ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಇದರ ಅಧ್ಯಕ್ಷರಾದ ಶ್ರೀ ಸೋಮಣ್ಣ ಬೇವಿನ ಮರದ ಇವರಿಂದ ಗಡಿಭಾಗದ ಸರಕಾರಿ ಶಾಲೆಗೆ ಭೇಟಿ ಮತ್ತು ಎಸ್. ಎಸ್ .ಎಲ್ .ಸಿ ವಿದ್ಯಾರ್ಥಿಗಳೊಂದಿಗೆ ಸಂವಾದ

ಪುತ್ತೂರು

news-details

ಸರಕಾರಿ ಪ್ರೌಢಶಾಲೆ ನೆಟ್ಟಣಿಗೆ ಮೂಡ್ನೂರು ಇಲ್ಲಿಗೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಇದರ ಅಧ್ಯಕ್ಷರಾದ ಸೋಮಣ್ಣ ಬೇವಿನ ಮರದ ಇವರು ಭೇಟಿ ನೀಡಿ ಎಸ್. ಎಸ್ .ಎಲ್. ಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಅಲ್ಲದೆ ಕರ್ನಾಟಕ ಮತ್ತು ಕೇರಳ ಗಡಿ ಪ್ರದೇಶದ ಪ್ರೌಢಶಾಲೆಯು ಪದವಿ ಪೂರ್ವ ಕಾಲೇಜ್ ಆಗಿ ಮೇಲ್ದರ್ಜೆಗೆ ಏರಿ ಅಭಿವೃದ್ಧಿ ಹೊಂದಲಿ. ಎಲ್ಲರಿಗೂ ಉತ್ತಮ ಶಿಕ್ಷಣ ನೀಡುವ ಸಂಸ್ಥೆಯಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.
ಶ್ರೀ ರಾಮಕೃಷ್ಣ ಪ್ರೌಢಶಾಲೆ ಪುತ್ತೂರು ಇದರ ಸಂಚಾಲಕರಾದ ಕಾವು ಹೇಮನಾಥ ಶೆಟ್ಟಿ ಇವರು ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಪರಿಚಯ ಮತ್ತುಸಾಧನೆ ತಿಳಿಸುತ್ತಾ ಶಾಲೆಯ ಅಭಿವೃದ್ಧಿಗೆ ಸಹಕಾರ ನೀಡುವಂತೆ ವಿನಂತಿಸಿದರು. ಶಾಲಾ ಅಭಿವೃದ್ಧಿ ಮೇಲುಸ್ತುವಾರಿ ಸಮಿತಿಯ ವತಿಯಿಂದ ಗೌರವಿಸಲಾಯಿತು.. ಶಾಲಾ ಅಭಿವೃದ್ಧಿ ಮೇಲುಸ್ತುವಾರಿ ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀರಾಮ್ ಪಕ್ಕಳ ಅಧ್ಯಕ್ಷತೆ ವಹಿಸಿದ್ದರು.
ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಫೌಝಿಯಾ ಇಬ್ರಾಹಿಂ. ಉಪಾಧ್ಯಕ್ಷರಾದ ಶ್ರೀರಾಮ ಮೇನಾಲ. ಗ್ರಾಮ ಪಂಚಾಯತ್ ಸದಸ್ಯರಾದ ಇಬ್ರಾಹಿಂ ಪಳ್ಳತ್ತೂರು. ಹಾಗೂ ಶಾಲಾ ಅಭಿವೃದ್ಧಿ ಮೇಲುಸ್ತುವಾರಿ ಸಮಿತಿಯ ಸದಸ್ಯರು ಹಾಗೂ ಪಿ .ಎಲ್. ಡಿ ಬ್ಯಾಂಕ್ ಪುತ್ತೂರು ಇದರ ನಿರ್ದೇಶಕರಾದ ವಿಕ್ರಂ ರೈ ಸಾಂತ್ಯ. ನೆಟ್ಟಣಿಗೆ ಮುಡ್ನೂರು ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಕ್ಷರಾದ ಸೂಫಿ ಬಾಂಟಡ್ಕ,ಮಧುರ ಸ್ಕೂಲ್ ಇದರ ಸಂಚಾಲಕರಾದ ಅಬ್ದುಲ್ ರಹಿಮಾನ್ ಮೇನಾಲ.ಯಾಕುಬ್ ನಾಗನಡ್ಕ. ಅಬ್ದುಲ್ ಖಾದರ್ ಸುರುಳಿ ಮೂಲೆ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕರಾದ ಪ್ರೇಮ್ ಕುಮಾರ್ ಸ್ವಾಗತಿಸಿದರು. ಶಿಕ್ಷಕರಾದ ಶ್ರೀ ದೇವಿಪ್ರಕಾಶ್ ಶೆಟ್ಟಿ. ಶ್ರೀಮತಿ ದಮಯಂತಿ. ಶ್ರೀಮತಿ ಮೋನಿಷಾ. ಶ್ರೀಮತಿ ಮೀನಾಕ್ಷಿ .ಶ್ರೀಮತಿ ಮಾಲಿನಿ ಸಹಕರಿಸಿದರು. ಸಮಾಜ ವಿಜ್ಞಾನ ಶಿಕ್ಷಕಿ ಶ್ರೀಮತಿ ಇಂದಿರಾ ವಂದಿಸಿದರು. ಗಣಿತ ಶಿಕ್ಷಕರಾದ ಪುರುಷೋತ್ತಮ ಇವರು ಕಾರ್ಯಕ್ರಮ ನಿರ್ವಹಿಸಿದರು.

news-details