ಈಶ್ವರ ಮಂಗಲ :ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರೆ : ವೈಭವದ ಹಸಿರು ವಾಣಿ ಮೆರವಣಿಗೆ,ಭಕ್ತರಿಂದ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ

ಪುತ್ತೂರು

news-details


ಈಶ್ವರ ಮಂಗಲ :ಶ್ರೀ ಪಂಚಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೆ ಹಾಗೂ ಕಿನ್ನಿಮಾಣಿ, ಪೂಮಾಣಿ, ಪಿಲಿ ಚಾಮುಂಡಿ ದೈವಗಳ ನೇಮೋತ್ಸವವು ಫೆ. 24ರಿಂದ ಮಾ. 4ರ ತನಕ ಕುಂಟಾರು ಬ್ರಹ್ಮಶ್ರೀ ವಾಸುದೇವ ತಂತ್ರಿಗಳ ಮಾರ್ಗದರ್ಶನದಲ್ಲಿ
ಪೂರ್ವಶಿಷ್ಠ ಸಂಪ್ರದಾಯ ಪ್ರಕಾರ ನಡೆಯಲಿದೆ.
ಇದರ ಅಂಗವಾಗಿ ನೂಜಿಬೈಲು, ಪೆರ್ನಾಜೆ, ನೆಲ್ಲಿತ್ತಡ್ಕ, ಸಾಂತ್ಯ, ಮುಂಡ್ಯ, ಕುತ್ಯಾಳ, ಪಟ್ಲಡ್ಕ, ಪುಳಿಮಾರಡ್ಕ, ಮೇನಾಲ, ಮೆಣಸಿನಕಾನ, ಮಯ್ಯಾಳ, ಪಂಚೋಡಿ, ಕುದ್ರೋಳಿ, ಕರ್ನೂರು, ಗಾಳಿಮುಖ, ಆಲಂತಡ್ಕ ಈ ಆಸುಪಾಸಿನವರು ಮತ್ತು ಎಲ್ಲ ಸಂಘ ಸಂಸ್ಥೆಗಳವರು ಪಂಚಾಯತು ಬಳಿ ಒಟ್ಟಿಗೆ ಸೇರಿದರು. ಹಸಿರು ಹೊರೆಕಾಣಿಕೆ ಮೆರವಣಿಗೆಗೆ ಸಂಪ್ಯ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸೆಕ್ಟರ್ ಜಂಬೂರಾಜ್ ಮಹಾಜನ್ ಚಾಲನೆ ನೀಡಿ ಶುಭ ಹಾರೈಸಿದರು.ಜಾತ್ರೋತ್ಸವ ಸಮಿತಿಯ ಅಧ್ಯಕ್ಷ ನಾಗಪ್ಪ ಗೌಡ ಬೊಮ್ಮಟ್ಟಿ ಇವರು ಎಲ್ಲರನ್ನು ಸ್ವಾಗತಿಸಿದರು.ನಿವೃತ್ತ ಶಿಕ್ಷಕ ಆನಂದ ರೈ ನಿರ್ವಹಿಸಿದರು.
ಮಕ್ಕಳ ಕುಣಿತ ಭಜನ ತಂಡ, ತ್ರಿಶೂರು ಕೊಡೆ, ಸಿಂಗಾರಿ ಮೇಳ,ಹಸಿರುವಾಣಿ ತರಕಾರಿಯನ್ನು ಬುಟ್ಟಿಯಲ್ಲಿ ಹೊತ್ತ ಮಾತೆಯರು, ಚೆಂಡೆ, ಹಸಿರು ವಾಣಿಯ ವಾಹನ ಜಾಥಾ ವಿಜೃಂಭಣೆಯ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಜನಮನ ಗೆದ್ದಿತ್ತು. ನೂರಾರು ಭಕ್ತರು ಪಾಲ್ಗೊಂಡಿದ್ದರು. ಉಗ್ರಾಣ ತುಂಬುವುದು,ಶ್ರೀ ದುರ್ಗಾಪೂಜೆ ನಡೆಯಿತು. ದೇವಾಲಯದ ಪ್ರಧಾನ ಅರ್ಚಕ ರವೀಂದ್ರ ಮಾಣಿಲತ್ತಾಯ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿದರು.
ಈಶ್ವರಮಂಗಲ ಪೇಟೆಯಲ್ಲಿ ಮೆರವಣಿಗೆಯನ್ನು ದಿಟ್ಟಿಸಿ ನೋಡಿದ ಹಸುಗಳು!!!!
ಪಂಚಾಯತ್ ಬಳಿಯಿಂದ ವೈಭವದ ಹಸಿರುವಾಣಿ ಹೊರೆ ಕಾಣಿಕೆ ಮೆರವಣಿಗೆ ಬಹಳ ವಿಜೃಂಭಣೆಯಿಂದ ರಾಜರಸ್ತೆಯಲ್ಲಿ ಸಾಗಿ ಬರುತ್ತಿತ್ತು. ಮಕ್ಕಳು, ಮಾತೆಯರು ಮಹನೀಯರು ಮೆರವಣಿಗೆಯಲ್ಲಿ ಹೆಜ್ಜೆ ಹಾಕುತ್ತಿದ್ದರು, ಜೊತೆ ಯಲ್ಲಿ ಸಿಂಗಾರಿ ಮೇಳ, ಕುಣಿತ ಭಜನೆ, ಚೆಂಡೆ ಶಬ್ದ ಮೆರವಣಿಗೆ ಶೋಭೆ ತಂದಿದ್ದು ಈಶ್ವರಮಂಗಲ ಮೇ.ಉಣ್ಣಿಕೃಷ್ಣನ್ ವೃತ್ತ ಬಳಿ ತಲುಪುತ್ತಿದ್ದಂತೆ ನಾಲ್ಕೈದು ಹಸುಗಳು ಮೆರವಣಿಗೆಯನ್ನು ಸುಮಾರು ಮೂರು ನಾಲ್ಕು ನಿಮಿಷ ದಿಟ್ಟಿಸಿ ನೋಡಿರುವುದು ಸೇರಿದ ಭಕ್ತ ಜನರನ್ನು ಪುಳಕಿತಗೊಳಿಸಿತ್ತು.
ಪವಿತ್ರಪಾಣಿ ಗೋಪಾಲಕೃಷ್ಣ ಕುಂಜತ್ತಾಯ ಮೆಣಸಿನಕಾನ, ಜಾತ್ರೋತ್ಸವ ಸಮಿತಿಯ ಅಧ್ಯಕ್ಷ ನಾಗಪ್ಪ ಗೌಡ ಬೊಮ್ಮಟ್ಟಿ, ಕಾರ್ಯದರ್ಶಿ ಪೂರ್ಣಚಂದ್ರ ರೈ ನೆಲ್ಲಿತಡ್ಕ, ಉಪಾಧ್ಯಕ್ಷ ಸುಭಾಷ್ ಚಂದ್ರ ರೈ ಮೈರೋಳು, ಕೋಶಾಧಿಕಾರಿ ರಾಮಣ್ಣ ನಾಯ್ಕ ಸಸಿ ಹಿತ್ಲು ಕುತ್ಯಾಳ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಅರಿಯಡ್ಕ ಮಂಜುನಾಥ ರೈ ಸಾಂತ್ಯ, ಪ್ರಧಾನ ಕಾರ್ಯದರ್ಶಿ ಎಸ್ ಮೋಹನ್ ದಾಸ್ ಶೆಟ್ಟಿ ನೂಜಿಬೈಲು, ಕೋಶಾಧಿಕಾರಿ ದೀಪಕ್ ಕುಮಾರ್ ಮುಂಡ್ಯ ,ಶ್ರೀಕೃಷ್ಣ ಭಟ್ ಮುಂಡ್ಯ,ಡಾ. ಶ್ರೀಕುಮಾರ್,ಶ್ರೀರಾಮ್ ಪಕ್ಕಳ,ಪ್ರದೀಪ್ ರೈ ಮೇನಾಲ,ಸುರೇಶ ಆಳ್ವ ಸಾಂತ್ಯ,ಗಿರೀಶ್ ಕುಮಾರ್ ರೈ ಮರಕ್ಕಡ, ವಿಕ್ರಂ ರೈ ಸಾಂತ್ಯ,ಸತೀಶ್ ಸುರುಳಿ ಮೂಲೆ, ಜಯಾನಂದ ಕೋರಿಗದ್ದೆ,ಪ್ರಶಾಂತ್ ನಾಯರ್ ಕುಂಟಾಪು, ಸಂಜೀವ ರೈ, ಜಯಪ್ರಕಾಶ್ ರೈ ನೂಜಿ ಬೈಲು,ರಮೇಶ್ ಪೂಜಾರಿ ಮುಂಡ್ಯ,ಜಯಚಂದ್ರ ಸೇರಾಜೆ, ಆನಂದ ರೈ ಸಾಂತ್ಯ ಸದಾಶಿವ ರೈ ನಡುಬೈಲು,ಶೇಖರ್ ಮುಂಡ್ಯ ,ನಾರಾಯಣ ಭಟ್, ಸುರೇಶ್ ನಾಯ್ಕ್,ನಾರಾಯಣ ರೈ ಬೆಡ್ಡಿಗದ್ದೆ , ಸತೀಶ್ ಸುರುಳಿ ಮೂಲೆ, ಅಣ್ಣಯ್ಯ ಗೌಡ, ತಾರಾನಾಥ ನೂಜಿ ಬೈಲು, ಚಂದ್ರಹಾಸ್ ಈಶ್ವರ ಮಂಗಳ,,ರಾಮ ಮೇನಾಲ, ಜಗನಾಥ್ ಶೆಟ್ಟಿ,ಮುರಳಿ ಮೋಹನ್ ಶೆಟ್ಟಿ, ಉದಯ ಕುಮಾರ್ ಪಟ್ಲಡ್ಕ, ಗಣೇಶ್ ವಜ್ರಮೂಲೆ, ಚರಣ್ ರಾಜ್ ಮಡ್ಯಲಮಜಲು , ಚೇತನ್ ಬೊಮ್ಮಟ್ಟಿ ಕೃಷ್ಣಪ್ಪ ಗೌಡ, ಚಂದ್ರಶೇಖರ, ಪ್ರವೀಣ್ ರೈ ಮೇನಾಲ, ರಾಘವೇಂದ್ರ ಆಚಾರ್ಯ, ಜತ್ತಪ್ಪ ಗೌಡ ಕೊಂಕಣಿಗುಂಡಿ, ಸುರೇಶ್ ರೈ ನಡುಬೈಲು, ರಾಮಣ್ಣ ನಾಯ್ಕ ಬಸಿರಡ್ಕ, ಕೊರಗಪ್ಪ ನಾಯ್ಕ ಕಲ್ಲಾಜೆ, ಸೀತಾರಾಮ ಮಣಿಯಾಣಿ, ಶರತ್ ರೈ ನೆಲ್ಲಿತಡ್ಕ ಮೋಹನಾಂಗಿ, ಗಾಯತ್ರಿ, ಪ್ರಪುಲ್ಲ, ಶೈಲಜಾ ಮೇನಾಲ, ಮಹಿತಾ ರೈ,ಭಾಗ್ಯಶ್ರೀ ಪುಲಿಮಾರಡ್ಕ, ರತಿ ಮುಂಡ್ಯ,
ದೇವಿಪ್ರಕಾಶ್ ಶೆಟ್ಟಿ ಕುತ್ಯಾಳ, ರಾಧಾಕೃಷ್ಣ ಕುತ್ಯಾಳಪಾದೆ, ಪ್ರವೀಣ್ ರೈ, ರಾಮಪ್ರಸಾದ್ ಶೆಟ್ಟಿ ಮೇನಾಲ,ಮೋನಪ್ಪ ರೈ ಕನ್ನಟಿಮಾರು, ನಿರಂಜನ್ ರೈ,ನವೀನ್ ಗೌಡ ಕುಕ್ಕು ಡೇಲು , ರಮೇಶ್, ಅಮರನಾಥ್ ರೈ,ಜಗದೀಶ್ ರಾವ್, ಹರೀಶ್ ರಾವ್, ರಾಮ್ ರತನ್ ನಾಯ್ಕ್ ಉಜಂಪಾಡಿ,
ಸಂದೀಪ್ ಕಾರಂತ್, ಶ್ರೀನಿವಾಸ್ ಹಿರಿಯಾಣ,ವೆಂಕಪ್ಪ ನಾಯ್ಕ, ರಮಾನಂದ ಕೋರಿಗದ್ದೆ , ಅಚ್ಚುತ ಮಣಿಯಾಣಿ, ಶಿವಪ್ರಸಾದ್, ಜಯರಾಜ್ ಮುಂಡ್ಯ, ಚಂದ್ರಶೇಖರ್ ಕತ್ರಿಬೈಲು, ಮಲ್ಲ ಮೇನಾಲ, ಸುಂದರ್ ಜಿ, ತಿಮ್ಮಪ್ಪ ಸುವರ್ಣ, ಕೇಶವ ಕೋರಿ ಗದ್ದೆ ಮುಂತಾದವರು ಉಪಸ್ಥಿತರಿದ್ದರು.

news-details