ಕೇರಳ ಭಾಗದಿಂದ ಪಾಣಾಜೆ ಬಂಟಾಜೆ ರಕ್ಷಿತಾರಣ್ಯ ಪ್ರದೇಶಕ್ಕೆ ಚಿರತೆ ? ಸೂಕ್ತ ತನಿಖೆಗೆ ಆಗ್ರಹ- ಖಾಸಗಿ ಸಿಸಿ ಕ್ಯಾಮರದಲ್ಲಿ ವಾಹನದ ಚಲನವಲನ ಪತ್ತೆ

ಪುತ್ತೂರು

news-details

ಕಾಸರಗೋಡು ಬೇಡಗಂ ಬಳಿಯ ಕೊಳತ್ತೂರಿನಲ್ಲಿ ಬೋನಿನಲ್ಲಿ ಸಿಲುಕಿದ ಚಿರತೆಯನ್ನು ಬಂಟಾಜೆ ಅರಣ್ಯದಲ್ಲಿ ಬಿಡಲಾಯಿತೇ? ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ. ಈ ವಿಷಯ ಕರ್ನಾಟಕ ಗಡಿ ಭಾಗದಲ್ಲಿ ಆತಂಕಕ್ಕೆ ಕಾರಣ ವಾಗಿದೆ. ಕೊಳತ್ತೂರಿನ ಖಾಸಗಿ ವ್ಯಕ್ತಿಯ ಹಿತ್ತಲಿನಲ್ಲಿ ಅರಣ್ಯ ಇಲಾಖೆಯ ಬೋನಿನಲ್ಲಿ ಸಿಲುಕಿಕೊಂಡ ಚಿರತೆಯನ್ನು ರಾತ್ರಿಯೇ ಸರಕಾರೀ ನಿಯಂತ್ರಿತ ಅರಣ್ಯದಲ್ಲಿ ಬಿಡುಗಡೆಗೊಳಿಸಲಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ. ಆದರೆ ಅದು ಎಲ್ಲಿ ಬಿಡಲಾಗಿದೆ ಎಂಬ ಬಗ್ಗೆ ಹೇಳುತ್ತಿಲ್ಲ. ಸೋಮವಾರ (ಫೆ. 24)ಮುಂಜಾನೆ 3.30 ಕ್ಕೆ ಅರಣ್ಯ ಇಲಾಖೆಯ ವಾಹನಗಳು ಮುಳ್ಳೇರಿಯ, ನಾಟಕಲ್ಲು, ನೆಟ್ಟಣಿಗೆ , ಕಿನ್ನಿಂಗಾರು ದಾಟಿ ಮುಂದೆ ಸಾಗಿದೆ. ಬೆಳಗ್ಗೆ 6.40 ಕ್ಕೆ ಈ ವಾಹನಗಳು ಮುಳ್ಳೇರಿಯ ಭಾಗಕ್ಕೆ ಹಿಂತಿರುಗಿದೆ.

ಹಾಗಿದ್ದಲ್ಲಿ ಕಿನ್ನಿಂಗಾರು ದಾಟಿ ಜಾಂಬ್ರಿ ಪ್ರದೇಶದಲ್ಲೆಲ್ಲೊ ಚಿರತೆಯನ್ನು ಬಿಟ್ಟಿರಬೇಕು ಎಂದು ಶಂಕಿಸಲಾಗಿದೆ.
ಕೇರಳ ಕರ್ನಾಟಕ ಗಡಿ ಪ್ರದೇಶದ ಬಂಟಾಜೆ ದಟ್ಟಾರಣ್ಯದಲ್ಲಿ ಚಿರತೆಯನ್ನು ಬಿಡಲಾಗಿದೆ ಎಂಬ ವದಂತಿ ವ್ಯಾಪಕವಾಗಿ ಹರಡಿದೆ. ಇದು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ. ಉಭಯ ಜಿಲ್ಲೆಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

news-details