ಬೆಟ್ಟಂಪಾಡಿ :ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಶ್ರೀ ದೇವರ 12ನೇ ವರ್ಷದ ಪ್ರತಿಷ್ಠಾ ಮಹೋತ್ಸವ, ವಿವಿಧ ಕಾರ್ಯಕ್ರಮಗಳು

ಪುತ್ತೂರು

news-details

ಬೆಟ್ಟಂಪಾಡಿ :ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಶ್ರೀ ದೇವರ 12ನೇ ವರ್ಷದ ಪ್ರತಿಷ್ಠಾ ಮಹೋತ್ಸವವು ದಿನಾಂಕ 22-02-2025ನೇ ಶನಿವಾರ ದೇವಾಲಯದಲ್ಲಿ ಬ್ರಹ್ಮ ಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಜರಗಿತ್ತು.
ಬೆಳಿಗ್ಗೆ 7-30ಕ್ಕೆ: ದೇವತಾ ಪ್ರಾರ್ಥನೆ, 8-30ಕ್ಕೆ : ದ್ವಾದಶ ನಾರಿಕೇಳ ಗಣಪತಿ ಹವನ, 9-30ಕ್ಕೆ : ಏಕಾದಶ ರುದ್ರಾಭಿಷೇಕ, 10-00ಕ್ಕೆ: ಶ್ರೀ ದೇವರಿಗೆ, ಪರಿವಾರ ದೇವರಿಗೆ, ದೈವಗಳಿಗೆ, ನಾಗದೇವರಿಗೆ ಕಲಶಾಭಿಷೇಕ, 11-00ಕ್ಕೆ : ಸಾಮೂಹಿಕ ಆಶ್ಲೇಷ ಬಲಿ ಸೇವೆ, 12-30ಕ್ಕೆ: ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಅನ್ನ ಸಂತರ್ಪಣೆ ನಡೆಯಿತು.ಅನುವಂಶಿಕ ಆಡಳಿತ ಮೊಕ್ತೇ ಸರ ಬಿ ವಿನೋದ್ ಕುಮಾರ್ ಬಲ್ಲಾಳ್ ಶಿವಗಿರಿ ಬೀಡು, ಮೊಕ್ತೇಸರ ವಿನೋದ್ ಕುಮಾರ್ ರೈ ಬೆಟ್ಟಂಪಾಡಿ ಗುತ್ತು ಆಡಳಿತ ಸಮಿತಿ, ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಭಕ್ತರು ಉಪಸ್ಥಿತರಿದ್ದರು

news-details