ಬೆಟ್ಟಂಪಾಡಿ :ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಶ್ರೀ ದೇವರ 12ನೇ ವರ್ಷದ ಪ್ರತಿಷ್ಠಾ ಮಹೋತ್ಸವವು ದಿನಾಂಕ 22-02-2025ನೇ ಶನಿವಾರ ದೇವಾಲಯದಲ್ಲಿ ಬ್ರಹ್ಮ ಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಜರಗಲಿರುವುದು.
ಭಗವದ್ಭಕ್ತರಾದ ತಾವೆಲ್ಲರೂ ತನು-ಮನ-ಧನಗಳ ಸಂಪೂರ್ಣ ಸಹಕಾರವನ್ನಿತ್ತು, ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸುವ,
ಬಿ. ವಿನೋದ್ ಕುಮಾರ್ ಬಲ್ಲಾಳ್ ಶಿವಗಿರಿ ಬೀಡು, (ಅನುವಂಶಿಕ ಆಡಳಿತ ಮೊಕ್ತೇಸರರು,) ವಿನೋದ್ ಕುಮಾರ್ ರೈ ಬೆಟ್ಟಂಪಾಡಿ ಗುತ್ತು (ಮೊಕ್ತೇಸರರು,)
ಆಡಳಿತ ಸಮಿತಿ, ಅಭಿವೃದ್ಧಿ ಸಮಿತಿ ಹಾಗೂ ಊರ ಹತ್ತು ಸಮಸ್ತರು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮಗಳ ವಿವರ: 22/02/2025ನೇ ಶನಿವಾರ ಪ್ರಾತಃಕಾಲ 7-30ಕ್ಕೆ: ದೇವತಾ ಪ್ರಾರ್ಥನೆ, 8-30ಕ್ಕೆ : ದ್ವಾದಶ ನಾರಿಕೇಳ ಗಣಪತಿ ಹವನ, 9-30ಕ್ಕೆ : ಏಕಾದಶ ರುದ್ರಾಭಿಷೇಕ, 10-00ಕ್ಕೆ: ಶ್ರೀ ದೇವರಿಗೆ, ಪರಿವಾರ ದೇವರಿಗೆ, ದೈವಗಳಿಗೆ, ನಾಗದೇವರಿಗೆ ಕಲಶಾಭಿಷೇಕ, 11-00ಕ್ಕೆ : ಸಾಮೂಹಿಕ ಆಶ್ಲೇಷ ಬಲಿ ಸೇವೆ, 12-30ಕ್ಕೆ: ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಅನ್ನ ಸಂತರ್ಪಣೆ ನಡೆಯಲಿದೆ.