ಕಾವು ಪಂಚಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ

ಪುತ್ತೂರು

news-details

ಕಾವು ಪಂಚಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವವು ಮಾ.23 ರಂದು ಮೊದಲ್ಗೊಂಡು ಏ. 1 ರತನಕ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಗಳವರ ನೇತೃತ್ವದಲ್ಲಿ ಶ್ರೀ ದೇವರ ಸನ್ನಿಧಿಯಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿರುವುದು.
ಜಾತ್ರೋತ್ಸವಕ್ಕೆ ಹಾಗೂ ನಂತರ ನನ್ಯದಲ್ಲಿ ನಡೆಯಲಿರುವ ಶ್ರೀ ದಂಡನಾಯಕ ದೈವಗಳ ನೇಮ, ರಾಜನ್ ದೈವದ ನೇಮ ಹಾಗೂ ಶ್ರೀ ದೇವಳದಲ್ಲಿ ನಡೆಯಲಿರುವ ಗುಳಿಗನ ಕೋಲಕ್ಕೂ
ತಾವು ಸರ್ವರೂ ದಯಮಾಡಿಸಿ, ಶ್ರೀಮುಡಿ ಗಂಧ-ಪ್ರಸಾದ ಸ್ವೀಕರಿಸಿ, ಶ್ರೀ ದೇವರ ಹಾಗೂ ದೈವಗಳ ಕೃಪೆಗೆ ಪಾತ್ರರಾಗುವಂತೆ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಕಾರ್ಯಕ್ರಮಗಳು:-
ಮಾ. 23ರಂದು ಬೆಗ್ಗೆ ಗಂ 7ಕ್ಕೆ ಉಗ್ರಾಣ ತುಂಬಿಸುವುದು7.30ಕ್ಕೆ :ಧ್ವಜಾರೋಹಣ, ಬಲಿ ಹೊರಡುವುದು ಲಕ್ಷ್ಮೀಪೂಜೆ, ಕಾಣಿಕೆ ಡಬ್ಬಿ ವಿತರಣೆ
9 ರಿಂದ ಮಹಾ ಮೃತ್ಯುಂಜಯ ಹೋಮ, ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.
ರಾತ್ರಿ ಗಂ 8.ರಿಂದ ಉತ್ಸವ ಬಲಿ ಬಳಿಕ.
7 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಚಿಣ್ಣರ ಕಲರವ ನಡೆಯಲಿದೆ.
9 ರಿಂದ ಗೆಳೆಯರ ಬಳಗ ಕಾವು ಇವರಿಂದ ಜಿ.ಯನ್. ಬಂಗೇರ ವಿರಚಿತ ಬಡವನ ಉಡಲ್‌.
ತುಳು ಸಾಮಾಜಿಕ ನಾಟಕ ನಡೆಯಲಿದೆ.
ಮಾ.24 ರಂದು ಬೆಳಗ್ಗೆ ಗಂ 7.ರಿಂದ ಉತ್ಸವ
ಮಧ್ಯಾಹ್ನ ಗಂಟೆ 12.ಕ್ಕೆ ಮಹಾಪೂಜೆ, ಶ್ರೀ ದೇವರ ಬಲಿ ಬಳಿಕ ಅನ್ನಸಂತರ್ಪಣೆ ನಡೆಯಲಿರುವುದು.
ರಾತ್ರಿ ಗಂ 8 ರಿಂದ ಉತ್ಸವ ಬಲಿ ಬಳಿಕ
ಭಾರತ ಸರ್ಕಾರದ ಜಿಲ್ಲಾ ಪ್ರಶಸ್ತಿ ಪುರಸ್ಕೃತ ತುಡರ್ ಯುವಕ ಮಂಡಲ (ರಿ.) ನನ್ಯ-ಕಾವು ಇದರ 14ನೇ ವಾರ್ಷಿಕೋತ್ಸವ ತುಡರ್ ಹಬ್ಬದ ಪ್ರಯುಕ್ತ ವಿವಿಧ ಕಾರ್ಯಕ್ರಮಗಳು
ಸಂಜೆ ಗಂ 7.00ರಿಂದ: ತುಡರ್ ಕಲಾ ಸಂಘದ ವಿದ್ಯಾರ್ಥಿಗಳಿಂದ ಮೂಕಾಂಬಿಕಾ ಕಲ್ಬರಲ್ ಅಕಾಡೆಮಿ ಪುತ್ತೂರು ಇವರ ಸಹಯೋಗದೊಂದಿಗೆ
ನೃತ್ಯಾರ್ಪಣಾ' ಕಾರ್ಯಕ್ರಮ
8.30ರಿಂದ: ಸಭಾಕಾರ್ಯಕ್ರಮ, ಸನ್ಮಾನ
9.30ರಿಂದ ಸಮಾಜರತ್ನ ಲೀಲಾಧರ ಶೆಟ್ಟಿ ಸಾರಥ್ಯದಲ್ಲಿ ಶರತ್ ಉಚ್ಚಿಲ ನಿರ್ದೇಶನದ ಬಲೆ ತೆಲಿಪಾಲೆ ಖ್ಯಾತಿಯ ಪ್ರಶಸ್ತಿ ವಿಜೇತ ಪ್ರಶಂಸಾ ಕಾಪು ತಂಡದ ಕುಸಲ್ದ ಬಿರ್ಸೆ ಸಂದೀಪ್ ಶೆಟ್ಟಿ ಮಾಣಿಬೆಟ್ಟು ಹಾಗೂ ತೆಲಿಕೆದ ಅರಸೆ ಪ್ರಸನ್ನ ಶೆಟ್ಟಿ ಬೈಲೂರು ಅಭಿನಯದಲ್ಲಿ ಕಾಪು ರಂಗತರಂಗ ಕಲಾವಿದರಿಂದ ಕುಟ್ಯಣ್ಣನ ಕುಟುಂಬ ತುಳು ಸಾಂಸಾರಿಕ ನಾಟಕ ನಡೆಯಲಿದೆ.
ಮಾ. 25 ರಂದು ಬೆಳಗ್ಗೆ ಗಂ 7 ರಿಂದ ಉತ್ಸವ ಬಲಿ
ಮಧ್ಯಾಹ್ನ ಗಂ 12.ಕ್ಕೆ ಮಹಾಪೂಜೆ, ಶ್ರೀ ದೇವರ ಬಲಿ ಬಳಿಕ ಅನ್ನಸಂತರ್ಪಣೆ ನಡೆಯುವುದು.
ರಾತ್ರಿ ಗಂ 7 ರಿಂದ ತಾಯಂಬಕ ಸೇವೆ, ನಡುದೀಪೋತ್ಸವ, ಉತ್ಸವ ಬಲಿ ನಡೆಯಲಿದೆ.
ರಾತ್ರಿ ಗಂ 8.30ರಿಂದ ವಿದುಷಿ ಶ್ರೀಮತಿ ಸುಮಾ ರಾಮ್ ಪ್ರಸಾದ್ ಬೆಂಗಳೂರು ಮತ್ತು ವಿದ್ವಾನ್ ಶ್ರೀ ಸುದರ್ಶನ್ ಎಂ.ಎಲ್. ಭಟ್ ಇವರ ಶಿಷ್ಯ ಶ್ರೀ ಶಾರದಾ ಕಲಾ ಶಾಲೆ ಕುಂಬ್ರ ಶಾಖೆಯ ವಿದುಷಿ ಶ್ರೀಮತಿ ದೀಪ್ತಿ ರವಿಚಂದ್ರ ಇವರ ಶಿಷ್ಯ ವೃಂದದಿಂದ
ನೃತ್ಯ ಸಮೂಹ ನಡೆಯಲಿದೆ.

ಮಾ. 26 ರಂದು ಬೆಳಗ್ಗೆ ಗಂಟೆ 9.30ರಿಂದ ದೊಡ್ಡ ದರ್ಶನ ಬಲಿ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ
ರಾತ್ರಿ ಗಂ 7 ರಿಂದ ಉತ್ಸವ ಬಲಿ 7.30ರಿಂದ
ಅಮ್ಮಿನಡ್ಕ ಶ್ರೀ ದೇವರ ಸವಾರಿ, ಮರಳಿ ಬಂದು ಶಯನ
ಮಾ. 27 ರಂದು ಬೆಳಗ್ಗೆ ಗಂ 7 ಕ್ಕೆ ಬಾಗಿಲು ತೆರೆಯುವುದು 9 ರಿಂದ ನನ್ಯದಲ್ಲಿ ಮುಂಡ್ಯ ಹಾಕಲು ತೆರಳುವುದು.
1೧.30 ರಿಂದ ತುಲಾಭಾರ ಸೇವೆ, ಮಹಾಪೂಜೆ ಅನ್ನಸಂತರ್ಪಣೆ ನಡೆಯಲಿದೆ.
ರಾತ್ರಿ ಗಂ 10 ರಿಂದ ಮಂಜಕೊಟ್ಯದಿಂದ ಶ್ರೀ ದಂಡನಾಯಕ ದೈವಗಳ ಭಂಡಾರ ಬರುವುದು, ಉತ್ಸವ ಬಲಿ, ಅವಧೃತ ಸ್ನಾನ ನಡೆಯಲಿರುವುದು.
ಸಂಜೆ ಗಂಟೆ 5.45ರಿಂದ: ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಕಟೀಲು ಇವರಿಂದ ಶ್ರೀ ದೇವಿ ಮಹಾತ್ಮೆ
ಯಕ್ಷಗಾನ ಬಯಲಾಟ ನಡೆಯಲಿದೆ.

ಮಾ 28 ರಂದು ಬೆಳಗ್ಗೆ ಗಂ 5.ಕ್ಕೆ ಬೆಡಿ ಸೇವೆ
ಸೂರ್ಯೋದಯಕ್ಕೆ : ರಾಜಾಂಗಣದಲ್ಲಿ ಗಂಧಪ್ರಸಾದ ವಿತರಣೆ, ಧ್ವಜಾವರೋಹಣ, ಮಂತ್ರಾಕ್ಷತೆ
ರಾತ್ರಿ ಗಂ9 ಕ್ಕೆ ಶ್ರೀ ದಂಡನಾಯಕ ದೈವಗಳ ದೀವಟಿಗೆ ನಮಸ್ಕಾರ

ಮಾ. 29 ರಂದು ಶ್ರೀ ದಂಡನಾಯಕ ದೈವಗಳ ಭಂಡಾರ ನನೃಕ್ಕೆ ಹೋಗುವುದು
ಮಾ 30 ರಂದು ನನ್ಯಮಾಡದಲ್ಲಿ ಶ್ರೀ ದಂಡನಾಯಕ ದೈವಗಳ ನೇಮ
ಮಾ 31 ರಂದು ಪೂರ್ವಾಹ್ನ ಗಂಟೆ 10 ಕ್ಕೆ ನನ್ಯದಲ್ಲಿ ರಾಜನ್ ದೈವದ ನೇಮ
ಏ. 1 ರಂದು ರಾತ್ರಿ ಗಂ 7.ಕ್ಕೆ ದೇವಸ್ಥಾನದಲ್ಲಿ ಗುಳಿಗನ ಕೋಲ ನಡೆಯಲಿದೆ.


news-details