ಹೊಸ ಬೆಳಕು ಬಡವರ ಆಶಾಕಿರಣ ಸೇವಾ ಟ್ರಸ್ಟ್ (ರಿ) ಆರ್ಲಪದವು ಹಾಗೂ ರಕ್ತ ಸಂಜೀವಿನಿ ಬ್ಲಡ್ ಗ್ರೂಪ್ ಪುತ್ತೂರು ಇದರ 8 ನೇ‌ ವರ್ಷಕ್ಕೆ ಪಾದಾರ್ಪಣೆ ಗೊಂಡ ಶುಭ ಸಂದರ್ಭದಲ್ಲಿ ಬಡ ಕುಟುಂಬಗಳಿಗೆ ಸಹಾಯಧನ ವಿತರಣೆ ಹಾಗೂ ಸಾಧಕರಿಗೆ ಗೌರವಾರ್ಪಣೆ

ಪುತ್ತೂರು

news-details

ಹೊಸ ಬೆಳಕು ಬಡವರ ಆಶಾಕಿರಣ ಸೇವಾ ಟ್ರಸ್ಟ್ (ರಿ) ಆರ್ಲಪದವು ಹಾಗೂ ರಕ್ತ ಸಂಜೀವಿನಿ ಬ್ಲಡ್ ಗ್ರೂಪ್ ಪುತ್ತೂರು ಇದರ 8 ನೇ‌ ವರ್ಷಕ್ಕೆ ಪಾದಾರ್ಪಣೆ ಗೊಂಡ ಶುಭ ಸಂದರ್ಭದಲ್ಲಿ ಬಡ ಕುಟುಂಬಗಳಿಗೆ ಸಹಾಯಧನ ವಿತರಣೆ ಹಾಗೂ ಸಾಧಕರಿಗೆ ಗೌರವಾರ್ಪಣೆ ಕಾರ್ಯಕ್ರಮ ಪಾಣಾಜೆ ಹಾಲು ಉತ್ಪಾದಕರ ಸಹಕಾರಿ ಸಂಘದ ಸಭಾಭವನದಲ್ಲಿ ಪೆ.18 ರಂದು ನಡೆಯಿತು.
ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಸ್ಥಾಪಕಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ದೀಪ ಬೆಳಗಿಸಿ‌ ಉದ್ಘಾಟಿಸಿ ಟ್ರಸ್ಟ್ ನ ಕಾರ್ಯಕ್ರಮದ ಬಗ್ಗೆ ಶ್ಲಾಘಿಸಿದರು. ಮಂಗಳೂರು ಸೇವಾ ಚಾರಿಟೇಬಲ್ ಟ್ರಸ್ಟ್ ನ ಅರ್ಜುನ್ ಭಂಡಾರ್ಕರ್, ಖ್ಯಾತ ಜ್ಯೋತಿಷಿ ಲೋಕೇಶ್ ಬಲ್ಯಾಯ ದೊಡ್ಡಡ್ಕ, ಮಾಜಿ ಸೈನಿಕ‌ ಪುಷ್ಪರಾಜ್ ಕೋಟೆ, ಕೆ.ಎಮ್.ಎಫ್ ನಿರ್ದೇಶಕ ನಾರಾಯಣ ಪ್ರಕಾಶ್ ನೆಲ್ಲಿತ್ತಿಮಾರು, ಬೆಂಗಳೂರು ಯುವ ಉದ್ಯಮಿ ರಾಕೇಶ್ ರೈ ಕಡಮಾಜೆ, ಪಾಣಾಜೆ ಸಿ.ಎ ಬ್ಯಾಂಕ್ ಮಾಜಿ ನಿರ್ದೇಶಕ ರವೀಂದ್ರ ಭಂಡಾರಿ ಬೈಂಕ್ರೊಡು, ರಣಮಂಗಲ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶ್ರೀಕೃಷ್ಣ ಬೊಳಿಲ್ಲಾಯ ಕಡಮಾಜೆ, ಬೆಂಗಳೂರು ಮಾತಾನಂದಮಿ ಇಂಜಿನಿಯರಿಂಇ‍ಗ್ ಕಾಲೇಜ್ ಮೆಲ್ವೀಚಾರಕ ರಾಜೇಶ್ ಕೋಟೆ, ಪಾಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಮೈಮುನಾತುಲ್ ಮೆಹ್ರಾ, ಉಪಾಧ್ಯಕ್ಷೆ ಜಯಶ್ರೀ ದೇವಸ್ಯ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪಾಣಾಜೆ ಸುಬೋಧ ಪ್ರೌಢಶಾಲಾ ಸಂಚಾಲಕ ಮಹಾಬಲೇಶ್ವರ ಭಟ್ ಗಿಳಿಯಾಲು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ರಂಗ ಕಲಾವಿದ ಕೃಷ್ಣಪ್ಪ ಪುತ್ತೂರು ಸ್ವಾಗತಿಸಿ ವಂದಿಸಿದರು.ಕರುಣಾಕರ ಕುಲಾಲ್,ಪ್ರಕಾಶ್ ಕುಲಾಲ್ ಆರ್ಲಪದವು ಕಾರ್ಯಕ್ರಮ ನಿರೂಪಿಸಿದರು. ಪ್ರದೀಪ್ ಪಾಣಾಜೆ, ಪ್ರೇಮ್ ರಾಜ್ ಆರ್ಲಪದವು, ಹರೀಶ್ ಆರ್ಲಪದವು, ವಸಂತ ಭರಣ್ಯ ಸಹಕರಿಸಿದರು.ಕಾರ್ಯಕ್ರಮ ಆರಂಭಕ್ಕೆ ಮೊದಲು ಭಾರತಾಂಬೆಗೆ ಪುಷ್ಪಾರ್ಚನೆ ಮಾಡಲಾಯಿತು.

* ಸನ್ಮಾನ ಪಡೆದ 13 ಮಂದಿ ಸಾಧಕರು;
ಸಮಾಜ ಸೇವಕ ಅರ್ಜುನ ಭಂಡಾರ್ಕರ್ ಮಂಗಳೂರು, ಉತ್ತಮ ಅಂಗನವಾಡಿ ಸಹಾಯಕಿ ಶ್ರೀಮತಿ ಶ್ರೀ ತಿಲಕ ಗೌಡ,ಸಾಮಾಜಿಕ ಕಾರ್ಯಕರ್ತೆ ಅನಿತಾ ರಾಜ್,ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ವಿದ್ಯಾಶ್ರೀ ಚಾರಿಟೇಬಲ್ ಟ್ರಸ್ಟ್
ಜಿಲ್ಲಾ ,ಸಾಮಾಜಿಕ ಕಾರ್ಯಕರ್ತೆ ಹೇಮಾ ಜಯರಾಮ ರೈ,ರಂಗಭೂಮಿ ಕಲಾವಿದ ಕೃಷ್ಣಪ್ಪ ಜಿ.ಎಂ, 100 ಸಲ ರಕ್ತದಾನ ಮಾಡಿದ ನಟೇಶ್ ಎಂ.ಪಿ ,ಸಾಮಾಜಿಕ ಕಾರ್ಯಕರ್ತ, ರಕ್ತದಾನಿ ನವೀನ್ ನಗರ,50 ಕ್ಕೂ ಸಲ ರಕ್ತದಾನ ಮಾಡಿದ ಸುಂದರ ನಾಯ್ಕ ತೂಂಬಡ್ಕ , ನಾಟಿ ವೈದ್ಯ ತಾಝಾರ್ ಖಾನ್ ,ಸಾಮಾಜಿಕ ಕಾರ್ಯಕರ್ತ ಶಶಿದರ ಪಾಟಾಳಿ ಮೇರ್ಲ ಕೆಯ್ಯೂರು,ಸಾಮಾಜಿಕ ಕಾರ್ಯಕರ್ತ ಚಂದ್ರ ಶೇಖರ ಇರ್ದೆ, ನಾಟಿ ವೈದ್ಯೆ ಶ್ಯಾಮಲಾ ರೈ ನೆಟ್ಟಣಿಗೆ ಇವರನ್ನು ಗೌರವಿಸಲಾಯಿತು.
ಅಲ್ಲದೆ 24 ಮಂದಿ ಅಸಹಾಯಕರಿಗೆ , ಅನಾರೋಗ್ಯ ಪೀಡಿತರಿಗೆ ಸಹಾಯ ಧನದ ಚೆಕ್ ವಿತರಿಸಲಾಯಿತು.

news-details