ಸುಳ್ಯಪದವುಆಯುಧ ಪೂಜಾ ಸೇವಾ ಸಮಿತಿ,ಗ್ರಾಮ ಪಂಚಾಯತ್ ಬಡಗನ್ನೂರು,ರೋಟರಿ ಕ್ಲಬ್ ಕಣ್ಣಿನ ಆಸ್ಪತ್ರೆ, ಪುತ್ತೂರು, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಮಂಗಳೂರು/ಪುತ್ತೂರು,ಸರ್ವೋದಯ ವಿದ್ಯಾಸಂಸ್ಥೆಗಳು, ಸುಳ್ಯಪದವು, ಪ್ರಾಥಮಿಕ ಆರೋಗ್ಯ ಕೇಂದ್ರ, ಈಶ್ವರಮಂಗಲ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಂಧತ್ವ ವಿಭಾಗ, ಮಂಗಳೂರು
ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್(ರಿ.) ಮಂಗಳೂರು ದ.ಕ ಮಂಗಳಾ ಕಲಾ ಸಾಹಿತ್ಯ ವೇದಿಕೆ, ಪಟ್ಟಿ, ಬಡಗನ್ನೂರು, ಪುತ್ತೂರು
ಯಶಸ್ವಿ ನಾಗರಿಕ ಸೇವಾ ಸಂಘ, ವಾಸುದೇವ ನಗರ ಕಾರ್ಕಳ(ರಿ.)
ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ
'ನೇತ್ರ ವೈದ್ರ ನಡೆ ಗ್ರಾಮದ ಕಡೆ'
ಎಂಬ ಕಾರ್ಯಕ್ರಮದ ಯೋಜನೆಯಡಿಯಲ್ಲಿ
ಉಚಿತ ನೇತ್ರ ತಪಾಸಣಾ ಶಿಬಿರವು ಸುಳ್ಯಪದವು ಸರ್ವೋದಯ ಸಭಾಭವನ ಭಾನುವಾರ ನಡೆಯಿತು.
ಬಡಗನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಲತಾ ದೇವಕಜೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ಆರೋಗ್ಯದಲ್ಲಿ ಕಣ್ಣಿನ ಅರೋಗ್ಯ ಕೂಡ ಮುಖ್ಯ. ಆಯುಧ ಪೂಜಾ ಸೇವಾ ಸಮಿತಿ ಯವರು ಆಯೋಜಿಸಿದ ಶಿಬಿರವನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಹೇಳಿದರು.
ಆಯುಧ ಪೂಜಾ ಸೇವಾ ಸಮಿತಿಯ ಅಧ್ಯಕ್ಷರಾದ ಗಿರೀಶ್ ಕುಮಾರ್ ಕನ್ನಡ್ಕ ಮಾತನಾಡಿ 30ನೇ ವರ್ಷವನ್ನು ವಿಜೃಂಭಣೆಯಿಂದ ಆಚರಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗಿದೆ. ಇವತ್ತಿನ ಶಿಬಿರ ದ ಪ್ರಯೋಜನ ಪಡೆದುಕೊಳ್ಳಿ ಎಂದು ಹೇಳಿದರು.
ಸುಳ್ಯಪದವು ಸರ್ವೋದಯ ವಿದ್ಯಾ ಸಂಸ್ಥೆಗಳ ಸಂಚಾಲಕ ರಾದ ಮಹಾದೇವ ಭಟ್ ಕೊಲ್ಯ ಮಾತನಾಡಿ
ಜನರಿಗೆ ಆರೋಗ್ಯ ಪೂರಕ ಯೋಜನೆ ಇದಾಗಿದೆ ಎಂದು ಹೇಳಿದರು.
ಮಂಗಳೂರು ಪ್ರಸಾದ್ ನೇತ್ರಾಲಯ ಇದರ ಸಾರ್ವಜನಿಕ ಸಂಪರ್ಕ ಅಧಿಕಾರಿ ನಿಶ್ಚಿತ್ ಶೆಟ್ಟಿ ಮಾತನಾಡಿದರು.
ಡಾ. ಶೀತಲಾ,
ಬಡಗನ್ನೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀಮತಿ ಕೆ,ಸದಸ್ಯರಾದ ವೆಂಕಟೇಶ್ ಕೆ ಪದ್ಮನಾಭ ಕೆ,ಸುಳ್ಯಪದವು ಸರ್ವೋದಯ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸುಖೇಶ್ ರೈ ಈಶ್ವರ ಮಂಗಳ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕಿ ದಿವ್ಯಶ್ರೀ, ಆಶಾ ಕಾರ್ಯಕರ್ತರಾದ ಜಾನಕಿ,ವಿಜಯಲಕ್ಷ್ಮಿ, ಸುಜಾತ, ಪ್ರಸಾದ ನೇತ್ರಾಲಯದ ಸಿಬ್ಬಂದಿಗಳು, ಆಯುಧ ಪೂಜಾ ಸೇವಾ ಸಮಿತಿಯ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.
ಆಯುಧ ಪೂಜಾ ಸೇವಾ ಸಮಿತಿಯ ಸದಸ್ಯ ಪ್ರಕಾಶ್ ಎಂ ಸ್ವಾಗತಿಸಿದರು. ಶಿಬಿರದ ಸಂಯೋಜಕ ಮುರಳಿಧರ ಸಿ ಎಚ್ ಪ್ರಸ್ತಾವನೆಗೈದರು ಕಾರ್ಯದರ್ಶಿ ಹರಿರಾಜ್ ಭಂಡಾರಿ ವಂದಿಸಿದರು.
ನೂರಕ್ಕಿಂತ ಮಿಕ್ಕಿ ಶಿಬಿರಾರ್ಥಿಗಳು ಭಾಗವಹಿಸಿ ಪ್ರಯೋಜನವನ್ನು ಪಡೆದುಕೊಂಡರು.