ಈಶ್ವರ ಮಂಗಲ :ವರ್ಷಾವಧಿ ಜಾತ್ರೆ ಮತ್ತು ನೇಮದ ಆಮಂತ್ರಣ ಪತ್ರಿಕೆ ಬಿಡುಗಡೆ, ಪೂರ್ವಭಾವಿ ಸಭೆ

ಪುತ್ತೂರು

news-details

ಈಶ್ವರ ಮಂಗಲ: ಶ್ರೀ ಪಂಚಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೆಯು
ಫೆ 24 ಸೋಮವಾರದಿಂದ ಮಾ.3 ಸೋಮವಾರದ ತನಕ ಬ್ರಹ್ಮಶ್ರೀ ವೇಧಮೂರ್ತಿ ಕುಂಟಾರು ವಾಸುದೇವ ತಂತ್ರಿಗಳ ಮಾರ್ಗದರ್ಶನದಲ್ಲಿ ಪೂರ್ವಶಿಷ್ಥ ಸಂಪ್ರದಾಯ ಪ್ರಕಾರ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ಪೂರ್ವಭಾವಿ ಸಭೆಯು ಇತ್ತೀಚೆಗೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಸಭಾಂಗಣದಲ್ಲಿ ನಡೆಯಿತು.
ದೇವಸ್ಥಾನ ಪವಿತ್ರಪಾಣಿ ಗೋಪಾಲಕೃಷ್ಣ ಕುಂಜಾತ್ತಾಯ ರವರು ಜಾತ್ರಾ ಮಹೋತ್ಸವ ಅಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ ಜಾತ್ರೋತ್ಸವವು ವರ್ಷo ಪ್ರತಿ ಬಹಳ ವಿಜೃಂಭಣೆಯಿಂದ ನಡೆಯುತ್ತಿದೆ. ಈ ಬಾರಿಯೂ ವಿಜೃಂಭಣೆ ನಡೆಯಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಲ್ಲರೂ ತನು ಮನ ಧನಗಳಿಂದ ಸಹಕರಿಸುವಂತೆ ವಿನಂತಿ ಶುಭ ಹಾರೈಸಿದರು.
ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ನಾಗಪ್ಪ ಗೌಡ ಬೊಮ್ಮೆಟ್ಟಿ ಮಾತನಾಡಿ ಜಾತ್ರೆ ಎಲ್ಲಾ ಸಹಕಾರದಿಂದ ಹಿರಿಯ ಮಾರ್ಗದರ್ಶನದಲ್ಲಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಸುವ ಉದ್ದೇಶದಿಂದ ವಿವಿಧ ಸಮಿತಿ ರಚನೆ ಮಾಡಿ ಪ್ರತಿ ಸಮಿತಿಗೆ ಸಂಚಾಲಕರು ಸಹ ಸಂಚಾಲಕರು ಮತ್ತು ಸದಸ್ಯರು ಅಯ್ಕೆ ಮಾಡಲಾಗಿದೆ. ಅಯಾ ಸಮಿತಿ ನೀಡಲಾದ ಜವಾಬ್ದಾರಿಯನ್ನು ತನ್ನ ಮನೆಯ ಕೆಲಸ ಎಂಬ ಭಾವನೆಯಲ್ಲಿ ಚಾಚು ತಪ್ಪದೆ ಕಾರ್ಯ ನಿರ್ವಹಿಸಬೇಕು ಎಂದ ಅವರು
8 ಬೈಲುವಾರು ಸಮಿತಿ ರಚನೆ ಮಾಡಿಕೊಂಡು ಆ ಮೂಲಕ ಪ್ರತಿ ಮನೆಗೆ ಅಮಂತ್ರಣ ಪತ್ರಿಕೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಒಟ್ಟಿನಲ್ಲಿ ಜಾತ್ರಾ ಮಹೋತ್ಸವ ಒಂದು ವಿಶಿಷ್ಟ ರೀತಿಯಲ್ಲಿ ಉತ್ತಮವಾಗಿ ವಿಜೃಂಭಣೆಯಿಂದ ನಡೆಯುವಲ್ಲಿ ಸಹಕಾರ ಯಾಚಿಸಿದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮಂಜುನಾಥ ರೈ ಸಾಂತ್ಯ ಮಾತನಾಡಿ
ಮಾಡದ ಗುಡ್ಡೆ ನೂತನ ನಿರ್ಮಾಣ ಹಂತದಲ್ಲಿರುವ ಪಿಲಿಮಾಡದ ದಾ ರಂದ ಮುಹೂರ್ತ ಈಗಾಗಲೇ ನಡೆದಿದ್ದು ಮುಂದೆ ಮೇಲ್ಚಾವಣಿಯಲ್ಲಿ ಕೆಲಸ ನಡೆಯಲಿದೆ. ಮಾ 1 ಮತ್ತು 2 ರಂದು ಶುದ್ಧಿ ಕಾರ್ಯ ನಡೆಯಲಿದೆ.
ದೇವಸ್ಥಾನ ಆವರಣದಲ್ಲಿ ರಕ್ತೇಶ್ವರಿ ಮತ್ತು ಗುಳಿಗ ಕಟ್ಟೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ.ಎಲ್ಲರ ಸಹಕಾರ ದಿಂದ ಸಾಧ್ಯವಾಗಿದೆ ಎಂದು ಹೇಳಿದರು.
ಜಾತ್ರೋತ್ಸವ ಸಮಿತಿಯ ಕಾರ್ಯದರ್ಶಿ ಪೂರ್ಣಚಂದ್ರ ರೈ ನೆಲ್ಲಿತ್ತಡ್ಕ ಉಪಾಧ್ಯಕ್ಷರಾದ ಸುಭಾಶ್ಚಂದ್ರ ರೈ ಮೈರೋಳು , ಚಿನ್ಮಯ ರೈ ನಡುಬೈಲು, ಖಜಾಂಚಿ ರಾಮಣ್ಣ ನಾಯ್ಕ ಸಸಿಹಿತ್ತು-ಕುತ್ಯಾಳ, ವೈದಿಕ ಸಮಿತಿ ಅಧ್ಯಕ್ಷ ನವೀನ ಕೇಕುಣ್ಣಾಯ ಮುಂಡ್ಯ, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷರಾದ ಆನಂದ ರೈ ಸಾಂತ್ಯ, ಸದಾಶಿವ ರೈ ನಡುಬೈಲು ಜತೆ ಕಾರ್ಯದರ್ಶಿಗಳಾದ ವಿಕ್ರಂ ರೈ ಸಾಂತ್ಯ,ಜೀರ್ಣೋದ್ಧಾರ ಸಮಿತಿ ಕಾರ್ಯಕಾರಿ ಸಮಿತಿ ಸದಸ್ಯರಾದ ಪ್ರವೀಣ ರೈ ಮೇನಾಲ, ಅಚ್ಯುತ ಮಣಿಯಾಣಿ, ಪ್ರದೀಪ ರೈ ಮೇನಾಲ, ಶ್ರೀನಿವಾಸ ಹಿರಿಯಾಣ, ಜಾತ್ರೋತ್ಸವ ಸಮಿತಿ ಸದಸ್ಯರುಗಳಾದ ಅಪ್ಪಕುಂಞ ಮಣಿಯಾಣಿ, ಪ್ರದೀಪ್ ರೈ ಕರ್ನೂರು, ಸೀತಾರಾಮ ರೈ ಮೇನಾಲ, ರಾಮಪ್ರಸಾದ್ ಆಳ್ವ ಮೇನಾಲ, ಮಹಾಬಲ ರೈ ಕರ್ನೂರು, ಅರುಣ ಮೆಣಸಿನಕಾನ,
ಸಂಜೀವ ರೈ ಬೆಡಿಗದ್ದೆ, ಆಹಾರ ಸಮಿತಿ ಅಧ್ಯಕ್ಷ ಜಯಚಂದ್ರ ಸೇರಾಜೆ, ಸಂಚಾಲಕ ಪ್ರದೀಪ್ ರೈ ಕರ್ನೂರು, ಆನಂದ ಗೌಡ ಕೆಮ್ಮತ್ತಡ್ಕ, ಗಣೇಶ್ ಯಂ. ವಜ್ರಮೂಲೆ, ರಮೇಶ್ ಪೂಜಾರಿ ಸಾಂತ್ಯ, ಸದಸ್ಯ ಸಿತಾರಾಮ ರೈ ಈಶ್ವರಮಂಗಲ, ಉಗ್ರಾಣ ಸಮಿತಿ ಅಧ್ಯಕ್ಷ ಅನೂಪ್ ಕನ್ನಟಿಮಾರ್. ಸಂಚಾಲಕ ಶಂಕರ ಪಟ್ರೋಡಿ, ದೇವಪ್ಪ ಮಾಡದಗುಡ್ಡೆ ಹೊರೆಕಾಣಿಕೆ ಸಮಿತಿ ಅಧ್ಯಕ್ಷ ಜಯಾನಂದ ಕೋರಿಗದ್ದೆ, ಸಂಚಾಲಕರಾದ ಮಧುಕರ ರೈ ನೆಲ್ಲಿತ್ತಡ್ಕ,, ಜಗನ್ನಾಥ ರೈ ನೆಲ್ಲಿತ್ತಡ್ಕ
ಚಪ್ಪರ ಸಮಿತಿ ಅಧ್ಯಕ್ಷ ಸತೀಶ್ ಸುರುಳಿಮೂಲೆ, ಸಂಚಾಲಕ ಪ್ರವೀಣ್ ನೀರಳಿಕೆ, ಸದಸ್ಯ ಶಿವಪ್ರಸಾದ್ ಮುಂಡ್ಯ, ಜಗನ್ನಾಥ ರೈ ನೆಲ್ಲಿತ್ತಡ್ಕ,
ಕಾರ್ಯಾಲಯ ಸಮಿತಿ ಅಧ್ಯಕ್ಷ ಕೃಷ್ಣರಾಜ ಪ್ರಸಾದ ರಾಗಳಿ, ನಾರಾಯಣ ರೈ ಅಂಕೊತ್ತಿಮಾರ್, ಸದಸ್ಯರಾದ ಪುಷ್ಪಾವತಿ ಸಾಂತ್ಯ ಸವಿತಾ ರೈ ನೆಲ್ಲಿತ್ತಡ್ಕ, ಮಹಿತಾ ರೈ ನಡುಬೈಲು, ಮೋಹನಾಂಗಿ,ಚಪ್ಪರ ಸಮಿತಿ ಅಧ್ಯಕ್ಷ ಸತೀಶ್ ಸುರುಳಿಮೂಲೆ, ಸಂಚಾಲಕ ಪ್ರವೀಣ ನೀರಳಿಕೆ ಸದಸ್ಯರಾದ ಶಿವಪ್ರಸಾದ್ ಮುಂಡ್ಯ,ಒಡಿಯೂರು ಗ್ರಾಮ ವಿಕಾಸ ಯೋಜನೆ ತಾಲೂಕು ಮೇಲ್ವಿಚಾರಕಿ ಸವಿತಾ ರೈ ನೆಲ್ಲಿತಡ್ಕ,ಈಶ್ವರಮಂಗಲ ವಲಯ ಸಂಯೋಜಕಿ ಮಹಿತಾ ರೈ ನಡುಬೈಲು,ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೇನಾಲ ಒಕ್ಕೂಟದ ಸೇವಾ ಪ್ರತಿನಿದಿ ಸುಂದರ ಜಿ, ಮತ್ತು ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು ಪದಾಧಿಕಾರಿಗಳು ಮತ್ತು ಸದಸ್ಯರು, ಬೈಲುವಾರು ಸಮಿತಿ ಅಧ್ಯಕ್ಷ ಸಂಚಾಲಕರು ಹಾಗೂ ಸದಸ್ಯರು ಹಾಗೂ ಊರ ಭಕ್ತಾದಿಗಳು ಉಪಸ್ಥಿತರಿದ್ದರು.

news-details