ಮೂಡುಬಿದಿರೆ: ಇಲ್ಲಿನ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ.)ದ 20 ವಿವಿಧ ಶಿಕ್ಷಣ ಸಂಸ್ಥೆಗಳ ಜೊತೆಗೆ ನೂತನ ಫಾರ್ಮಸಿ ಪದವಿ ಕಾಲೇಜು ಸೇರ್ಪಡೆಗೊಂಡಿದ್ದು ಈ ವರ್ಷದಿಂದಲೇ ಪ್ರಾರಂಭಿಸಲಾಗುತ್ತಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ವಿಜ್ಞಾನ ವಿಷಯದಲ್ಲಿ ಪದವಿಪೂರ್ವ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ 4 ವರ್ಷಗಳ ಪದವಿ ಶಿಕ್ಷಣ ಇದಾಗಿದ್ದು 2024-25ನೇ ಶೈಕ್ಷಣಿಕ ವರ್ಷದಿಂದಲೇ ಕಾರ್ಯಾರಂಭ ಮಾಡಲು ಫಾರ್ಮಸಿ ಕೌನ್ಸಿಲ್ ಆಫ್ ಇಂಡಿಯಾ ಅನುಮತಿ ನೀಡಿದ್ದು, ಇದು ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಬೆಂಗಳೂರಿನಿಂದ ಸಂಯೋಜಿಸಲ್ಪಟ್ಟಿದೆ ಎಂದು ತಿಳಿಸಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ.) ಸಂಸ್ಥೆಯ ಖ್ಯಾತಿಯನ್ನು ಇನ್ನಷ್ಟು ಹೆಚ್ಚಿಸುವ ಈ ಕೋರ್ಸ್ಗಾಗಿ ಈಗಾಗಲೇ ವಿಶೇಷ ಮುತುವರ್ಜಿವಹಿಸಿದ್ದು ಅನುಭವಿ ಶಿಕ್ಷಕರು, ವಿಶೇಷ ತರಗತಿ ಕೊಠಡಿಗಳು, ಆಧುನಿಕ ಪ್ರಯೋಗಾಲಯ, ನವೀನ ಗ್ರಂಥಾಲಯ, ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗಾಗಿ ವಿಶೇಷ ಸವಲತ್ತುಗಳುಳ್ಳ ವಸತಿ ನಿಲಯಗಳನ್ನು ರೂಪಿಸಲಾಗಿದೆ ಎಂದರು.

ನಮ್ಮ ಜೀವನದಲ್ಲಿ ಔಷಧಿ ಕ್ಷೇತ್ರವು ಅತ್ಯಂತ ಮಹತ್ವದ್ದಾಗಿದ್ದು ಆರೋಗ್ಯ ರಕ್ಷಣೆ ಮತ್ತು ಉತ್ತಮ ಆರೈಕೆಯಲ್ಲಿ ಫಾರ್ಮಸಿ ಶಿಕ್ಷಣವು ಅಗತ್ಯವಾಗಿ ಬೇಕಾಗಿದೆ. ಆರೋಗ್ಯ ಸೇವಾ ಕ್ಷೇತ್ರದಲ್ಲಿ ಔಷಧ ತಜ್ಞರು ಬಹುಪ್ರಮುಖವಾಗಿದ್ದು ಔಷಧ ತಯಾರಿಕೆ, ಔಷಧ ಸಂಶೋಧನೆ, ಔಷಧ ವಿತರಣೆ, ರೋಗಿಗಳ ಮಾರ್ಗದರ್ಶನ-ಹೀಗೆ ಹಲವು ಆಯಾಮಗಳಲ್ಲಿ ಅತೀ ಹೆಚ್ಚು ಬೇಡಿಕೆ ಇರುವ ವೃತ್ತಿಪರ ಪದವಿ ಇದಾಗಿದ್ದು ವಿಜ್ಞಾನ ವಿಷಯದಲ್ಲಿ ಪದವಿಪೂರ್ವ ಶಿಕ್ಷಣ ಪೂರೈಸಿದ ವಿದ್ಯಾರ್ಥಿಗಳಿಗೆ ಉದ್ಯೋಗದ ಹೊಸ ಅವಕಾಶಗಳನ್ನು ಒದಗಿಸಿಕೊಡಲಿದೆ. ಈ ವರ್ಷ 60 ವಿದ್ಯಾರ್ಥಿಗಳಿಗೆ ಬಿ-ಫಾರ್ಮ ತರಬೇತಿ ಪಡೆಯುವ ಅವಕಾಶ ದೊರೆತಿದ್ದು ಮೂಡುಬಿದಿರೆಯ ಮತ್ತು ನಾಡಿನ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ.

ಬಿ.ಫಾರ್ಮ ಪಠ್ಯಕ್ರಮದ ಮುಖ್ಯ ಅಂಶಗಳು:

* ಈ ಪದವಿಯು 4 ವರ್ಷಗಳ ಅವಧಿಯ ತರಬೇತಿಯಾಗಿದ್ದು 8 ಸೆಮಿಸ್ಟರ್‌ಗಳಲ್ಲಿ ಪೂರ್ಣಗೊಳ್ಳುತ್ತದೆ.

* ಈ ಪದವಿಯು ಆಧುನಿಕ ಔಷಧಶಾಸ್ತçದ ವಿಷಯಗಳನ್ನೊಳಗೊಂಡಿದ್ದು ವಿದ್ಯಾರ್ಥಿಗಳಿಗೆ ಔಷಧ ತಯಾರಿಕೆ, ಔಷಧಗಳ ಕಾರ್ಯವಿಧಾನ ಮತ್ತು ದೈಹಿಕ-ರಾಸಾಯನಿಕ ಗುಣಲಕ್ಷಣಗಳ ಕುರಿತು ಆಳವಾದ ಜ್ಞಾನವನ್ನು ನೀಡುತ್ತದೆ.

* ಬಿ.ಫಾರ್ಮ ಪದವಿ ಮುಗಿದ ಅನಂತರ ವಿದ್ಯಾರ್ಥಿಗಳು ಔಷಧ ತಯಾರಿಕೆ, ಔಷಧ ವಾಣಿಜ್ಯ, ಔಷಧ ನಿಯಂತ್ರಣ ಸಂಸ್ಥೆಗಳು, ವೈದ್ಯಕೀಯ ಪ್ರತಿನಿಧಿಗಳು, ಔಷಧ ಮಾರ್ಕೆಟಿಂಗ್, ಸಂಶೋಧನಾ ಸಂಸ್ಥೆಗಳು, ಫಾರ್ಮಸಿಗಳು, ರಾಷ್ಟಿçÃಯ ಮತ್ತು ಅಂತಾರಾಷ್ಟಿçÃಯ ಹಿತರಕ್ಷಣಾ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಣೆಗೆ ಅರ್ಹರಾಗುತ್ತಾರೆ.

ಬಿ-ಫಾರ್ಮ ತರಗತಿಗಳಿಗೆ ದಾಖಲಾತಿ ಪ್ರಕ್ರಿಯೆ ಆರಂಭಗೊAಡಿದ್ದು ಆಸಕ್ತರು ಹೆಚ್ಚಿನ ಮಾಹಿತಿಗಾಗಿ 9379525826 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು. ಆಳ್ವಾಸ್ ಫಾರ್ಮಾಸಿ ಕಾಲೇಜಿನ ಪ್ರಾಚರ‍್ಯ ಡಾ ಮಂಜುನಾಥ ಶೆಟ್ಟಿ ಇದ್ದರು.