ಮೈಸೂರಿನ ರಾಜ ಯದುವೀರ್‌ ಒಡೆಯರ್,ತ್ರಿಷಿಕಾಕುಮಾರಿ ದೇವಿಗೆ ಎರಡನೇ ಮಗು ಜನನ

ರಾಜ್ಯ

news-details

<p>ಮೈಸೂರು ಅರಮನೆಯಲ್ಲಿ ರಾಜವಂಶಸ್ಥರ ಕುಟುಂಬದಲ್ಲಿ ಒಂದು ಕಡೆ ಎರಡನೇ ಮಗು ಜನಿಸಿರುವ ಖುಷಿ ಮನೆ ಮಾಡಿದ್ದು ಇನ್ನು ಎರಡು ದಿನಗಳ ಕಾಲ  ನವರಾತ್ರಿ ಹಾಗೂ ವಿಜಯದಶಮಿ ಧಾರ್ಮಿಕ ವಿಧಿವಿಧಾನಗಳನ್ನು ರಾಜವಂಶಸ್ಥರಲ್ಲಿ ಯದುವೀರ್‌ ಒಡೆಯರ್ ಮುನ್ನಡೆಸಲಿದ್ದಾರೆ ಎಂಬ ಮಾತು ಬಲ್ಲ ಮೂಲ ಗಳಿಂದ ತಿಳಿದು ಬಂದಿದೆ.<br />
 ಮೈಸೂರು ಯದುವಂಶದಲ್ಲಿ ಹಿಂದೆಲ್ಲಾ ಹಲವು ಬಾರಿ ಮಕ್ಕಳು ಹುಟ್ಟಿದ್ದರೂ ನವರಾತ್ರಿ ವೇಳೆ ಜನನ ಆಗಿರಲಿಲ್ಲ. ಮಗು ಜನಿಸಿದಾಗ ಇಂತಹ ಸನ್ನಿವೇಶ ಎದುರಾಗಿರುವುದು ಇದೇ ಮೊದಲ ಬಾರಿ. ಈ ಸಂಬಂಧ ಮೈಸೂರು ರಾಜವಂಶಸ್ಥರ ಪುರೋಹಿತರು, ಆಗಮಿಕರು ಈ ಕುರಿತು ಚರ್ಚಿಸುತ್ತಿದ್ದು, ಧಾರ್ಮಿಕ ಚಟುವಟಿಕೆಗಳ ಕುರಿತು ನಿರ್ಧರಿಸಿದ್ದಾರೆ.<br />
ಯದುವೀರ್‌ ಅವರು ಕಂಕಣಧಾರಣೆ ಮಾಡಿರುವುದರಿಂದ ಅವರು ಎಲ್ಲಾ ಧಾರ್ಮಿಕ ಚಟುವಟಿಕೆಗಳು, ದಸರಾ ಕಾರ್ಯಕ್ರಮಗಳಲ್ಲಿ ಭಾಗಿಯಾಗಬಹುದು. ಕಂಕಣ ಅವರಿಗೆ ಈ ಎಲ್ಲಾ ಅಶೌಚಗಳಿಂದ ದೂರ ಮಾಡಲಿದೆ. ಯಾವುದೇ ಅಡ್ಡಿಯೂ ಅಶೌಚಗಳಿಂದ ದೂರ ಮಾಡಲಿದೆ. ಯಾವುದೇ ಅಡ್ಡಿಯೂ ಇದಕ್ಕೆ ಆಗದು. ಉಳಿದ ನಾಲ್ವರಿಗೆ ಅಶೌಚ ಬರಲಿದೆ. ಅವರಲ್ಲಿ ತ್ರಿಷಿಕಾ, ಆದ್ಯವೀರ್‌, ನವಜಾತ ಶಿಶು ಹಾಗೂ ಪ್ರಮೋದಾದೇವಿ ಒಡೆಯರ್‌ ಅವರು ಆಸ್ಪತ್ರೆಯಲ್ಲಿದ್ದಾರೆ. ದಸರಾ ಮುಗಿದ ನಂತರವೇ ಭಾನುವಾರ ಅವರು ಅರಮನೆಗೆ ಆಗಮಿಸಿದರೆ ಸಮಸ್ಯೆಯಾಗದು ಎನ್ನುವ ಸಲಹೆಯನ್ನು ಪುರೋಹಿತರು ನೀಡಿದ್ದಾರೆ. ಕುಟುಂಬದ ಇತರರ ಉಪಸ್ಥಿತಿಯಲ್ಲಿ ಧಾರ್ಮಿಕ ಚಟುವಟಿಕೆಗಳನ್ನು ಯದುವೀರ್‌ ಮುಂದುವರೆಸಬಹುದು. ಇದಕ್ಕೆ ಬೇಕಾದ ಸ್ವಚೃತೆ ಹಾಗೂ ಧಾರ್ಮಿಕ ಚಟುವಟಿಕೆಗಳನ್ನು ಪುರೋಹಿತರು ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.<br />
ಅರಮನೆಯ ಮೂಲಗಳ ಪ್ರಕಾರ, ಈಗಾಗಲೇ ಯದುವೀರ್‌, ಅವರ ಪತ್ನಿ ತ್ರಿಷಿಕಾಕುಮಾರಿ ದೇವಿ, ಪುತ್ರ ಆದ್ಯವೀರ್‌ ಒಡೆಯರ್‌ ಹಾಗೂ ತಾಯಿ ಪ್ರಮೋದಾ ದೇವಿ ಅವರಿಗೆ ಹತ್ತು ದಿನದ ಅಶೌಚ ಇರಲಿದೆ. ಇದು ಅಶೌಚಕ್ಕೆ ಕಾರಣವಾಗಲಿದ್ದು. ಧಾರ್ಮಿಕ ವಿಧಿ ವಿಧಾನಗಳಿಗೆ ಅಡ್ಡಿಯಾಗಲಿದೆ. ಅರಮನೆಯಲ್ಲಿ ವಿಧಿ ವಿಧಾನಗಳನ್ನು ಮಾಡಲು ಅಡ್ಡಿಯಾಗಬಹುದು. ಅದರಲ್ಲೂ ಮೈಸೂರು ರಾಜವಂಶಸ್ಥರು ಧಾರ್ಮಿಕ ನಂಬಿಕೆ ಉಳ್ಳವರು. ಶ್ರದ್ದೆಯಿಂದ ಪಾಲಿಸುವವರು. ಈ ಕಾರಣದಿಂದ ಯದುವೀರ್‌ ಅವರು ಪುರೋಹಿತರೊಂದಿಗೆ ಚರ್ಚಿಸಿದ್ದಾರೆ ಎನ್ನಲಾಗಿದೆ.</p>

news-details