ಪುತ್ತೂರು ತಾಲೂಕು ನೆಟ್ಟಣಿ ಗೆ ಮೂಡ್ನೂರು ಗ್ರಾಮದ ಕರ್ನೂರು ಮದಕ ನಡುಬೈಲು ಎಂಬಲ್ಲಿ ಸುಮಾರು 10 ಮನೆಗಳಿಗೆ ಒಂದೂವರೆ ವರ್ಷದಿಂದ ಕೊಳವೆ ಬಾವಿ ಬತ್ತಿ ಹೋಗಿ ಕುಡಿಯಲು ನೀರಿಲ್ಲದೆ ಪರದಾಡುತ್ತಿದ್ದು ಈ ವಿಷಯವನ್ನು ದ ಕ ಜಿಲ್ಲಾ ರೈತ ಸಂಘ ದವರಿಗೆ ತಿಳಿಸಿದ ಕೂಡಲೇ ಫಲಾನುಭವಿಗಳನ್ನು ಜಿಲ್ಲಾ ರೈತ ಸಂಘದವರು ಕರೆದುಕೊಂಡು ಹೋಗಿ ತಾಲೂಕು ಪಂಚಾಯತ್ ಕಾರ್ಯನಿರ್ವಹನಾಧಿಕಾರಿಯಾವರಾದ ನವೀನ್ ಭಂಡಾರಿಯವರಲ್ಲಿ ಮನವಿ ಯನ್ನು ಕೊಟ್ಟ ಕೂಡಲೇ ಸಂಬಂಧ ಪಟ್ಟವರಿಗೆ ವಿಷಯ ತಿಳಿಸಿ ಕೂಡಲೇ ಕೊಳವೆ ಬಾವಿಯ ವ್ಯವಸ್ಥೆಯನ್ನು ಮಾಡಿಕೊಟ್ಟಿರುತ್ತಾರೆ. ಅಲ್ಲದೆ ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಅಲಂತಡ್ಕ ವಾರ್ಡ್ ಸದಸ್ಯರಾದ ಇಬ್ರಾಹಿಂ ಇವರು ಎಲ್ಲಾ ಮುತುವರ್ಜಿವಹಿಸಿ ನೀರಿನ ಸಮಸ್ಯೆ ಯನ್ನು ಬಗೆ ಹರಿಸಿರುತ್ತಾರೆ.. ಆದ್ದರಿಂದ ಮಾನ್ಯ ತಾಲ್ಲೂಕು ಕಾರ್ಯನಿರ್ವಾಹಣಾಧಿಕಾರಿ ಯವರಿಗೆ ಮತ್ತು ನೆ. ಮು ಗ್ರಾಮ ಪಂಚಾಯತ್ ಅಧ್ಯಕ್ಷರಿಗೂ ಹಾಗೂ ವಾರ್ಡ್ ಸದಸ್ಯರಾದ ಇಬ್ರಾಹಿಂ ಇವರಿಗೂ ದ ಕ ಜಿಲ್ಲಾ ರೈತ ಸಂಘದ ಜಿಲ್ಲಾಧ್ಯಕ್ಷರಾದ ಅಮರನಾಥ ಆಳ್ವ ಕರ್ನೂರು ಗುತ್ತು ಮತ್ತು ರೈತ ಸಂಘದ ಸದಸ್ಯರಿಗೆ ನಡುಬೈಲು ಪರಿಸರದ ನೀರಿನ ಫಲಾನುಭವಿಗಳಿಂದ ಹೃದಯಂತರಾಳದ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ನಿಮ್ಮೂರಿನ ವಿಶೇಷತೆಗಳನ್ನು, ಕಾರ್ಯಕ್ರಮದ ವರದಿಗಳನ್ನು 9980883407 ಕಳಿಸಿ.