜನೆಯಲ್ಲಿ ವಸತಿ ಮಂಜೂರಾಗಿದ್ದು ಮನೆಯ ಉಳಿದ ಕೆಲಸಗಳಿಗೆ ಅವಶ್ಯಕತೆ ಇರುವ ಹಣವನ್ನು ದಾನಿಗಳ ಮೂಲಕ ಸಂಗ್ರಹ ಮಾಡಿ ನೀಡುವುದರ ಬಗ್ಗೆ ಚರ್ಚಿಸಿ ಇದಕ್ಕಾಗಿ ವಾಟ್ಸಾಪ್ ಗ್ರೂಪ್ ರಚಿಸಿ ಮನೆಯ ಬಾಕಿ ಉಳಿದ ಕೆಲಸಗಳನ್ನು ಮಾಡಿ ಮನೆ ನಿರ್ಮಿಸಿ ಕೊಡುವುದೆಂದು ನಿರ್ಣಯಿಸಲಾಯಿತು.

ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬ್ಯಾನರ್ ಅಳವಡಿಕೆಯ ಕಾನೂನಿನ ಬಗ್ಗೆ ಚರ್ಚೆ ನಡೆಯಿತು.ಬ್ಯಾನರ್ ಅಳವಡಿಕೆಗೆ ಇರುವ ಕಾನೂನನ್ನು ಪಾಲಿಸದ ಬಗ್ಗೆ ಪಿಡಿಒ ಅವರನ್ನು ಸದಸ್ಯರು ತರಾಟೆಗೆ ತೆಗೆದುಕೊಂಡರು. ಬ್ಯಾನರ್ ಅಳವಡಿಸಲು ಅನುಮತಿ ಬಗ್ಗೆ ಮುಂದಿನ ಗ್ರಾಮಸಭೆಯಲ್ಲಿ ಚರ್ಚಿಸಿನಿರ್ಣಯ ತೆಗೆದುಕೊಳ್ಳುವಂತೆ ನಿರ್ಣಯಿಸಲಾಯಿತು.
ಶೌಚಾಲಯಕ್ಕೆ ಆಗ್ರಹ
ಆರ್ಲಪದವಿನ ದೈವಸ್ಥಾನದ ಸಮೀಪ ದಲ್ಲಿ ನೂತನವಾಗಿ ನಿರ್ಮಾಣಗೊಂಡ ಸಭಾಭವನದ ಸಮೀಪದಲ್ಲಿ ನಿರ್ಮಿಸಿದ ಶೌಚಾಲಯದ ನಿರ್ವಹಣೆ ಬಗ್ಗೆ ಚರ್ಚೆ ನಡೆಸಲಾಯಿತು. ಆರ್ಲಪದವು ಪೇಟೆಯಲ್ಲಿ ಇತ್ತೀಚೆಗೆ ನಿರ್ಮಾಣಗೊಂಡ ರಿಕ್ಷಾ ತಂಗುದಾಣದ ಹಿಂದುಗಡೆ ಸಾರ್ವಜನಿಕ ಶೌಚಾಲಯ ನಿರ್ಮಿಸಲು ಆಗ್ರಹ ವ್ಯಕ್ತವಾದಾಗ ಶಾಸಕರಿಗೆ ಪತ್ರ ಬರೆಯಲು ನಿರ್ಣಯಿಸಲಾಯಿತು.
ಪಂಚಾಯತ್ ಉಪಾಧ್ಯಕ್ಷೆ ಜಯಶ್ರೀ, ಸದಸ್ಯರಾದ ಅಬೂಬಕ್ಕರ್, ಮೋಹನ್ ನಾಯ್ಕ ಸುಭಾಷ್ ರೈ, ವಿಮಲ, ಭಾರತಿ ಭಟ್, ಸುಲೋಚನಾ ಕಲಾಪದಲ್ಲಿ ಭಾಗವಹಿಸಿದ್ದರು. ಪಿಡಿಒ ಆಶಾ ಸ್ವಾಗತಿಸಿ ವಂದಿಸಿದರು.

news-details