ಮಂಗಳ ಸಮೂಹ ವಿದ್ಯಾ ಸಂಸ್ಥೆಯಲ್ಲಿ ಸಂಭ್ರಮದ ಪದವಿ ಪ್ರಧಾನ ಸಮಾರಂಭ

ಮಂಗಳೂರು

news-details

ದಿನಾಂಕ 12-4-2025ನೇ ಶನಿವಾರ ಮಂಗಳೂರಿನ ಉರ್ವಸ್ಟೋರಿನಲ್ಲಿರುವ ಡಾ. ಬಿ. ಆರ್ ಅಂಬೇಡ್ಕರ್
ಭವನದಲ್ಲಿ ಮಂಗಳ ಸಮೂಹ ಸಂಸ್ಥೆಯ ಸ್ಥಾಪಕಾದ್ಯಕ್ಷರಾದ ಡಾ. ಗಣಪತಿ ಪಿ. ರವರ ಅಧ್ಯಕ್ಷತೆಯಲ್ಲಿ 2024-25ನೇ
ಸಾಲಿನ ಪದವಿ ಪ್ರಧಾನ ಸಮಾರಂಭವು ವಿಜೃಂಭಣೆಯಿಂದ ನಡೆಯಿತು.

ಮಂಗಳೂರಿನ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಶಸ್ತ್ರಚಿಕಿತ್ಸಕರು ಮತ್ತು ಆರೋಗ್ಯಾಧಿಕಾರಿಯಾದ ಡಾ. ಶಿವಪ್ರಕಾಶ್‌ರವರು
ಮುಖ್ಯ ಅತಿಥಿಯಾಗಿ ಹಾಗೂ ಗೌರವ ಅತಿಥಿಯಾಗಿ ರಾಷ್ಟ್ರೀಯ ಅಲೈಡ್ ಮತ್ತು ಆರೋಗ್ಯ
ರಕ್ಷಣಾ ವೃತ್ತಿಗಳ ಆಯೋಗ ಸದಸ್ಯರು ಅಲ್ಲದೆ ಪದ್ಮಶ್ರೀ ಸಮೂಹ ಸಂಸ್ಥೆ ಬೆಂಗಳೂರಿನ ಅಧ್ಯಕ್ಷರಾದ
ಶ್ರೀಯುತ ಪ್ರೊ. ರಾಜೇಶ್ ಶೆಣೈರವರು ಕೂಡ ಭಾಗವಹಿಸಿದ ಈ ಸಮಾರಂಭದಲ್ಲಿ 289ವಿದ್ಯಾರ್ಥಿಗಳಿಗೆ
ಪದವಿ ಪ್ರಧಾನ ಮಾಡಲಾಯಿತು.

ಈ ಸಂದರ್ಭದಲ್ಲಿ ದಕ್ಷಿಣಕನ್ನಡ ಜಿಲ್ಲಾ ಆರೋಗ್ಯಾಧಿಕಾರಿಯಾದ ಡಾ. ತಿಮ್ಮಯ್ಯರವರು
ಭಾಗವಹಿಸಿ ಮಾತಾಡಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಸ್ವರ್ಣ ಪದಕ ಪಡೆದ ವಿದ್ಯಾರ್ಥಿಗಳಾದ ಧನುಷ್ ಉದಯ್ ನಾಯಕ್ (ಬಿಎಸ್‌ಸಿ ಇಮೇಜಿಂಗ್ ಟೆಕ್ನಾಲಜಿ),
ಸೌಂದರ್ಯ ಎಂ.ಆರ್.(ಫಿಸಿಯೋತೆರಪಿ), ಚಂದನ ಎಂ.ಪಿ (ಬಿಎಸ್‌ಸಿ ನರ್ಸಿಂಗ್),
ಪ್ರಿಯಾ ಎಸ್, ಎಂ(ಜನರಲ್ ನರ್ಸಿಂಗ್), ಸೀಮಾ ಚೇತ್ರಿ (ಓಫ್ತಾಲ್ಮಿಕ್ ಟೆಕ್ನಾಲಜಿ)ಯವರಿಗೆ
ಶ್ರೀಯುತ ಪ್ರೊ. ರಾಜೇಶ್ ಶೆಣೈಯವರು ಪದಕ ನೀಡಿ ಗೌರವಿಸಿ ಶುಭ ಹಾರೈಸಿದರು.

ಈ ಸಂಧರ್ಭದಲ್ಲಿ ಪಂಚಮಿ ಬಿ. ಸುವರ್ಣ(ಅನಸ್ತೇಶಿಯ ಟೆಕ್ನಾಲಜಿ), ಸಂತೋಷ್ (ಓಟಿ. ಟೆಕ್ನಾಲಜಿ),
ಪ್ರೇಮನಾಥ ಆರ್. (ಫಿಸಿಯೋತೆರಪಿ) ಇವರನ್ನು ನಿರ್ಗಮಿಸುತ್ತಿರುವ ಅತ್ಯುತ್ತಮ ವಿಧ್ಯಾರ್ಥಿಗಳೆಂದು ಗೌರವಿಸಲಾಯಿತು.

ಈ ಸಂಧರ್ಭದಲ್ಲಿ ಫಿಸಿಯೋತೆರಪಿ ಪ್ರಿನ್ಸಿಪಾಲ್ ಅಲ್ಲದೆ ಕರ್ನಾಟಕ ಸ್ಟೇಟ್ ಅಲೈಡ್ ಹೆಲ್ತ್ ಕೇರ್ ಕೌನ್ಸಿಲ್‌ನ
ಸದಸ್ಯರಾದ ಡಾ. ಭರತ್ ಕೆ.ಹೆಚ್,ನಿವೃತ್ತ ಪ್ರಿನ್ಸಿಪಾಲರಾದ ಡಾ. ಮಾರಿ ಎಲಿಜಬೆತ್ ಪಿಂಟೋ,
ಶ್ರೀಯುತ ಪ್ರೊ.ರಾಜೇಶ್ ಶೆಣೈರವರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು.

ಸಂಸ್ಥೆಯ ಉಪಾದ್ಯಕ್ಷರಾದ ಡಾ. ಅನಿತಾ ಜಿ ಭಟ್, ಕಾಲೇಜಿನ ಡೀನ್‌ರಾದ ಪ್ರತಿಜ್ಞಾ ಸುಹಾಸಿನಿ ಜಿ. ಆರ್,
ಮತ್ತು ಉಪ ಪ್ರಾಂಶುಪಾಲರಾದ ಶ್ರೀಮತಿ ಗೀತಾಲಕ್ಷಿö್ಮ, ನರ್ಸಿಂಗ್ ನ ಪ್ರಾಂಶುಪಾಲ ಪ್ರೊ. ಸುಬ್ರಹ್ಮಣ್ಯ ನಾಯಕ್
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರೊಫೆಸರ್ ಶ್ರೀಮತಿ ಶೃತಿ ಮತ್ತು ಪ್ರೊಫೆಸರ್ ಕಾರ್ತಿಕ್ ಕಾಮತ್ ಕಾರ್ಯಕ್ರಮವನ್ನು ನಿರ್ವಹಿಸಿದರು.

news-details