ಉಡುಪಿ: ಉತ್ತರ ಹಾಗೂ ದಕ್ಷಿಣ ಭಾರತದಾದ್ಯಂತ ಹೆಸರು ಮಾಡಿರುವ ಓಷಿಯನ್ ಪರ್ಲ್ ಹೋಟೆಲ್‌ಎರಡನೇ ಶಾಖೆ ದಿ ಓಷಿಯನ್ ಪರ್ಲ್ ಟೈಮ್ ಸ್ಕ್ವೇರ್ ಉಡುಪಿ-ಮಣಿಪಾಲ ರಸ್ತೆಯಕ ಲ್ಸಂಕದಲ್ಲಿರುವ ಮಾಂಡವಿ ಟೈಮ್ ಸ್ಕ್ವೇರ್ ಮಾಲ್‌ನಲ್ಲಿಬುಧವಾರ ಉದ್ಘಾಟನೆಗೊಂಡಿತು.

ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಕುಕ್ಕೆ ಸುಬ್ರಹ್ಮಣ ಮಠಾಧೀಶ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿಉಪಸ್ಥಿತರಿದ್ದರು

ಉದ್ಘಾಟನಾ ಮಾಡಿ ಮಾತನಾಡಿ ಪೇಜಾವರಶ್ರೀಗಳು ಮುಂದೆ ಮಾತನಾಡುತ್ತಾ ದೇಗುಲಗಳ ನಗರಿ ಎಂದೇ ಖ್ಯಾತಿ ಹೊಂದಿರುವಉಡುಪಿಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಈ ಹೋಟೆಲ್‌ಉಡುಪಿಯಜನತೆಗೆ ಸದುಪಯೋಗ ವಾಗಲಿದೆ.ಕೃಷ್ಣದರ್ಶನಕ್ಕೆ ಬರುವ ಭಕ್ತದಿಗಳಿಗೂ ಇದರಿಂದ ಸಹಾಯ ವಾಗಲಿದೆ ಎಂದರು. ಟೈಮ್ಸ್ ಸ್ಟೈರ್ ಮಾಲ್ ಮಾಲೀಕ ಡಾ.ಜೆರ್ರಿ ವಿನ್ಸೆಂಟ್‌ಡಯಾಸ್,ಮತ್ತುಜಯರಾಮ ಬನಾನಾ ಅವರನ್ನು ಶಾಲು ಹೊದಿಸಿ ಫಲಪುಷ್ಪ ನೀಡಿ ಗೌರವಿಸಿದರು.

ಕುಕ್ಕೆ ಸುಬ್ರಹ್ಮಣ ಮಠಾಧೀಶ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಆಶೀರ್ವಚನ ಭಾಷಣದಲ್ಲಿ ದೇಶದಲ್ಲಿ ಉಡುಪಿ ಹೋಟೆಲ್‌ ಅದರ ಊಟ ಉಪಚಾರಕ್ಕೆ ಅತ್ಯಂತ ಪ್ರಸಿದ್ಧ ವಾಗಿದೆ.ಇಂತಹ ಹೋಟೆಲ್‌ ಉದ್ಘಾಟನೆ ಮಾಡಲು ತುಂಬಾ ಖುಷಿ ಆಗ್ತಾ ಇದೆ.ಜಯರಾಮ ಬನನಾ ಅವರು ತುಂಬಾ ವರ್ಷಗಳ ಹಿಂದೆ ದೆಹಲಿ ಹೋಗಿ ಇಂದು ಹಲವು ಹೋಟೆಲ್ ಗಳ ಸಾಮ್ರಾಜ್ಯ ನಿರ್ಮಿಸಿ ಯಶಸ್ವಿ ಉದ್ಯಮಿ ಆಗಿದ್ದಾರೆ.ಇಂತಹ ಹಾಲ್‌ ಉಡುಪಿಯಲ್ಲಿ ಎಲ್ಲಿಯೂ ಇಲ್ಲ.ಹೋಟೆಲ್‌ ಕೂಡಾ ಇಲ್ಲ . ಜಯರಾಮ ಬನಾನಾ ಮತ್ತು ಮತ್ತು ಪ್ರೇಮ ದಂಪತಿಗಳ ಪರಿಶ್ರಮದಿಂದ ಉಡುಪಿಯಲ್ಲಿಉದ್ಘಾಟನೆಆಗಿದೆ ಈ ಉದ್ಯಮದಲ್ಲಿತುಂಬಾ ಯಶಸ್ವಿ ಆಗಲಿ ಎಂದು ಆಶೀರ್ವದಿಸಿದರು ಜಯರಾಮ ಬನಾನಾ ಅವರುತಮ್ಮಚಿಕ್ಕ ವಯಸ್ಸಿನಲ್ಲೇ ಊರನ್ನು ತೊರೆದು ಇಂದುಇಷ್ಟುದೊಡ್ಡ ಸಾಮ್ರಾಜ್ಯವನ್ನು ಕಟ್ಟಿ ಸಾವಿರಕ್ಕಿಂತ ಹೆಚ್ಚು ಮಂದಿಗೆ ಉದ್ಯೋಗ ನೀಡಿದ್ದಾರೆ. ಬನಾನಾ ದಂಪತಿಗಳ ಶ್ರಮ ನಿಜಕ್ಕೂ ಶ್ಲಾಘನೀಯಎಂದರು.ಉಡುಪಿಯದೇಗುಲ ಗಳ ನಗರದಲ್ಲಿ ಹೋಟೆಲ್ ನಿರ್ಮಿಸಿ ಸರ್ವರಿಗೂ ಉಪಯೋಗವಾಗುವಂತೆ ಮಾಡಿದ್ದಾರೆ.ಅವರಿಗೆ ಶ್ರೀ ಕೃಷ್ಣ ದೇವರ ಅನುಗ್ರಹ ವಿರಲಿ ಎಂದು ಆಶೀರ್ವದಿಸಿದರು.

ಉಡುಪಿ ಕೆಥೋಲಿಕ್ ಸಭಾ ಪ್ರಾಂತ್ಯದ ಬಿಷಪ್‌ ಜೆರಾಲ್ಡ್ ಐಸಾಕ್ ಲೋಬೋ, ಮತ್ತು ಮುಸ್ಲಿಂಧರ್ಮದ ಗುರುಗಳು ಆಗಮಿಸಿ ಶುಭಸಂಶನೆಗೈದರು.

ಇದೆ ಸಂದರ್ಭದಲ್ಲಿ ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ಉಡುಪಿ ಶಾಸಕ ಯಶಪಾಲ್ ಸುವರ್ಣ, ಕಾರ್ಕಳ ಶಾಸಕ ಸುನಿಲ್ ಕುಮಾರ್, ರಾಧಾ ಸಮೂಹ ಸಂಸ್ಥೆಗಳ ಡಾ.ಮನೋಹರ್ ಶೆಟ್ಟಿ, ಹಾಂಗ್ಯೂಐಸ್‌ಕ್ರೀಮ್ ಸಂಸ್ಥೆಯ ಪ್ರದೀಪ್ ಪೈ ದಂಪತಿ,ಉದಯವಾಣಿ ಸಮೂಹ ಸಂಸ್ಥೆಗಳ ಸತೀಶ್ ಪೈ, ಸಿಇಒ ವಿನೋದ್‌ಕುಮಾರ್, ಮಾಜಿ ಮಂತ್ರಿ ವಿನಯಕುಮಾರ್ ಸೊರಕೆ, ಮಾಜಿ ಶಾಸಕ ರಘುಪತಿ ಭಟ್ ,ಓ ಷಿಯನ್ ಪರ್ಲ್ ಹೋಟೆಲ್ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಜಯರಾಮ್ ಬನನಾ, ರೋಷನ್ ಬನನಾ ಉಪಸ್ಥಿತರಿದ್ದರು.

ಉಡುಪಿ ಜಿಲ್ಲೆಯ ಪೊಲೀಸ್ ಅಧಿಕಾರಿಗಳಾದ, ಪಿ.ಎ.ಹೆಗ್ಡೆ, ವೇಲೆಂಟೇನ್‌ಡಿಸೋಜಾ, ಆಗಮಿಸಿ ಶುಭ ಹಾರೈಸಿದರು.

ಇದೆ ಸಂದರ್ಭದಲ್ಲಿ ಉಭಯ ಸ್ವಾಮೀಜಿಯವರು ಹೋಟೆಲ್ ಮಾಲಕರನ್ನು ಮತ್ತು ಕೆಲಸಗಾರರನ್ನು ಸನ್ಮಾನಿಸಿದರು. ಓಷಿಯನ್ ಪರ್ಲ್ ಹೋಟೆಲ್ ಉಪಾಧ್ಯಕ್ಷ ಗಿರೀಶ್,ಅತಿಥಿಗಳನ್ನು ಸ್ವಾಗತಿಸಿದರು.