ಅರಿಯಡ್ಕ ಪನೆಕ್ಕಳ ಶ್ರೀ ಮಹಾಮಾರಿಯಮ್ಮ ಮತ್ತು ಸಹಪರಿವಾರ ದೈವಗಳ ಪುನ‌ರ್ ಪ್ರತಿಷ್ಠೆ ಧಾರ್ಮಿಕ ಸಭಾ ಕಾರ್ಯಕ್ರಮ ತುಳುನಾಡಿನಆಚರಣೆ,ಸಂಪ್ರದಾಯಗಳನ್ನು ಯುವಜನತೆ ಉಳಿಸಿ ಬೆಳೆಸಬೇಕು:ನಳಿನ್

ಪುತ್ತೂರು

news-details

ತುಳುನಾಡಿನ ವಿಶಿಷ್ಠ ರೀತಿಯಆಚರಣೆ, ಸಂಪ್ರದಾಯ ಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಯುವಜನತೆಗೆ ಇದೆ. ದೈವ ದೇವರ ಜೊತೆ ನಾಗ ದೇವರ ಆರಾಧನೆ ಹೆಚ್ಚು ಮಹತ್ವ ಪೂರ್ಣವಾಗಿದೆ. ದೈವಗಳ ಜೀರ್ಣೋದ್ಧಾರ ಕಾರ್ಯಗಳಲ್ಲಿ ಭಾಗವಹಿಸಲು ಯೋಗ ಭಾಗ್ಯ ಗಳು ಬೇಕು. ನಂಬಿದವರಿಗೆ ದೈವ ಯಾವತ್ತೂ ಕೈ ಬಿಡುವುದಿಲ್ಲ.ಮೂರು ದಶಕಗಳಿಂದ ಜೀರ್ಣ ವ್ಯವಸ್ಥೆ ಯಲ್ಲಿ ಇದ್ದ ದೈವಸ್ಥಾನವನ್ನು ಜೀರ್ಣೋದ್ಧಾರಗೊಳಿಸಿ ಸಮಾಜ ವನ್ನು ಸಂಘಟಿಸಿದ ಎಲ್ಲರಿಗೂ ಅಭಿನಂದನೆಗಳು ಎಂದು ನಿಕಟ ಪೂರ್ವ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಅವರು ಭಾನುವಾರ ಪನೆಕ್ಕಳ ಶ್ರೀ ಮಹಾಮಾರಿಯಮ್ಮ ಮತ್ತು ಸಹಪರಿವಾರ ದೈವಗಳ ದೇವಸ್ಥಾನದ ಪುನ‌ರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ದ ಧಾರ್ಮಿಕ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಮಾತನಾಡಿದರು.
ಕುಂಟಾರು ಮಂಜುನಾಥ್ ಉಡುಪ ಧಾರ್ಮಿಕ ಭಾಷಣ ಮಾಡಿ ಧಾರ್ಮಿಕ ವಿಷಯದ ಜೊತೆ ಸಾಮಾಜಿಕ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಬೇರೆ ಬೇರೆ ರಾಜಕೀಯ ಪಕ್ಷಗಳ ನಾಯಕರು ಭಾಗವಹಿಸಿದ್ದಾರೆ. ಧರ್ಮದ ವಿಚಾರದಲ್ಲಿ ರಾಜಕೀಯ ಮಾಡದೇ ಎಲ್ಲರೂ ಸೇರಿ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯ ವಾಗಿದೆ ಎಂದು ಹೇಳಿದರು.
ಗೌರವ ಸಲಹೆಗಾರರಾದ ತಿಮ್ಮಪ್ಪ ರೈ ಅರಿಯಡ್ಕ, ಶ್ರೀರಾಮ್ ಪಕ್ಕಳ ಅರಿಯಡ್ಕ, ಕಿಶೋರ್ ಶೆಟ್ಟಿ ಮದ್ಯಂಗ ಳ ಅಧ್ಯಕ್ಷ ನಾರಾಯಣ ಪೂಜಾರಿ ಮಡ್ಯಂಗಳ , ಪ್ರಧಾನ ಕಾರ್ಯದರ್ಶಿ ಸಾರ್ಥಕ್ ರೈ ಅರಿಯಡ್ಕ , ಕೋಶಾಧಿಕಾರಿ ಶರತ್ ಕುಮಾರ್ , ಜೊತೆ ಕಾರ್ಯದರ್ಶಿ ಗಿರೀಶ್ ಜಾರತ್ತಾರು , ಪ್ರಧಾನ ಅರ್ಚಕ ನಾರಾಯಣ ಜಾರತ್ತಾರು, ಕುಂಬ್ರ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ವಿನೋದ್ ಶೆಟ್ಟಿ ಅರಿಯಡ್ಕ, ಅರಿಯಡ್ಕ ನಾರಾಯಣ ಶೆಟ್ಟಿ, ಸೀತಾರಾಮ್ ರೈ ಕೇದಂಬಾಡಿಗುತ್ತು,ಸೇವಾ ಸಮಿತಿ ಅಧ್ಯಕ್ಷ ಅಣ್ಣು ಜಾರತ್ತಾರು ಉಪಸ್ಥಿತರಿದ್ದರು. ಕಾರ್ಯಾಧ್ಯಕ್ಷ ಸುರೇಶ ಸಂಪ್ಯ ವಂದಿಸಿದರು. ಉಪಾಧ್ಯಕ್ಷ ಶರತ್ ರೈ ಜಾರತ್ತಾರು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.

news-details