ಕೇರಳ ಕರ್ನಾಟದ ಗಡಿ ಭಾಗ, ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕು ಬೆಟ್ಟಂಪಾಡಿ ಗ್ರಾಮದ ಇರ್ದೆಯಲ್ಲಿ ಪೀಜೆ ಗ್ರೂಪ್ ಅವರ ಪೀಜೆ ಪೆಟ್ರೋಲಿಯಂ ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ ನೂತನ ಪೆಟ್ರೋಲ್ ಪಂಪ್ ಮಾ. 16ರಂದು ಲೋಕಾರ್ಪಣೆಗೊಳ್ಳಲಿದೆ.
ಪಡ್ರೆ ಶ್ರೀ ಜಟಾಧಾರಿ ಕ್ಷೇತ್ರದ ಅನುವಂಶಿಕ ಮೊಕ್ತೇಸರ ವಾಸುದೇವ ಭಟ್ ತಡೆಗಲ್ಲು ಬೆಳಗ್ಗೆ 9.30ಕ್ಕೆ ದೀಪ ಪ್ರಜ್ವಲಿಸುವರು. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಪಂಪ್ ಉದ್ಘಾಟಿಸುವರು. ಮಾಜಿ ಶಾಸಕ ಸಂಜೀವ ಮಠಂದೂರು ಕಚೇರಿ ಉದ್ಘಾಟಿಸುವರು. ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಶಶಿ ಕುಮಾರ್ ರೈ ಬಾಲ್ಯೂಟ್ಟು ಸಭಾ ಕಾಠ್ಯಕ್ರಮದ ಅಧ್ಯಕ್ಷತೆ ವಹಿಸುವರು. ಸಂಘದ ಮಾಜಿ ಅಧ್ಯಕ್ಷ ರಂಗನಾಥ ರೈ ಗುತ್ತು, ನಿಡಳ್ಳಿ ಚರ್ಚ್ ಧರ್ಮಗುರು ವಂ. ಫಾದರ್ ಜೇಸನ್ ಲೋಬೋ, ಕೊರಿಂಗಿಲ ತಂಬಳ್ ಹಾಜಿ ಸಯ್ಯದ್ ಹಶೀಮ್ ಬಾಅಲವಿ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಪುತ್ತೂರು ಸ್ಥಾಪಕ ಅರುಣ್ ಕುಮಾರ್ ಪುತ್ತಿಲ, ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತಸರ ವಿನೋದ್ ಕುಮಾರ್ ಬಲ್ಲಾಳ್ ಬೀಡು, ಇರ್ದೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಅಧ್ಯಕ್ಷ ವಿಠಲ ರೈ ಬಾಲ್ಗೊಟ್ಟುಗುತ್ತು,ಪುತ್ತೂರು ಗ್ರಾಮಾಂತರ ಸಂಪ್ಯ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕ ಜಂಬುರಾಜ್ ಮಹಾಜನ್, ಬೆಟ್ಟಂಪಾಡಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಸೌಮ್ಯ, ಬೆಟ್ಟಂಪಾಡಿ ಗ್ರಾಪಂ ಅಧ್ಯಕ್ಷೆ ವಿದ್ಯಾಶ್ರೀ, ಭಾರತೀಯ ತೈಲ ನಿಗಮ ಮಂಗಳೂರು ವಿಭಾಗೀಯ ವ್ಯವಸ್ಥಾಪಕ ಯೋಗೀಶ್ ಪಡಿದಾರ್, ಐಒಸಿಎಲ್ ಮಂಗಳೂರು ರಿಟೇಲ್ ಸೇಲ್ಸ್ ಮ್ಯಾನೇಜರ್ ದುರ್ಗೇಶ್ ತಿವಾರಿ, ಮಾರಾಟ ಅಧಿಕಾರಿ ಕೊರು ದಿನೇಶ್, ಎಂಜಿನಿಯರ್ ಅಕ್ಷಯ್ ಸಿಂಗ್, ಐಒಸಿಎಲ್ ಕಾಸರಗೋಡು (ಕೇರಳ) ಮಾರಾಟ ಅಧಿಕಾರಿ ಅಭಿನವ್ ನಾಥ್, ಅಕ್ರಮ ಸಕ್ರಮ ಪುತ್ತೂರು ಸದಸ್ಯ ಮಹಮ್ಮದ್ ಬಡಗನ್ನೂರು, ದಕ್ಷಿಣ ಕನ್ನಡ ಜಿಲ್ಲಾ ಮಾರಾಟ ಸಂರಕ್ಷಣಾ ಸಮಿತಿ ಅಧ್ಯಕ್ಷ ಅಶೋಕ್ ನಾಯ್ಕ, ರೆಂಜ ಫಾರೂಕ್ ಜುಮಾ ಮಸ್ಟಿದ್ ಅಧ್ಯಕ್ಷ ಅಬ್ಬಾಸ್ ಹಾಜಿ ಮನ್ನಾಪು, ನಿವೃತ್ತ ಅಬಕಾರಿ ಇನ್‌ಸ್ಪೆಕ್ಟರ್ ಮಹಾಲಿಂಗ ನಾಯ್ಕ, ರಾಧಾಕೃಷ್ಣ ಭಟ್ ಪತ್ತಡ್ಕ, ಗಣಪತಿ ಭಟ್ ಪತ್ತಡ್ಕ ಉಪಸ್ಥಿತರಿರುವರು.