ಗಡಿಭಾಗದಲ್ಲಿ ಚಿರತೆಯನ್ನು ಬಿಟ್ಟ ಜಿಲ್ಲಾ ಅರಣ್ಯ ಇಲಾಖೆ ಅಧಿಕಾರಿಯ ಮೇಲೆ ಕೇಸು ಫೈಲ್ ಮಾಡಿ: ಗ್ರಾಮಸ್ಥರ ಜೊತೆ ಪ್ರತಿಭಟನೆಯಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಭಾಗಿ, ಗ್ರಾಮಸ್ಥರ ಆಗ್ರಹದಂತೆ ಗ್ರಾಮ ಸಭೆ ಮುಂದೂಡಿಕೆ, ಪ್ರಕರಣ ದಾಖಲಿಸುವಂತೆ ಪಂಚಾಯತ್ ವತಿಯಿಂದ ಪೊಲೀಸ್, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ

ಪುತ್ತೂರು

news-details

ಪಾಣಾಜೆ : ಗ್ರಾಮ ಪಂಚಾಯತ್ ನ ಎರಡನೇ ಸುತ್ತಿನ ಗ್ರಾಮ ಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷೆ ಮೈಮುನಾತುಲ್ ಮೆಹ್ರಾ ಇವರ ಅಧ್ಯಕ್ಷತೆ ಯಲ್ಲಿ ಮಂಗಳವಾರ ಪಾಣಾಜೆ ಸಿಎ ಬ್ಯಾಂಕ್ ಸಭಾಂಗಣ ದಲ್ಲಿ ನಡೆಸಲು ಸಕಲ ಸಿದ್ದತೆ ಮಾ ಡಲಾಗಿತ್ತು,ನೋಡೆಲ್ ಅಧಿಕಾರಿಗಳು ಗಳು ಉಪಸ್ಥಿತರಿದ್ದರು. ಪಿಡಿಒ ಆಶಾ ಸಭೆ ಪ್ರಾರಂಭಿಸಲು ಮುಂದಾಗ ಗ್ರಾಮಸ್ಥರ ಸಂಖ್ಯೆ ಕಡಿಮೆ ಇದೆ, ಗ್ರಾಮಸ್ಥರು ಚಿರತೆ ಭಯದಿಂದ ಗ್ರಾಮಸಭೆಗೆ ಹಾಜರಿ ಆಗಿಲ್ಲ, ಕೇರಳದ ಬೇಡಗಂ ಬಳಿಯ ಕೊಳತ್ತೂರಿನಲ್ಲಿ ಬೋನಿನಲ್ಲಿ ಸಿಲುಕಿದ ಚಿರತೆಯನ್ನು ಕೇರಳದ ಅರಣ್ಯ ಇಲಾಖೆ ಅಧಿಕಾರಿಗಳು ಕರ್ನಾಟಕ ಹಾಗೂ ಕೇರಳ ರಾಜ್ಯ ಗಡಿ ಭಾಗದಲ್ಲಿರುವ ಬಂಟಾಜೆ ರಕ್ಷಿತಾರಣ್ಯದಲ್ಲಿ ಬಿಟ್ಟಿದ್ದಾರೆ ಎಂಬ ವಿಷಯ ಸಾಮಾಜಿಕ ಜಾಲತಾಣ ದಲ್ಲಿ ವೈರಲ್ ಆಗಿರುವುದು ಆತಂಕಕ್ಕೆ ಕಾರಣವಾಗಿದೆ. ನಮ್ಮ ಗ್ರಾಮದ ಮಕ್ಕಳ, ಮಹಿಳೆಯರ, ಜನರ ಜೀವಕ್ಕೆ ಅಪಾಯ ಇದೆ. ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು,ಜೀವ ಕೈಯಲ್ಲಿ ಹಿಡಿದು ಗ್ರಾಮ ಸಭೆ ನಡೆಸುವುದು ಸರಿಯಲ್ಲ.ಪಂಚಾಯತ್ ಸಹ ನಮ್ಮ ಜೊತೆ ಕೈಜೋಡಿಸಿ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಗ್ರಾಮಸ್ಥರು ಒತ್ತಾಯಿಸಿದರು. ನಂತರ ಚರ್ಚೆ ನಡೆದು ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಕೇರಳ ದಿಂದ ಕರ್ನಾಟಕ ಪ್ರದೇಶಕ್ಕೆ ಚಿರತೆಯನ್ನು ಬಿಟ್ಟ ಅಧಿಕಾರಿಗಳಿಗೆ
ಧಿಕ್ಕಾರ ಕೂಗಿ ಕೂಡಲೇ ಕೇಸು ದಾಖಲಿ ಸುವಂತೆ ಪ್ರತಿಭಟನೆಕಾರರು ಒ ತ್ತಾಯಿಸಿದರು.
ಗಡಿಪ್ರದೇಶದ ಕರ್ನಾಟಕ ಕ್ಕೆ ಚಿರತೆ ಬಿಟ್ಟಿರುವುದು ಜೀವಭಯಕ್ಕೆ ಕಾರಣವಾಗಿದೆ, ನಮ್ಮ ಜೀವಕ್ಕೆ ಬೆಲೆ ಇಲ್ಲವೇ, ಕೇರಳ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸಾಮಾನ್ಯ ಜ್ಞಾನ ವಿಲ್ಲವೇ ಎಂದು ಗ್ರಾಮ ಸ್ಥರು ಹರಿಹಾಯ್ದರು.
ಗ್ರಾಮಸ್ಥರು ನಮಗೆ ಗ್ರಾಮಸಭೆಗಿಂತ ಚಿರತೆ ಹಿಡಿಯುವುದೇ ಪ್ರಾಮುಖ್ಯ. ಅದರ ಕಡೆಗೆ ಗಮನ ಕೊಡಿ ಎಂದು ಅಧಿಕಾರಿಗಳಿಗೆ ಆಗ್ರಹಿಸಿದರು.ಪಾಣಾಜೆ ಶಾಖೆಯ ಉಪವಲಯ ಅರಣ್ಯಧಿಕಾರಿ ಮದನ್ ಗ್ರಾಮಸ್ಥರಿಗೆ ಇಲಾಖೆ ತೆಗೆದುಕೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಿ,ಯಾವುದೇ ಮಾಹಿತಿ ನೀಡದೇ ಚಿರತೆಯನ್ನು ಕೇರಳ ಅರಣ್ಯ ಇಲಾಖೆ ಯ ಅಧಿಕಾರಿಗಳು ನಮ್ಮಲ್ಲಿ ಬಿಟ್ಟಿದ್ದಾರೆ. ವಿಷಯ ತಿಳಿದ್ದು ಹೆಚ್ಚುವರಿ ಸಿಬ್ಬಂದಿಗಳು ಗಸ್ತು ತಿರುಗುತ್ತಿದ್ದಾರೆ. ಚಿರತೆಯನ್ನು ಹಿಡಿಯಲು ಬೋನ್ ನ್ನು ತರಿಸಲಾಗಿದೆ. ಸಂಜೆ ಹೊತ್ತಿನಲ್ಲಿ ಜನರು ಹೆಚ್ಚು ಜಾಗ್ರತರಾಗಿ ಇರಬೇಕು ಎಂದು ಹೇಳಿದರು.
ನಮ್ಮ ಗ್ರಾಮದ ಅರಣ್ಯ ಪ್ರದೇಶಕ್ಕೆ ಅಕ್ರಮವಾಗಿ ಬಂದು ಕದ್ದು ಮುಚ್ಚಿ ಚಿರತೆ ಯನ್ನು ಬಿಟ್ಟ ಅಧಿಕಾರಿಗಳ ಕ್ರಮವನ್ನು ಗಂಭೀರವಾಗಿ ಪರಿಗಣಿಸಿ, ಜಿಲ್ಲಾಡಳಿತ ಸೂಕ್ತ ಕ್ರಮಕೈಗೊಳ್ಳುವ ವರೆಗೆ ಪ್ರತಿಭಟನೆ ಯನ್ನು ಕೈ ಬಿಡಲು ಸಾಧ್ಯವಿಲ್ಲ ಎಂದು ಗ್ರಾಮಸ್ಥರು ಹೇಳಿದರು. ಸಂಪ್ಯ ಪೊಲೀಸ್ ಠಾಣೆಯ ಪೊಲೀಸ್ ಠಾಣಾಧಿಕಾರಿ ಜಂಬೂರಾಜ್ ಪ್ರತಿಭಟಣೆ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರದೊಂದಿಗೆ ಮಾತುಕತೆ ನಡೆಸಿದರು. ಗ್ರಾಮ ಸಭೆ ನಡೆಸುವಂತೆ ಗ್ರಾಮಸ್ಥರಿಗೆ ತಿಳಿಸಿದರು. ಗ್ರಾಮಸ್ಥರು ಪಟ್ಟು ಸಡಿಲಿಸದೇ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕೇಸು ದಾಖಲಿಸುವಂತೆ ಆಗ್ರಹಿಸಿದರು.
ಕೊಳತ್ತೂರಿನ ಖಾಸಗಿ ವ್ಯಕ್ತಿಯ ಹಿತ್ತಲಿನಲ್ಲಿ ಅರಣ್ಯ ಇಲಾಖೆಯ ಬೋನಿನಲ್ಲಿ ಸಿಲುಕಿಕೊಂಡ ಚಿರತೆಯನ್ನು ರಾತ್ರಿಯೇ ಕೇರಳ ರಾಜ್ಯದ ಅರಣ್ಯ ಇಲಾಖೆಯವರು ಇಲಾಖೆಯ ವಾಹನದಲ್ಲಿ ತಂದು ಕರ್ನಾಟಕ ಹಾಗೂ ಕೇರಳ ರಾಜ್ಯ ಗಡಿ ಭಾಗದಲ್ಲಿರುವ ಬಂಟಾಜೆ ರಕ್ಷಿತಾರಣ್ಯದಲ್ಲಿ ಬಿಟ್ಟು ಹೋಗಿದ್ದಾರೆ ಇದು ಅಧಿಕಾರಿಗಳು ಮಾಡಿದ ಅವಾಂತರ.ಅಧಿಕಾರಿಗಳು ಬಂದು ನೀವು ಚಿರತೆಯನ್ನು ಬಿಟ್ಟದ್ದು ಸತ್ಯವೋ? ಸುಳ್ಳೋ? ಎಂಬುದಾಗಿ ತಿಳಿಸಿ ನಮಗೆ ನ್ಯಾಯ ಕೊಡಿ.ಸಿಸಿಟೀವಿಯಲ್ಲೂ ದಾಖಲಾಗಿದೆ. ಈ ಸಂಗತಿ ಅನೇಕ ಮಾಧ್ಯಮಗಳಲ್ಲಿ ಬಂದಿದೆ ಎಂದು ಗ್ರಾಮಸ್ಥರು ಹೇಳಿದರು.
ಇಲ್ಲಿರುವ ಅಧಿಕಾರಿಗಳಿಗೆ ಆಗಲಿ, ಸ್ಥಳೀಯರಿಗಾಗಲೀ, ಪ್ರಮುಖರಿಗಾಗಲಿ ಯಾವುದೇ ಮಾಹಿತಿ ನೀಡದೆ ಅರಣ್ಯ ಪ್ರದೇಶದಲ್ಲಿ ಚಿರತೆಯನ್ನು ಬಿಟ್ಟಿದ್ದಾರೆ. ಕಾಸರಗೋಡು ಡಿ ಎಫ್ ಒ ರವರು ಚಿರತೆಯನ್ನು ಬಂಟಾಜೆ ರಕ್ಷಿತಾರಣ್ಯದಲ್ಲಿ ಬಿಟ್ಟಿದ್ದಾರೆ ಎಂಬುದನ್ನು ಕಾಸರಗೋಡು ಸಂಸದರಲ್ಲಿ ಒಪ್ಪಿಗೊಂಡಿದ್ದಾರೆ ಎಂಬ ಮಾಹಿತಿ ಇದೆ ಎಂದು ಗ್ರಾಮಸ್ಥರು ಹೇಳಿದರು.ಹೀಗೆ ಬಿಟ್ಟಂತಹ ವ್ಯಕ್ತಿಗಳ ಮೇಲೆ ಕ್ರಮ ಜರುಗಿಸಬೇಕು. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಲೇ ಬೇಕು ಅಲ್ಲಿಯವರೆಗೆ ಪ್ರತಿಭಟನೆ ನಡೆಸಲಿದ್ದೇವೆ ಎಂದು ಗ್ರಾಮಸ್ಥರು ಒಕ್ಕೊರಳ ಧ್ವನಿಗೂಡಿಸಿದರು. ಪಾರೆಸ್ಟ್ ಅಧಿಕಾರಿಗಳ ವಿರುದ್ಧ FIR ಆಗಬೇಕೆಂದು ಒತ್ತಾಯಿಸಿದರು.

ಗ್ರಾಮ ಸಭೆ ನಡೆಸಲು ಯತ್ನಿಸಿದ ಪ್ರಯತ್ನ ವಿಫಲ
ನಿಗದಿ ಪಡಿಸಿದ ಗ್ರಾಮ ಸಭೆಯನ್ನು ನಡೆಸಲು ಅವಕಾಶ ನೀಡುವಂತೆ ನೋಡೆಲ್ ಅಧಿಕಾರಿಗಳು, ಅಧ್ಯಕ್ಷರು ಯತ್ನಿಸಿದರೂ ಗ್ರಾಮಸ್ಥರು ಪಕ್ಷಭೇದ ಮರೆತು ಚಿರತೆಯ ವಿಷಯದಲ್ಲಿ ಬಿಗಿ ಪಟ್ಟು ಹಿಡಿದಿರುವುದರಿಂದ ಕೊನೆಗೆ ನೋಡೆಲ್ ಅಧಿಕಾರಿ ಗ್ರಾಮಸಭೆ ಯನ್ನು ಮುಂದೂಡಲಾಗಿದೆ ಎಂದು ಘೋಷಿಸಿದರು.ಗ್ರಾಮ ಸಭೆಗೆ ವಿವಿಧ ಇಲಾಖೆಯಿಂದ ಬಂದ ಅಧಿಕಾರಿಗಳು ತೆರಳಿದರು.
ತಹಸೀಲ್ದಾರ್ ಮಾತಿನಿಂದ ಅಸಮಾಧಾನ
ಗ್ರಾಮದ ಗಡಿಭಾಗದಲ್ಲಿ ಚಿರತೆ ಬಿಟ್ಟ ವಿಷಯ ದಲ್ಲಿ ಜಿಲ್ಲಾಡಳಿತ ಭಾ ಗವಾಗಿರುವ ತಹಸೀಲ್ದಾರ್ ರನ್ನು ಫೋನ್ ಮೂಲಕ ಸಂಪರ್ಕ ಮಾಡಿದ ಅಧ್ಯಕ್ಷರು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.ಅರಣ್ಯ ಇಲಾಖೆಯೇ ಸೂಕ್ತ ಕ್ರಮ ಕೊಳ್ಳಬೇಕು ಎಂದು ತಹಸೀಲ್ದಾರ್ ಹೇಳಿದ ಮಾತು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಯಿತು.

ಕಾನೂನು ಕ್ರಮಕ್ಕೆ ಪೊಲೀಸ್ ಮತ್ತು ಅರಣ್ಯ ಅಧಿಕಾರಿಗಳಿಗೆ ಪಂಚಾಯಿತಿನಿಂದ ಮನವಿ

ಪಾಣಾಜೆ ಗ್ರಾಮಸ್ಥರ ಸಭೆಯಲ್ಲಿ ಗ್ರಾಮಸ್ಥರು ಚಿರತೆಯನ್ನು ನಮ್ಮ ಗ್ರಾಮದಲ್ಲಿ ಬಿಟ್ಟು ಹೋದ ಕಾಸರಗೋಡು ಡಿ ಎಫ್ ಒ ಮೇಲೆ ಸೂಕ್ತ ಕ್ರಮಕ್ಕೆ ಮನವಿ ನೀಡಿ ಪ್ರತಿಭಟಿಸಿರುತ್ತಾರೆ ಮತ್ತು ಕದ್ದು ಮುಚ್ಚಿ ಚಿರತೆಯನ್ನು ಬಿಟ್ಟ ಕಾಸರಗೋಡಿನ ಡಿ ಎಫ್ ಒ ರವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಲಿಖಿತ ಮನವಿಯನ್ನು ನೀಡಿರುತ್ತಾರೆ ಆದ ಕಾರಣ ತಾವು ಕೂಡಲೇ ಕಾರ್ರ ಪ್ರವೃತ್ತರಾಗಿ ಕದ್ದು ಮುಚ್ಚಿ ಪಾಣಾಜೆ ಗ್ರಾಮದಲ್ಲಿ ಚಿರತೆಯನ್ನು ಬಿಟ್ಟ ಕಾಸರಗೋಡಿನ ಡಿ ಎಫ್ ಒ ರವರ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಮನವಿ ಯನ್ನು ಪೊಲೀಸ್ ಅಧಿಕಾರಿಗಳಿಗೆ, ಅರಣ್ಯ ಇಲಾಖೆ ಅಧಿಕಾರಿಗಳಿಗೆ ನೀಡಲಾಯಿತು.
ಗ್ರಾಮಸ್ಥರಾದ ನಾರಾಯಣಪ್ರಕಾಶ್,ನಾರಾಯಣ ಪೂಜಾರಿ,ಉಮ್ಮರ್ ಜನಪ್ರಿಯ, ಬಾಬು ರೈ ಕೋಟೆ, ಕೃಪಾಶಂಕರ ಅರ್ಧಮೂಲೆ,ರವೀಂದ್ರ ಬೈಂಕೋಡು,ಶಂಕರನಾರಾಯಣ ಭಟ್, ಲಕ್ಷ್ಮೀನಾರಾಯಣ್ ರೈ ಚರ್ಚೆಯಲ್ಲಿ ಭಾಗವಹಿಸಿದರು.ಪಂಚಾಯತ್ ಸದಸ್ಯರು, ಪಿಡಿಒ ಆಶಾ,ಬೀಟ್ ಅರಣ್ಯ ಪಾಲಕ ಸುನೀಶ್, ವಿವಿಧ ಇಲಾಖೆ ಅಧಿಕಾರಿಗಳು,ಗ್ರಾಮಸ್ಥರು, ಪಂಚಾಯಿತಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

news-details