ಈಶ್ವರಮಂಗಲ: ಶ್ರೀ ಪಂಚಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೆ ಪ್ರಾರಂಭ, ಧ್ವಜಾರೋಹಣ

ಪುತ್ತೂರು

news-details

ಈಶ್ವರಮಂಗಲ: ಶ್ರೀ ಪಂಚಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೆ ಹಾಗೂ ಕಿನ್ನಿಮಾಣಿ, ಪೂಮಾಣಿ, ಪಿಲಿ ಚಾಮುಂಡಿ ದೈವಗಳ ನೇಮೋತ್ಸವವು ಫೆ. 24ರಿಂದ ಮಾ. 4ರ ತನಕ ಕುಂಟಾರು ಬ್ರಹ್ಮಶ್ರೀ ವಾಸುದೇವ ತಂತ್ರಿಗಳ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದು ಸೋಮವಾರ ಧ್ವಜಾ ರೋಹಣ ನಡೆಯಿತು.
ಬೆಳಿಗ್ಗೆ ಗಣಪತಿ ಹೋಮ ನಡೆಯಿತು.
ಶ್ರೀಪಂಚಲಿಂಗೇಶ್ವರ ಭಕ್ತವೃಂದ ಮತ್ತು ಯಕ್ಷಾಭಿಮಾನಿಗಳು ಈಶ್ವರಮಂಗಲ ಇವರಿಂದ ಯಕ್ಷಗಾನ ತಾಳಮದ್ದಳೆ "ಮಾಗಧ ವಧೆ/ಅಗ್ರಪೂಜೆ", ಮಧ್ಯಾಹ್ನ ಮಹಾಪೂಜೆ, ದೇವರ ನಿತ್ಯಬಲಿ, ಅನ್ನಸಂತರ್ಪಣೆ ನಡೆಯಿತು.
ದೇವಾಲಯದ ಪ್ರಧಾನ ಅರ್ಚಕ ರವೀಂದ್ರ ಮಾಣಿಲತ್ತಾಯ,
ಪವಿತ್ರಪಾಣಿ ಗೋಪಾಲಕೃಷ್ಣ ಕುಂಜತ್ತಾಯ ಮೆಣಸಿನಕಾನ, ಜಾತ್ರೋತ್ಸವ ಸಮಿತಿಯ ಅಧ್ಯಕ್ಷ ನಾಗಪ್ಪ ಗೌಡ ಬೊಮ್ಮಟ್ಟಿ, ಕಾರ್ಯದರ್ಶಿ ಪೂರ್ಣಚಂದ್ರ ರೈ ನೆಲ್ಲಿತಡ್ಕ, ಉಪಾಧ್ಯಕ್ಷ ಸುಭಾಷ್ ಚಂದ್ರ ರೈ ಮೈರೋಳು, ಚಿನ್ಮಯ ರೈ ನಡುಬೈಲು ಕೋಶಾಧಿಕಾರಿ ರಾಮಣ್ಣ ನಾಯ್ಕ ಸಸಿ ಹಿತ್ಲು ಕುತ್ಯಾಳ, ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ,ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ನಿರಂಜನ್ ರೈ ನೂಜಿಬೈಲು, ರತನ್ ನಾಯ್ಕ್ ಕರ್ನೂರುಗುತ್ತು, ಅಧ್ಯಕ್ಷ ಎ ಮಂಜುನಾಥ ರೈ ಸಾಂತ್ಯ, ಪ್ರಧಾನ ಕಾರ್ಯದರ್ಶಿ ಎಸ್ ಮೋಹನ್ ದಾಸ್ ಶೆಟ್ಟಿ ನೂಜಿಬೈಲು, ಕೋಶಾಧಿಕಾರಿ ದೀಪಕ್ ಕುಮಾರ್ ಮುಂಡ್ಯ ,ಶ್ರೀಕೃಷ್ಣ ಭಟ್ ಮುಂಡ್ಯ
ಉಪಾಧ್ಯಕ್ಷರುಗಳಾದ ಸುರೇಶ್ ಆಳ್ವ ಸಾಂತ್ಯ,ಆನಂದ ರೈ ಸಾಂತ್ಯ, ಸದಾಶಿವ ರೈ ನಡುಬೈಲು, ಜತೆ ಕಾರ್ಯದರ್ಶಿ ವಿಕ್ರಂ ರೈ ಸಾಂತ್ಯ, ನಾರಾಯಣ ರೈ ಅಂಕೊತ್ತಿಮಾರು, ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು ಜಾತ್ರೋತ್ಸವ ಸಮಿತಿ ಪದಾಧಿಕಾರಿಗಳು, ಸದಸ್ಯರು,ಭಕ್ತರು ಉಪಸ್ಥಿತರಿದ್ದರು.

news-details