ಸುಳ್ಯಪದವು - ಶಬರಿನಗರ ಸ್ವಾಮಿ ಕೊರಗಜ್ಜ ಸೇವಾ ಸಮಿತಿ ಇದರ ನೇತೃ ತ್ವದಲ್ಲಿ ಸ್ವಾಮಿ ಕೊರಗಜ್ಜ ಮತ್ತು ಗುಳಿಗ ದೈವಗಳ ನೇಮೋತ್ಸವವು ವಿವಿಧ ಕಾರ್ಯಕ್ರಮಗಳೊಂದಿಗೆ ಮಾ. 9ರಿಂದ ಮಾ. 10ರ ವರೆಗೆ ಶಬರಿನಗರ ಕ್ಷೇತ್ರದಲ್ಲಿ ನಡೆಯಲಿದೆ.
ದಿನಾಂಕ : 09-03-2025ನೇ ಆದಿತ್ಯವಾರ ಬೆಳಿಗ್ಗೆ ಗಂಟೆ 7-00ಕ್ಕೆಗಣಪತಿಹೋಮ,ಬೆಳಿಗ್ಗೆ ಗಂಟೆ 8-00 ರಿಂದ : ಭಜನಾ ಕಾರ್ಯಕ್ರಮದ ಉದ್ಘಾಟನೆ : ಶ್ರೀ ಸುಖೇಶ್ ರೈ ಕುತ್ಯಾಳ,( ಮುಖ್ಯ ಶಿಕ್ಷಕರು,ಸವೋದಯ ವಿದ್ಯಾಸಂಸ್ಥೆ ಸುಳ್ಯಪದವು)
ಭಜನಾ ಕಾರ್ಯಕ್ರಮ ನಡೆಸಿಕೊಡುವವರು : ಶ್ರೀ ದಾಮೋದರ ಯಂ. ಮರದಮೂಲೆ (ಸಂಗೀತ ಮತ್ತು ಭಜನಾ ಶಿಕ್ಷಕರು)
ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸುವ ತಂಡಗಳು:
ಬೆಳಿಗ್ಗೆ 8-00ರಿಂದ 8-45ರ ತನಕ : ಸ್ವಾಮಿ ಕೊರಗಜ್ಜ ಬಾಲ ಭಜನಾ ಸಂಘ ಶಬರಿನಗರ, ಸುಳ್ಯಪದವು
ಬೆಳಿಗ್ಗೆ 8-45ರಿಂದ 9-30ರ ತನಕ : ಶ್ರೀ ಹರಿ ನಾಮಾಮೃತ ಮಕ್ಕಳ ಭಜನಾ ತಂಡ ಮರದಮೂಲೆ
ಬೆಳಗ್ಗೆ 9-30ರಿಂದ 10-15ರ ವರೆಗೆ : ಶ್ರೀ ಮಹಾಲಕ್ಷ್ಮೀ ಮಹಿಳಾ ಭಜನಾ ಮಂಡಳಿ, ಸುಳ್ಯಪದವು
ಬೆಳಗ್ಗೆ 10-15ರಿಂದ 11-00ರ ವರೆಗೆ : ಶ್ರೀ ಮಹಾಲಕ್ಷ್ಮೀ ಭಜನಾ ಮಂಡಳಿ ಸುಳ್ಯಪದವು
ಮಧ್ಯಾಹ್ನ 11-00ರಿಂದ 11-45ರ ವರೆಗೆ : ಶ್ರೀ ಅಯ್ಯಪ್ಪ ಭಜನಾ ಮಂದಿರ ಸುಳ್ಯಪದವು
ಮಧ್ಯಾಹ್ನ ಗಂಟೆ 12-00 ರಿಂದ :ಶ್ರೀ ದಾಮೋದರ ಯಂ. ಮರದಮೂಲೆ ಇವರ ಸಾರಥ್ಯದಲ್ಲಿ ಭಕ್ತಿಗಾನ ನಡೆಯಲಿದೆ.
ಮಧ್ಯಾಹ್ನ ಗಂಟೆ 1-15ರಿಂದ ಅನ್ನಸಂತರ್ಪಣೆ
ಸಂಜೆ ಗಂಟೆ 4-00ರಿಂದ
ಶ್ರೀ ಗುಳಿಗ ದೈವದ ನೇಮೋತ್ಸವ
ರಾತ್ರಿ ಗಂಟೆ 7-00 ರಿಂದ ನಾಟಕ
ಫ್ರೆಂಡ್ಸ್ ಕಲಾವಿದೆರ್ ಸುಳ್ಯಪದವು-ಇವರಿಂದ ಶ್ರೀ ಶಶಿಧರ್ ಕೆ. ಬಂಡಿತ್ತಡ್ಕ ವಿರಚಿತ ತುಳು ಸಾಂಸಾರಿಕ ಮತ್ತು ಹಾಸ್ಯಮಯ ನಾಟಕ "ದೇವತೆ" ನಡೆಯಲಿದೆ
ರಾತ್ರಿ ಗಂಟೆ 8-00ಕ್ಕೆ
ಶ್ರೀ ದೈವದ ಭಂಡಾರ ತೆಗೆಯುವುದು
ರಾತ್ರಿ ಗಂಟೆ 8-30ರಿಂದ ಸಾರ್ವಜನಿಕ ಅನ್ನಸಂತರ್ಪಣೆ
ರಾತ್ರಿ ಗಂಟೆ 11-00ರಿಂದ
ಶ್ರೀ ಕೊರಗ ತನಿಯ ದೈವದ ನೇಮೋತ್ಸವ
ದಿನಾಂಕ : 10-03-2025ನೇ ಸೋಮವಾರ
ಪ್ರಾತಃಕಾಲ ಪ್ರಸಾದ ವಿತರಣೆ ನಡೆಯಲಿದೆ.ಇದರ ಪ್ರಯುಕ್ತ ತಾವೆಲ್ಲರೂ ಬಂದು ಈ ದೇವತಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿ, ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ
ಪ್ರಕಟಣೆ ತಿಳಿಸಿದೆ.