ಮಂಗಳ ಸಮೂಹ ವಿದ್ಯಾಸಂಸ್ಥೆಯಿಂದ ಏಡ್ಸಜಾಗೃತಿ ಅಭಿಯಾನ

ಮಂಗಳೂರು

news-details

ಮಂಗಳ ಸಮೂಹ ವಿದ್ಯಾಸಂಸ್ಥೆಯ ಮಂಗಳ ಕಾಲೇಜ್‌ ಆಫ್‌ ಅಲೈಡ್ ಹೆಲ್ತ್ ಸೈನ್ಸ್ನ ಯೂತ್ ರೆಡ್‌ಕ್ರಾಸ್ ಸೊಸೈಟಿ ವಿಭಾಗದ ವತಿಯಿಂದ ಏಡ್ಸಜಾಗೃತಿಅಭಿಯಾನವು ಮಂಗಳೂರಿನ ತಣ್ಣೀರುಬಾವಿ ಕಡಲತೀರದಲ್ಲಿ ದಿನಾಂಕ 15-02-2025ನೇ ಶನಿವಾರ ಸಂಸ್ಥೆಯ ಸ್ಥಾಪಕಾಧ್ಯಕ್ಷರಾದ ಡಾ. ಗಣಪತಿ ಪಿ ಮತ್ತು ಡಾ. ಅನಿತಾ ಜಿ. ಭಟ್‌ರವರ ನಿರ್ದೇಶನದಂತೆ ಬೀದಿ ನಾಟಕ ಮತ್ತು ಇತರ ಕಾರ್ಯಕ್ರಮದ ಮೂಲಕ ಏಡ್ಸ್ ಬಗ್ಗೆ ಜನಸಾಮಾನ್ಯರಿಗೆ ತಿಳುವಳಿಕೆ ಮತ್ತು ಮಾಹಿತಿಯನ್ನು ನೀಡಲಾಯಿತು.

ಜನಸಾಮಾನ್ಯರಿಗೆ ಹೆಚ್.ಐವಿ ಸೋಂಕಿನ ಬಗ್ಗೆ ಇರುವ ತಪ್ಪು ತಿಳುವಳಿಕೆಗಳನ್ನು ಹೋಗಲಾಡಿಸಲು ಪ್ರಯತ್ನಿಸಲಾಯಿತು. ಸರಿ ಸುಮಾರು 100ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಕರಿದ್ದರು. ಈ ಸಂಧರ್ಭದಲ್ಲಿ ಮಂಗಳ ಕಾಲೇಜ್‌ಆಫ್‌ಅಲೈಡ್ ಹೆಲ್ತ್ ಸೈನ್ಸ್ನ ಯೂತ್ ರೆಡ್‌ಕ್ರಾಸ್ ಸೊಸೈಟಿಯ ಅಧಿಕಾರಿ ಪ್ರಾದ್ಯಾಪಿಕೆ ವಿಜೇತ ಸೀನ ಸದಸ್ಯರುಗಳಾದ ಪ್ರಾದ್ಯಾಪಿಕೆ ಶರಣ್ಯಅಮೀನ್, ಮಂಗಳ ವಿದ್ಯಾ ಸಂಸ್ಥೆಯ ಡೀನ್‌ರಾದ ಪ್ರೊ. ಪ್ರತಿಜ್ನಾ ಸುಹಾಸಿನಿ ಜಿ ಆರ್, ಮತ್ತು ಉಪಪ್ರಾಂಶುಪಾಲರಾದ ಗೀತಾಲಕ್ಷಿö್ಮ, ಪ್ರಾದ್ಯಾಪಕ ಮತ್ತು ರೀಸರ್ಚ್ ಅಸೋಸಿಯೇಟ್‌ಯಾದ ಶ್ರೀಯುತ ತಮಿಳ್ ಸೆಲ್ವನ್, ಪ್ರಾದ್ಯಾಪಕ ಶ್ರೀಯುತ ಶಿಫಾಸ್, ಪ್ರಯೋಗಾಲಯ ತಂತ್ರಜ್ಞೆ ಕುಮಾರಿ ಪ್ರೀಯಾಕುಮಾರಿ ಶರ್ಮ, ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀಯುತ ವಿಜೇಶ್‌ಕುಮಾರ್ ಮತ್ತು ಸಂಸ್ಥೆಯ ಬೋಧಕ, ಭೋಧಕೇತರ ಸಿಬ್ಬಂದಿಗಳೊಡನೆ ಸಂಸ್ಥೆಯ ವಿದ್ಯಾರ್ಥಿಗಳು ಪಾಲುಗೊಂಡಿದ್ದರು. ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಂದ ವಿವಿಧಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

news-details