ಸುಳ್ಯ ಪದವಿನಲ್ಲಿ 29ನೇ ವರ್ಷದ ಸಾರ್ವಜನಿಕ ಆಯುಧ ಪೂಜೆ

ಪುತ್ತೂರು

news-details

ಅ. 12: ಸುಳ್ಯ ಪದವಿನಲ್ಲಿ 29ನೇ ವರ್ಷದ  ಸಾರ್ವಜನಿಕ ಆಯುಧ ಪೂಜೆ

ಸುಳ್ಯ ಪದವು  ಆಯುಧ ಪೂಜಾ ಸೇವಾ ಸಮಿತಿ ಇದರ ವತಿಯಿಂದ 29ನೇ ವರ್ಷದ ಸಾರ್ವಜನಿಕ ಆಯುಧ ಪೂಜಾ ಕಾರ್ಯಕ್ರಮ ವು ದಿನಾಂಕ 12-10-2024ನೇ ಶನಿವಾರದಂದು ಊರ ಪರವೂರ ಭಗದ್ಭಕ್ತರ ಸಹಯೋಗದಿಂದ ವಿವಿಧ ಕಾರ್ಯಕ್ರಮಗಳೊಂದಿಗೆ ಬಹಳ ವಿಜೃಂಭಣೆಯಿಂದ ನಡೆಯಲಿದೆ. ಬೆಳಿಗ್ಗೆ ಗಂಟೆ 7.00 ರಿಂದ ಶ್ರೀ ಗಣಪತಿ ಹೋಮ,ಬೆಳಿಗ್ಗೆ ಗಂಟೆ 7.30ರಿಂದ ಸುಳ್ಯಪದವು ಶ್ರೀ ಸ್ವಾಮಿ ಕೊರಗಜ್ಜ ಸೇವಾ ಸಮಿತಿ,ಸುಳ್ಯಪದವು ಶ್ರೀ ಮಹಾಲಕ್ಷ್ಮಿ ಭಜನಾ ಮಂಡಳಿ,ಸುಳ್ಯಪದವು ಶ್ರೀ ಮಹಾಲಕ್ಷ್ಮಿ ಮಹಿಳಾ ಭಜನಾ ಮಂಡಳಿ (ರಿ.),ಸುಳ್ಯಪದವು ಶ್ರೀ ಅಯ್ಯಪ್ಪ ಭಕ್ತವೃಂದ ಭಜನಾ ಕಾರ್ಯಕ್ರಮ ನಡೆಯಲಿದೆ.ಬೆಳಿಗ್ಗೆ ಗಂಟೆ 8.30ರಿಂದ ನಡೆಯುವ ವಿವಿದ ಸ್ಪರ್ಧೆಗಳಿಗೆ ಶ್ರೀ ಶಾಂತಪ್ಪ ಪೂಜಾರಿ ಕಡಮ ಗದ್ದೆ ( ನಿವೃತ್ತ ಕೆ ಎಸ್ ಆರ್ ಟಿ ಸಿ (ಟಿ.ಸಿ ) ಇವರು ಚಾಲನೆ ನೀಡಲಿದ್ದಾರೆ. ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ವಿವಿಧ ವಿಭಾಗಗಳಲ್ಲಿ  ಆಟೋಟ ಸ್ಪರ್ಧೆಗಳು ಮಹಿಳೆಯರಿಗೆ ಹಗ್ಗ ಜಗ್ಗಾಟ, ಪುರುಷರಿಗೆ ಕಬಡ್ಡಿ ಪಂದ್ಯಾಟ ನಡೆಯಲಿದೆ.

ಬೆಳಿಗ್ಗೆ ಗಂಟೆ 10.00ರಿಂದ ವಾಹನ ಪೂಜೆ, ಅಪರಾಹ್ನ ಗಂಟೆ 12.30ರಿಂದ ಭಜನಾ ಮಂಗಲ, ಮಹಾಪೂಜೆ ಪ್ರಸಾದ ವಿತರಣೆ,ಪ್ರಸಾದ ಭೋಜನ ನಡೆಯಲಿದೆ.

ರಾತ್ರಿ ಗಂಟೆ 7.30ರಿಂದ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಸುಳ್ಯಪದವು ಅಯುಧ ಪೂಜಾ ಸಮಿತಿಯ ಅಧ್ಯಕ್ಷರಾದ ಶ್ರೀ ಸುಂದರ್ ಕನ್ನಡ್ಕ ಇವರ ಅಧ್ಯಕ್ಷತೆಯಲ್ಲಿ ಸರ್ವೋದಯ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕರಾದ ಶ್ರೀ ಸತ್ಯ ಶಂಕರ್ ಭಟ್ ವಿಟ್ಲ, ಸಾಯಿ ಗಣೇಶ್ ಬಸ್ಸಿನ ನಿವೃತ್ತ ಬಸ್ ಚಾಲಕ  ರಾದ ಶ್ರೀ ಮಂಜುನಾಥ (ಮಂಜಪ್ಪಣ್ಣ) ಸಂಪ್ಯ ಇವರಿಗೆ ಗೌರವಾರ್ಪಣೆ ನಡೆಯಲಿದೆ. ಮುಖ್ಯ ಅತಿಥಿಗಳಾಗಿ  ಅಡ್ವಕೇಟ್ ಬೇರಿಕೆ ಶ್ರೀ ರಾಮಪ್ರಸಾದ್ ಶೆಟ್ಟಿ ಬೆಂಗಳೂರು, ಮಂಗಳೂರು ಶ್ರೀ ಕಟೀಲು ಲಾಜಿಸ್ಟಿಕ್ ನ ಶ್ರೀ ಜನಾರ್ದನ ಪೂಜಾರಿ ಪದಡ್ಕ ಭಾಗವಹಿಸಲಿದ್ದಾರೆ.

ರಾತ್ರಿ ಗಂಟೆ 7:30ರಿಂದ ರಾಜ್ಯ ಪ್ರಶಸ್ತಿ ಪುರಸ್ಕೃತ ಕುಡ್ಲ ಕಲಾ ಕುಂಭ ಕುಳಾಯಿ ಇವರ ನೇತೃತ್ವದಲ್ಲಿ ನಾಟಕ ಪರಮಾತ್ಮೆ ಪಂಜುರ್ಲಿ ನಡೆಯಲಿದೆ.

ಮಂಗಳೂರು ಶ್ರೀ ಕಟೀಲು ಲಾಜಿಸ್ಟಿಕ್ ನ ಶ್ರೀ ಜನಾರ್ದನ ಪೂಜಾರಿ ಪದಡ್ಕ ಇವರ ಪ್ರಾಯೋಜಕತ್ವದಲ್ಲಿ ಸಿಡಿಮದ್ದು ಪ್ರದರ್ಶನ ನಡೆಯಲಿದೆ ಎಂದು ಆಯುಧ ಪೂಜಾ ಸೇವಾ ಸಮಿತಿಯ ಗೌರವಾಧ್ಯಕ್ಷ ಶ್ರೀ ಜನಾರ್ಧನ್ ಎಂ ಎನ್ ಪಿಲಿಪ್ಪುಡೆ, ಅಧ್ಯಕ್ಷರಾದ ಶ್ರೀ ಸುಂದರ್ ಕನ್ನಡ್ಕ, ಕಾರ್ಯದರ್ಶಿಗಳಾದ ಶ್ರೀ ಅಜಿತ್ ಕಾಯರ್ ಪದವು ತಿಳಿಸಿದ್ದಾರೆ.

news-details