ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಆಡಳಿತ ಮಂಡಳಿಯ ನೂತನ

ಕೊಠಡಿಯ ಉದ್ಘಾಟನೆ,

ಕಶೆಕೋಡಿ ಸೂರ್ಯನಾರಾಯಣ ಭಟ್ ಅವರ ನೇತೃತ್ವದಲ್ಲಿ ಧಾರ್ಮಿಕ

ಕಾರ್ಯಕ್ರಮಗಳು,

ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಅವರಿಂದ ದೀಪ ಪ್ರಜ್ವಲನೆ ಮಾಡುವುದರ ಮೂಲಕ ಉದ್ಘಾಟಿಸಿದರು.

1965 ರಲ್ಲಿ ಆರಂಭಗೊಂಡ ಸುಮಾರು ಐವತ್ತೊಂಬತ್ತು ವರ್ಷಗಳಿಂದ

ಸಂಸ್ಕಾರಯುತ ಶಿಕ್ಷಣವನ್ನು ನೀಡುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿ

ವಿವೇಕಾನಂದ ಪದವಿಪೂರ್ವ ಕಾಲೇಜು ಗುರುತಿಸಿಕೊಂಡಿದೆ. ಇಂದು

ವಿವೇಕಾನಂದ ಪದವಿಪೂರ್ವ ಕಾಲೇಜು ರಾಜ್ಯದ ಪ್ರತಿಷ್ಠಿತ ಪದವಿಪೂರ್ವ

ಕಾಲೇಜುಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಇಂತಹ ಶಿಕ್ಷಣ ಸಂಸ್ಥೆಗೆ ಇದೀಗ

ಆಧುನಿಕ ಸೌಲಭ್ಯಗಳೊಂದಿಗೆ ಸುಸಜ್ಜಿತ ಆಡಳಿತ ಮಂಡಳಿಯ

ಕೊಠಡಿಯೊಂದು ನಿರ್ಮಾಣಗೊಂಡಿದೆ. ಇದು ಉತ್ತಮ ಆಡಳಿತಾತ್ಮಕ

ವ್ಯವಸ್ಥೆಗೆ ಸಹಕಾರಿಯಾಗಲಿ ಹಾಗೂ ಈ ಮೂಲಕ ವಿದ್ಯಾಥಿರ್ಗಳಿಗೆ ವ್ಯಕ್ತಿ

ನಿರ್ಮಾಣದೊಂದಿಗೆ ರಾಷ್ಟ್ರ ನಿರ್ಮಾಣ ಎಂಬ ಧ್ಯೇಯದೊಂದಿಗೆ ವಿವೇಕಾನಂದ

ಪದವಿಪೂರ್ವ ಕಾಲೇಜು ಅತ್ಯುತ್ತಮ ಶಿಕ್ಷಣ ನೀಡುವಂತಾಗಲಿ ಎಂದು

ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ.

ಕಲ್ಲಡ್ಕ ಪ್ರಭಾಕರ್ ಭಟ್ ಹಾರೈಸಿದರು.

ಪುತ್ತೂರಿನ ನೆಹರು ನಗರದ

ವಿವೇಕಾನಂದ ಆವರಣದಲ್ಲಿರುವ ವಿವೇಕಾನಂದ ವಿದ್ಯಾವರ್ಧಕ ಸಂಘದ

ಮೊತ್ತಮೊದಲ ವಿದ್ಯಾಸಂಸ್ಥೆಯಾದ ವಿವೇಕಾನಂದ ಪದವಿಪೂರ್ವ ಕಾಲೇಜಿನ

ಆಡಳಿತ ಮಂಡಳಿಯ ನೂತನ ಕೊಠಡಿಯನ್ನು ಉದ್ಘಾಟಿಸಿ ಅವರು

ಮಾತನಾಡಿದರು.

ಆಡಳಿತ ಮಂಡಳಿಯ ನೂತನ ಕೊಠಡಿಯ ಉದ್ಘಾಟನೆಯ ಹಿನ್ನೆಲೆಯಲ್ಲಿ

ಕಶೆಕೋಡಿ ಸೂರ್ಯನಾರಾಯಣ ಭಟ್ ಅವರ ನೇತೃತ್ವದಲ್ಲಿ ಬೆಳಗ್ಗೆ

ಅರುಣ್ ಶಾತಡ್ಕ ಅವರು ಧಾರ್ಮಿಕ ಕಾರ್ಯಕ್ರಮಗಳನ್ನು

ನೆರವೇರಿಸಿದರು. ನಂತರ ದೀಪ ಪ್ರಜ್ವಲನೆಯ ಮೂಲಕ ಡಾ. ಕಲ್ಲಡ್ಕ

ಪ್ರಭಾಕರ್ ಭಟ್ ಅವರು ಆಡಳಿತ ಮಂಡಳಿಯ ನೂತನ

ಕೊಠಡಿಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವಿವೇಕಾನಂದ

ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷರಾದ ಸತೀಶ್ ರಾವ್, ಕಾರ್ಯದರ್ಶಿಗಳಾದ

ಡಾ. ಕೆ. ಎಂ ಕೃಷ್ಣ ಭಟ್, ಕೋಶಾಧಿಕಾರಿಗಳಾದ ಅಚ್ಚುತ ನಾಯಕ್,

ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ

ರವೀಂದ್ರ ಪಿ., ಸಂಚಾಲಕರಾದ ಎಂ ಗೋಪಾಲಕೃಷ್ಣ ಭಟ್,

ಕೋಶಾಧಿಕಾರಿಗಳಾದ ಸಚಿನ್ ಶೆಣೈ , ವಿವೇಕಾನಂದ ವಸತಿ ನಿಲಯಗಳ

ಅಧ್ಯಕ್ಷರಾದ ರಮೇಶ್ ಪ್ರಭು, ವಿವೇಕಾನಂದ ಪದವಿಪೂರ್ವ ಕಾಲೇಜಿನ

ಆಡಳಿತ ಮಂಡಳಿಯ ನಿರ್ದೇಶಕರು, ಪ್ರಾಂಶುಪಾಲರಾದ ಮಹೇಶ್

ನಿಟಿಲಾಪುರ, ಉಪಪ್ರಾಂಶುಪಾಲರಾದ ದೇವಿ ಚರಣ್ ರೈ ಎಂ., ವಿವೇಕಾನಂದ

ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿಗಳಾದ ಭಾಸ್ಕರ್, ವಿವೇಕಾನಂದ

ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಹಾಗೂ ಉಪನ್ಯಾಸಕೇತರ

ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉದ್ಘಾಟನೆಯ

ನಂತರ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಕಲ್ಲಡ್ಕ

ಪ್ರಭಾಕರ್ ಭಟ್ ಅವರ ಅಧ್ಯಕ್ಷತೆಯಲ್ಲಿ ಪದವಿಪೂರ್ವ ಕಾಲೇಜಿನ ಆಡಳಿತ

ಮಂಡಳಿಯ ಸಭೆ ನಡೆಯಿತು.