ಈಶ್ವರಮಂಗಲ :ಅರಿಯಡ್ಕ ಗ್ರಾಮದ ಜಾರತ್ತಾರು ಪನೆಕ್ಕಳ ಶ್ರೀ ಮಹಾಮಾರಿಯಮ್ಮ ಶ್ರೀ ಅಮ್ಮನವರ ಹಾಗೂ ಸಹಪರಿವಾರ ದೈವಗಳ ದೈವ ಸ್ಥಾನ ಗಳ ಪುನರ್ ಪ್ರತಿಷ್ಠ ಬ್ರಹ್ಮಕಲಶೋತ್ಸವ ಹಾಗೂ ಮಾರಿಪೂಜೆಯ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ಇತ್ತೀಚಿಗೆ ನಡೆಯಿತು.
ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ಶ್ರೀ ವಾಸುದೇವ ತಂತ್ರಿವರ್ಯರ ಆಶೀರ್ವಾದಗಳೊಂದಿಗೆ ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ಶ್ರೀ ರವೀಶ ತಂತ್ರಿವರ್ಯರ ನೇತೃತ್ವದಲ್ಲಿ ಮಾ.15ರಿಂದ 17ರ ವರೆಗೆ ಪನೆಕ್ಕಳ ಶ್ರೀ ಮಹಾಮಾರಿಯಮ್ಮ ಶ್ರೀ ಅಮ್ಮನವರ ಹಾಗೂ ಸಹಪರಿವಾರ ದೈವಗಳ ಪುನಃಪ್ರತಿಷ್ಠ ಬ್ರಹ್ಮಕಲಶೋತ್ಸವದ ಹಾಗೂ ಮಾರಿಪೂಜೆಯು ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಗೌರವ ಅಧ್ಯಕ್ಷರಾದ ಕಿಶೋರ್ ಶೆಟ್ಟಿ ಅರಿಯಡ್ಕ , ಗೌರವ ಸಲಹೆಗಾರರಾದ ಶ್ರೀರಾಮ್ ಪಕ್ಕಳ ಅರಿಯಡ್ಕ ,ಅಧ್ಯಕ್ಷರಾದ ನಾರಾಯಣ ಪೂಜಾರಿ ಮಡ್ಯಂಗಳ , ಪ್ರದಾನ ಕಾರ್ಯದರ್ಶಿಗಳಾದ ಸಾರ್ಥಕ್ ರೈ ಅರಿಯಡ್ಕ , ಉಪಾಧ್ಯಕ್ಷರಾದ ಹರೀಶ್ ರೈ ಜಾರತ್ತಾರು , ಕೋಶಾಧಿಕಾರಿ ಶರತ್ ಕುಮಾರ್ , ಜೊತೆ ಕಾರ್ಯದರ್ಶಿ ಗಿರೀಶ್ ಜಾರತ್ತಾರು , ಸದಸ್ಯರಾದ ಪ್ರವೀಣ್ ರೈ ಪೆನೆಕ್ಕಳ , ರಾಜೇಶ್ ಎರ್ಕ , ಅಣ್ಣು ಜಾರತ್ತಾರು , ಗುರುವಪ್ಪ ಜಾರತ್ತಾರು , ನಾರಾಯಣ ಜಾರತ್ತಾರು , ರಾಮ , ಭವಿತ್ , ಚಂದ್ರಹಾಸ , ಕೇಶವ , ಅಕ್ಷಯ್ , ಸಂದೀಪ್ , ಕರುಣಾಕರ , ಅವೀಶ್ ಕುಮಾರ್ , ಶಶಿಕುಮಾರ್ , ಸುಮಂತ್ , ಸುಶಾಂತ್ ಉಪಸ್ಥಿತರಿದ್ದರು .
ಮಾ. 4ರಂದು ಬೆಳಿಗ್ಗೆ 10-30ಕ್ಕೆ ಚಪ್ಪರ ಮುಹೂರ್ತ
ಶ್ರೀ ಅಮ್ಮನವರ ದೈವಸ್ಥಾನದಲ್ಲಿ ಚಪ್ಪರ ಮುಹೂರ್ತವು ಹೇಮಾನಾಥ ಶೆಟ್ಟಿಯವರ ನೇತೃತ್ವದಲ್ಲಿ ಮಾ. 4ರಂದು ಬೆಳಿಗ್ಗೆ 10-30ಕ್ಕೆ ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಬಂದು ಶ್ರೀ ದೇವರ ಕೆಲಸ ಕಾರ್ಯದಲ್ಲಿ ಪಾಲ್ಗೊಳ್ಳಬೇಕಾಗಿ ಅರಿಯಡ್ಕ ಶ್ರೀ ಮಹಾಮಾರಿಯಮ್ಮ ಗುಡಿ ಸೇವಾ ಸಮಿತಿ ಪ್ರಕಟಣೆ ತಿಳಿಸಿದೆ