ಕಾವು ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರೋತ್ಸವವು ಮಾ. 23ರಿಂದ ಪ್ರಾರಂಭಗೊಳ್ಳಲಿದ್ದು ಇದರ ಪ್ರಯುಕ್ತ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಈಶ್ವರಮಂಗಲ ವಲಯದ ಮಾಡನ್ನೂರು ಗ್ರಾಮದ ಕಾವು ಎ ಮತ್ತು ಕಾವು ಬಿ ಘಟಸಮಿತಿ ವತಿಯಿಂದ ಶ್ರಮದಾನ ಶ್ರೀ ದೇವರ ಸನ್ನಿಧಾನದಲ್ಲಿ ಮಾ. 16ರಂದು ನಡೆಯಿತು.
ತಾಲೂಕು ಮೇಲ್ವಿಚಾರಕರಾದ ಸವಿತಾ ರೈ ನೆಲ್ಲಿತಡ್ಕ , ವಲಯ ಸಂಯೋಜಕರಾದ ಮಹಿತಾ ರೈ ನಡುಬೈಲ್, ಗ್ರಾಮದ ಸೇವಾ ದೀ ಕ್ಷಿತರಾದ ಸುಮಿತ್ರಾ ರೈ, ಘಟಸಮಿತಿ ಅಧ್ಯಕ್ಷರುಗಳಾದ ಶಿವರಾಮ ಪೂಜಾರಿ ಕೆರೆಮಾರು ಮತ್ತು ಅವಿನಾಶ್ ಕೆ ಆಚಾರ್ಯ ಹಾಗೂ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಮಾಡ್ನೂರ್ ಗ್ರಾಮದ ಎಲ್ಲಾ ವಿಕಾಸ ವಾಹಿನಿ ಸ್ವ ಸಹಾಯ ಸಂಘಗಳ ಸದಸ್ಯರು ಶ್ರಮದಾನದಲ್ಲಿ ಪಾಲ್ಗೊಂಡರು.
ಕಾವು ಶ್ರೀ ಪಂಚಲಿಂಗಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ದಿವ್ಯನಾಥ್ ಶೆಟ್ಟಿ, ಮಹೇಶ್ ರೈ ಅಂಕೊತ್ತಿಮಾರ್, ರಘುಚಂದ್ರ ರೈ, ರವೀಂದ್ರ ಪೂಜಾರಿ, ರವಿರಾಜ್, ಮೊದಲಾದವರು ಉಪಸ್ಥಿತರಿದ್ದರು.